ರಾಯಚೂರು: ವೈಮಾನಿಕ ಸಮೀಕ್ಷೆ ಮಾಡುವುದೆಂದರೆ ಜನರಿಗೆ ಅಗೌರವ ತೋರಿದಂತೆ. ವಿಮಾನದಲ್ಲಿ ಸುತ್ತಾಡಿದರೆ ಕಣ್ಣೀರಲ್ಲಿ ಕೈ ತೊಳೆಯುವ ಜನರ ಸಂಕಷ್ಟಕಾಣಿಸುತ್ತದೆಯೇ ಎಂದು ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ ಪ್ರಶ್ನಿಸಿದರು.
ಜಿಲ್ಲೆಯ ಪ್ರವಾಹ ಸಂತ್ರಸ್ತರ ಸಮಸ್ಯೆ ಆಲಿಸಲು ಶುಕ್ರವಾರ ಜಿಲ್ಲೆಗೆ ಆಗಮಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿ, ವಿಮಾನದಲ್ಲಿ ಹಾರಾಡಿದರೆ ಜನರ ಕಷ್ಟ ಕಾಣುವುದಿಲ್ಲ.ಕಾಂಗ್ರೆಸ್, ಜೆಡಿಎಸ್, ಬಿಜೆಪಿಯವರು ಹೆಲಿಕಾಪ್ಟರ್ ರಾಜಕಾರಣಿಗಳಾಗಿದ್ದು, ಕೆಳಗೆಓಡಾಡುವುದೇ ಇಲ್ಲ ಎಂದು ವಾಗ್ಧಾಳಿ ನಡೆಸಿದರು.
3 ವರ್ಷದಿಂದ ಜನ ಸಂಕಷ್ಟದಲ್ಲಿದ್ದಾರೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಲ್ಲ. ಪ್ರಧಾನಿ ಮೋದಿ ಆಂಧ್ರ, ತೆಲಂಗಾಣ, ಉತ್ತರ ಪ್ರದೇಶ, ತಮಿಳುನಾಡಿಗೆಹೋಗುತ್ತಾರೆ ವಿನಃ ಕರ್ನಾಟಕಕ್ಕೆ ಬರುವುದಿಲ್ಲ. ರಾಜ್ಯದ ಸಂಸದರು ಏನು ಮಾಡುತ್ತಿದ್ದಾರೆ?. ರಾಜ್ಯದ ಸಚಿವರು,ಸಂಸದರು ಪ್ರಧಾನಿಯನ್ನು ಏಕೆ ರಾಜ್ಯಕ್ಕೆ ಕರೆ ತಂದು ಪ್ರವಾಹ ಸ್ಥಿತಿ ವಿವರಿಸಿಲ್ಲ? ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ರಾಜ್ಯದ ಪ್ರವಾಹ ಪರಿಹಾರಕ್ಕಾಗಿ 50ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ಪ್ರಧಾನಿಗಳು ಕೂಡಲೇ ಶ್ವೇತ ಪತ್ರ ಹೊರಡಿಸಿ ಯಾವ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದಾರೆ ತಿಳಿಸಲಿ. ಅ.29ರಂದು ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಎದುರು ರಾಜ್ಯದ ಸಂಸದರನ್ನು ಹರಾಜು ಮಾಡುವ ಹೋರಾಟ ಹಮ್ಮಿಕೊಂಡಿದ್ದಾಗಿ ತಿಳಿಸಿದರು.
ಕೋವಿಡ್ ಸಂದಿಗ್ಧ ಸಂದರ್ಭದಲ್ಲಿ ಶಾಲಾ-ಕಾಲೇಜು ಆರಂಭಿಸುವುದು ಸೂಕ್ತವಲ್ಲ. ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ಇದನ್ನು ತಡೆಯಲು ಈ ವರ್ಷವನ್ನು ಶೂನ್ಯ ವರ್ಷವೆಂದುಘೋಷಿಸಬೇಕು, ಕೋವಿಡ್‌ನಿಂದ ಮೃತಪಟ್ಟ ವಿದ್ಯಾರ್ಥಿ ಹಾಗೂಶಿಕ್ಷಕರಿಗೆ ಒಂದು ಕೋಟಿ ರೂ. ಪರಿಹಾರ ನೀಡಬೇಕು. ರಾಜ್ಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.1ರಿಂದ ಮುಂದಿನ ವರ್ಷ ನ.1ರ ವರೆಗೆ ರಾಜ್ಯಾದ್ಯಂತಹೋರಾಟ ನಡೆಸುವುದಾಗಿ ತಿಳಿಸಿದರು.