Advertisement

ಷಾ ಟ್ವೀಟ್‌ ವಿರುದ್ಧ ವಾಟಾಳ್‌ ಆಕ್ರೋಶ

12:01 PM Jul 11, 2018 | |

ಬೆಂಗಳೂರು: ಸಾಹಿತಿಗಳ ವಿರುದ್ಧ ವಿವಾದತ್ಮಕ ಟ್ವೀಟ್‌ ಮಾಡಿರುವ ಬಯೋಕಾನ್‌ ಸಂಸ್ಥೆಯ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಕನ್ನಡ ಪರ ಸಂಘಟನೆಗಳ ಮುಖಂಡರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.  ಷಾ ಅವರ ಹೇಳಿಕೆಯನ್ನು ಖಂಡಿಸಿ, ಬುಧವಾರ ಕನ್ನಡಪರ ಸಂಘಟನೆಗಳು ಹೆಬ್ಬಗೋಡಿ ಬಳಿಯ ಬಯೋಕಾನ್‌ ಕಂಪನಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿವೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖಂಡ ವಾಟಾಳ್‌ ನಾಗರಾಜ್‌, ಈ ಹಿಂದೆ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಕರೆಕೊಟ್ಟಾಗ “ಬಂದ್‌ಳೂರು’ ಎಂದು ಟ್ವೀಟ್‌ ಮಾಡಿ ಉದ್ಧಟತನ ತೋರಿದ್ದರು. ಇದೀಗ ಕನ್ನಡ ಶಾಲೆ ವೀಲಿನ ಸಂಬಂಧ ಸಾಹಿತಿಗಳು ಧ್ವನಿ ಎತ್ತಿದ್ದರೆ, ಮಾಧ್ಯಮಗಳು ಯಾವಾಗಲೂ ಸಣ್ಣ ಗುಂಪನ್ನು ದೊಡ್ಡದಾಗಿ ಚಿತ್ರಿಸುತ್ತಿವೆ ಎಂದು ಟ್ವೀಟ್‌ ಮಾಡಿ, ಕನ್ನಡಿಗರನ್ನು ಕೆಣಕಿದ್ದಾರೆ ಎಂದು ಟೀಕಿಸಿದರು.

ಷಾ ಅವರು ಪದೇ ಪದೆ ಕನ್ನಡಿಗರನ್ನು ಅಪಮಾನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಹೆಬ್ಬಗೋಡಿಯಲ್ಲಿರುವ ಬಯೋಕಾನ್‌ ಸಂಸ್ಥೆಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರದ ವಿರುದ್ಧವೂ ವಾಗ್ಧಾಳಿ ನಡೆಸಿದ ಅವರು, ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ವೀಲಿನಗೊಳಿಸಲು ಬಿಡುವುದಿಲ್ಲ. ಈ ಸಂಬಂಧ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ಮಲಗುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಗುವುದು ಎಂದರು.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಕನ್ನಡದ ಆಚಾರ- ವಿಚಾರಗಳ ಬಗ್ಗೆ ತಿಳಿವಳಿಕೆ ಇಲ್ಲದ ಕಿರಣ್‌ ಮಜುಂದಾರ್‌ ಷಾ, ನಾಡಿನ ಸಾಹಿತಿಗಳಿಗೆ ಅಗೌರವ ತೋರಿದ್ದಾರೆ. ರಾಜ್ಯ ಸರ್ಕಾರ ಷಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next