Advertisement

ವೇದ, ದೇವರನ್ನು ಗೌರವಿಸುವವನೇ ಹಿಂದೂ

06:34 AM May 06, 2019 | Team Udayavani |

ಬೆಂಗಳೂರು: ವೇದಗಳಲ್ಲಿ ಶ್ರದ್ಧೆ ಹಾಗೂ ದೇವರನ್ನು ಸಮಾನವಾಗಿ ಗೌರವಿಸುವವನೇ ನಿಜವಾದ ಹಿಂದೂ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಧನಂಜಯ ಪ್ಯಾಲೇಸ್‌ನಲ್ಲಿ ಭಾನುವಾರ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದು ರಾಷ್ಟ್ರದ ನಿರ್ಮಾಣಕ್ಕಾಗಿ ಬೆಂಗಳೂರು ಜಿಲ್ಲಾ ಮಟ್ಟದ ಹಿಂದು ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವೇದಕಾಲದಲ್ಲಿ ಯಾವುದೇ ಜಾತಿ ಮತ್ತು ಅಸ್ಪೃಶ್ಯತೆ ಇರಲಿಲ್ಲ. ಇಂತಹ ಶ್ರೇಷ್ಠ ಧರ್ಮದ ಸಜ್ಜನಿಕೆಯ ದುರುಪಯೋಗ ಪಡೆದು ಪರಕೀಯರಿಂದ ದೇವಸ್ಥಾನ ಧ್ವಂಸ, ಮತಾಂತರ, ಹಿಂದೂಗಳ ನರಮೇದ ನಡೆದಿದೆ. ಇದನ್ನೆಲ್ಲ ಸರಿಪಡಿಸಲು ಹಿಂದುಗಳೆಲ್ಲರು ಒಂದಾಗಬೇಕಾಗಿದೆ ಎಂದು ಹೇಳಿದರು.

ಹಿಂದು ಎಂಬುವುದು ಜೀವನ ಕ್ರಮ:ಪ್ರಸ್ತುತ ದಿನಗಳಲ್ಲಿ ಕೆಲವರು ಹಿಂದು ಧರ್ಮವನ್ನು ಅಪಮಾನ ಮಾಡುತ್ತಿರುವುದು ಖಂಡನೀಯ. ಹಿಂದು ಎಂಬುವು ಕೇವಲ ಮತ ಅಲ್ಲ, ಅದೊಂದು ಜೀವನ ಕ್ರಮ. ವೇದಗಳಲ್ಲಿ ಶ್ರದ್ಧೆ ಇರುವವನು, ಎಲ್ಲ ದೇವರನ್ನು ಸಮಾನವಾಗಿ ಗೌರವಿಸುವವರೇ ನಿಜವಾದ ಹಿಂದು ಎಂದು ಹೇಳಿದರು.

ವಕೀಲ ಹಾಗೂ ಹಿಂದು ವಿಧಿಜ್ಞ ಪರಿಷತ್‌ನ ಉಪಾಧ್ಯಕ್ಷ ಎಂ.ಪಿ.ಅಮೃತೇಶ್‌ ಮಾತನಾಡಿ, 70 ವರ್ಷದಲ್ಲಿ 110 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ. ಸಂವಿಧಾನವನ್ನು ಇನ್ನೊಮ್ಮೆ ತಿದ್ದುಪಡಿ ಮಾಡಿ ಭಾರತವನ್ನು ಹಿಂದು ರಾಷ್ಟ್ರವಾಗಿ ಘೋಷಣೆ ಮಾಡಬಾರದೇಕೆ ಎಂದು ಪ್ರಶ್ನಿಸಿದರು.

Advertisement

ದೇವಸ್ಥಾನಗಳ ರಕ್ಷಣೆಗಾಗಿ ಸಂಘಟಿತರಾಗಿ: ವಕೀಲ ಕೆ.ವಿ.ಧನಂಜಯ ಮಾತನಾಡಿ, ಹಿಂದು ದೇವಸ್ಥಾನಗಳನ್ನು ಮಾತ್ರ ಸರ್ಕಾರದ ಸುಪರ್ದಿಗೆ ಪಡೆದಿರುವುದ ಸರಿಯಲ್ಲ. ಮಸೀದಿ, ಚರ್ಚಗಳನ್ನು ಸರ್ಕಾರ ತಮ್ಮ ವಶಕ್ಕೆ ಪಡೆಯಬೇಕು. ದೇವಸ್ಥಾನಗಳ ರಕ್ಷಣೆಗಾಗಿ ಹಿಂದುಗಳೆಲ್ಲ ಒಂದಾಗಬೇಕು ಎಂದು ಹೇಳಿದರು.

ದೇವರ ವಿಚಾರದಲ್ಲಿ ಕುತಂತ್ರ: ಹಿಂದೂ ಸಂಘಟನೆಗಳ ಧಾರ್ಮಿಕ ಸಲಹೆಗಾರ ಉಮೇಶ ಶರ್ಮಾ ಗುರೂಜಿ ಮಾತನಾಡಿ, ರಾಷ್ಟ್ರದ ಅಸ್ತಿತ್ವ ಶಕ್ತಿಪೀಠ ಮತ್ತು ಜ್ಯೋತಿರ್ಲಿಂಗಗಳ ಆಧಾರದ ಮೇಲೆ ನಿರ್ಧಾರವಾಗಿದೆ. ಜಾತ್ಯತೀತೆಯ ಹೆಸರಿನಲ್ಲಿ ಅನೇಕ ದೇವಸ್ಥಾನಗಳು ಹಾಗೂ ಶಕ್ತಿಪೀಠಗಳು ನಾಸ್ತಿಕರ ಕಪಿಮುಷ್ಠಿಗೆ ಸೇರಿದೆ.

ದೇವರ ವಿಷಯದಲ್ಲೂ ಜನರಲ್ಲಿ ವಿಷ ಬೀಜ ಬಿತ್ತುತ್ತಿರುವ ಕುತಂತ್ರ ರಾಜಕಾರಣ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸನಾತನ ಸಂಸ್ಥೆಯ ಕಾಶಿನಾಥ ಪ್ರಭು, ಸನಾತನ ಸಂಸ್ಥೆ ಕಿರಣ್‌ ಬೆಟ್ಟದಪುರ, ಮೋಹನ್‌ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ್‌ ಗೌಡ ಮೊದಲಾದರು ಇದ್ದರು.

2023ಕ್ಕೆ ನೇಪಾಳ ಹಿಂದುರಾಷ್ಟ್ರ: ಭಗವಂತ ಹಾಗೂ ಸಂತರ ಆಶೀರ್ವಾದದಿಂದ 2023ಕ್ಕೆ ಭಾರತ ಮಾತ್ರವಲ್ಲ, ನೇಪಾಳವೂ ಹಿಂದು ರಾಷ್ಟ್ರವಾಗಲಿದೆ. ಗೋವಾದಲ್ಲಿ ಕಳೆದ 7 ವರ್ಷಗಳಿಂದ ರಾಷ್ಟ್ರೀಯ ಹಿಂದೂ ಅಧಿವೇಶನ ಹಿಂದು ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆ ಆಯೋಜಿಸಿಕೊಂಡು ಬರುತ್ತಿದೆ.

ಹಿಂದು ಅಧಿವೇಶನದಿಂದ ಕೋಮು ಸೌಹಾರ್ಧತೆಗೆ ಧಕ್ಕೆ ಬರುತ್ತಿದೆ ಎಂದು ಕೆಲವರು ಅಪಪ್ರಚಾರ ಮಾಡಿ, ಅಧಿವೇಶನಕ್ಕೆ ಅಡಚಣೆ ತರಲು ಪ್ರಯತ್ನಿಸುತ್ತಿರುತ್ತಾರೆ. ಹಿಂದುಗಳು ಹೆಚ್ಚಿರುವ ದೇಶದಲ್ಲಿ ಹಿಂದು ಅವಧಿವೇಶನ ಮಾಡಿದರೆ ಅಪರಾಧವೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ್‌ ಗೌಡ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next