ಬಳ್ಳಾರಿ: ಪ್ರಧಾನಿ ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡಿದರು. ಅಭಿನಂದನ್ ವಾಪಸ್ ಕರೆಸಿಕೊಂಡರು. ಬಾಂಗ್ಲಾದಲ್ಲೂ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಮೋದಿ ಒಂದು ಮಾತು ಹೇಳಿದರೆ ಸಾಕು ಅವರು ತಣ್ಣಗಾಗುತ್ತಾರೆ ಎಂದು ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.
ಬಳ್ಳಾರಿ ಬಂದ್ ನಲ್ಲಿ ಡಿ.4ರ ಬುಧವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಈ ಕುಲ ಆ ಕುಲ ಎಂದು ನಾವು ಹೋದರೆ ಮುಂದಿನ ದಿನಗಳಲ್ಲಿ ನಮ್ಮ ಪರಿಸ್ಥಿತಿ ಸಹ ಬಾಂಗ್ಲಾದೇಶ ನಂತೆಯೇ ಆಗಲಿದೆ. ವಕ್ಫ್ ಬೋರ್ಡ್ ನಿಂದ ನೋಟಿಸ್ ನೀಡುತ್ತಿದೆ. ಬ್ರಿಟೀಷರು ಡಿವೈಡ್ ಮಾಡಿ ಅಧಿಕಾರ ಮಾಡಿದರು ಎಂದ ಅವರು, ಸ್ವಯಂ ಪ್ರೇರಿತವಾಗಿ ಹಲವರು ಬಂದ್ ಮಾಡಿದ್ದಾರೆ. ಈಗ ಪಾಕಿಸ್ತಾನ ಭಿಕ್ಷೆ ಬೇಡುತ್ತಿದೆ ಎಂದರು.
ಲೀಟರ್ ಹಾಲಿಗೆ 450 ರೂ., ಅಕ್ಕಿಗೆ 250 ರೂ. ಪೆಟ್ರೋಲ್, ಡೀಸೆಲ್ ಎಲ್ಲವೂ ಬೆಲೆ ಜಾಸ್ತಿಯಾಗಿದೆ. ಮೋದಿ ನೋಟ್ ಬ್ಯಾನ್ ಎನ್ನುತ್ತಿದ್ದಂತೆ ಪಾಕಿಸ್ತಾನ್ ಬ್ಯಾನ್ ಆಯಿತು. ಹಿಂದುಗಳು ಅಹಿಂಸಾ ಮಲಪರಮೋ ಧರ್ಮ, ಅಹಿಂಸೆ ಅಹಿಂಸೆ ಎಂದರೆ ನಾವು ಗಾಂಧಿಗಳಲ್ಲ. ಈಗ ಘೋಡ್ಸೆ ಬರಬೇಕಾಗುತ್ತದೆ ಎಂದು ಹೇಳಿದರು.
ನೀವು ನಂಬಿಕೆಗೆ ಅರ್ಹರಲ್ಲ. ನಾವು ಒಗ್ಗಟ್ಟಾಗಲೇಬೇಕು. ಒಂದೇ ಧರ್ಮ ಅದು ಹಿಂದೂ ಧರ್ಮ. ಮಹಿಳೆಯರ ಮೇಲಿನ ದೌರ್ಜನ್ಯ ನೋಡಿದರೆ ನಮ್ಮ ರಕ್ತ ಕುದಿಯುತ್ತೆ. ಮುಂದೆ ಇಂಥಹ ಘಟನೆಗಳು ನಡೆದರೆ ಕನಿಷ್ಠ 3 ಲಕ್ಷ ಜನರು ಬರಬೇಕು. ಆಗ ಬಂದ್ ಯಶಸ್ವಿಯಾಗಲಿದೆ ಎಂದರು.
ಅಮೇರಿಕಾ ಯೂನಿಸ್ ಹಿಂದಿನಿಂದ ಕಲಿಸಿ ಮೀಸಲಾತಿ ತೆಗೆಯಬೇಕು. ಹಿಂದಿನ ಉದ್ದೇಶ ಬೇರೆಯೇ ಇತ್ತು. ಹಿಂದುಗಳನ್ನು ಓಡಿಸಿದರೆ ಅವರ ಆಸ್ತಿಗಳನ್ನು ವಶ ಪಡೆಯುವ ಹುನ್ನಾರ ಇತ್ತು. ಹಿಂದೂಗಳು ನಾವು ಬಳೆ ಹಾಕಿಕೊಂಡಿಲ್ಲ. ನಾವೆಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ. ಪ್ರತಿಯೊಂದು ಮನೆಯಲ್ಲಿ ಒಬ್ಬರು ಆರ್ ಎಸ್ ಎಸ್ ಸದಸ್ಯರಾಗಬೇಕು. ಮೋಹನ್ ಭಾಗವತ್ ಅವರು ಹೇಳಿದಂತೆ, 3 ಹಿಂದೂ ಹೆಣ್ಣು ಮಕ್ಕಳು ಹುಟ್ಟಬೇಕು ಎಂದರೆ, ನನ್ನ ಪ್ರಕಾರ ಆರು ಜನರಿಗೆ ಜನ್ಮ ನೀಡಬೇಕು ಎಂದು ಜನರಲ್ಲಿ ಪ್ರಮಾಣ ಮಾಡಿಸಿದರು.