ಗಳಿಂದ ಕೂಡಿದ್ದು, ಸಂಚಾರ ನಡೆಸಲು ವಾಹನ ಸವಾ ರರು ಪರದಾಡುತ್ತಿದ್ದಾರೆ.
Advertisement
ಸುಮಾರು ಒಂದು ವರ್ಷದಿಂದ ರಸ್ತೆ ಸಂಚಾರಕ್ಕೆ ಅಯೋಗ್ಯ ವಾಗಿದೆ. ಕದ್ರಿ ಕಂಬಳದಿಂದ ರಸ್ತೆ ತಿರುವು ಜಾಗದಲ್ಲಿ ಬೃಹತ್ ಹೊಂಡ ಗುಂಡುಗಳು ನಿರ್ಮಾಣವಾಗಿವೆ.
ಈ ರಸ್ತೆಯ ಸುತ್ತಮುತ್ತ ಹಲವಾರು ಮನೆಗಳಿದ್ದು, ಅವುಗಳಲ್ಲಿರುವ ಹಿರಿಯ ನಾಗರಿಕರು, ಮಕ್ಕಳು ಇದೇ ರಸ್ತೆಯನ್ನು ಬಳಸಬೇಕು. ಹಿರಿಯ ನಾಗರಿಕರಿಗೆ ಇಲ್ಲಿ ನಡೆದಾಡುವುದೇ ಪ್ರಯಾಸದಾಯಕ. ಮಕ್ಕಳು ಶಾಲೆಗೆ ತೆರಳುವ ವೇಳೆ ಮುಖ ಮುಚ್ಚಿ ತೆರಳಬೇಕಾದ ಅನಿವಾರ್ಯವಿದೆ.
Related Articles
ಕೆಲವು ಸಮಯದ ಹಿಂದೆ ರಸ್ತೆ ಬದಿಯಲ್ಲಿ ಫುಟ್ಪಾತ್ ನಿರ್ಮಿಸುವ ಕೆಲಸವಾಗುತ್ತಿದೆ. ಆ ಕಾರ್ಯ ಪೂರ್ಣಗೊಂಡಿಲ್ಲ. ಪಾದಚಾರಿಗಳಿಗೆ ನಡೆದಾಡಲು ಸರಿಯಾದ ವ್ಯವಸ್ಥೆ ಇಲ್ಲವಾಗಿದ್ದು, ಅಪಾಯ ಎದುರಿಸಿಕೊಂಡು ರಸ್ತೆಯಲ್ಲೇ ಓಡಾಡುತ್ತಿದ್ದಾರೆ.
Advertisement