ಮುಂಬಯಿ: ವಸಾಯಿ ಪಶ್ಚಿಮದ ರಮೇದಿ ಶ್ರೀ ದತ್ತ ಮಂದಿರದಲ್ಲಿ ಶ್ರೀ ದತ್ತಜಯಂತಿ ಉತ್ಸವದ ಅಂಗವಾಗಿ ಡಿ. 3ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ವಸಾಯಿ ರೋಡ್ ಜಿಎಸ್‌ಬಿ ಗೌಡ ಸಾರಸ್ವತ ಬ್ರಾಹ್ಮಣ ಶ್ರೀ ವೆಂಕಟರಮಣ ಭಜನ ಮಂಡಳಿಯವರಿಂದ ಭಕ್ತಿಸುಧಾ ಕಾರ್ಯಕ್ರಮವು ಸುಮಾರು ಎರಡು ಗಂಟೆಗಳ ಕಾಲ ನಡೆದು ಭಕ್ತಾದಿಗಳನ್ನು ರಂಜಿಸಿತು.
ಶ್ರೀ ವೆಂಕಟರಮಣ ಭಜನ ಮಂಡಳಿಯ ಸದಸ್ಯರಾದ ಪಲ್ಲವಿ ಪುರುಷೋತ್ತಮ ಶೆಣೈ, ಅಮೇಯ್ ಗಣೇಶ್ ಪೈ ಅವರು ಭಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸ್ವರಗೀಕ್ಸ್ ಸಮೂಹದವರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸದಸ್ಯರು ಮರಾಠಿಯಲ್ಲಿ ಭಾವಗೀತೆಗಳನ್ನು ಹಾಡಿ ನೆರೆದ ನೂರಾರು ಸಭಿಕರ ಗಮನ ಸೆಳೆದರು.
ಹಿಮ್ಮೇಳದಲ್ಲಿ ಹಾರ್ಮೋನಿ ಯಂನಲ್ಲಿ ನಿಡ್ಡೋಡಿ ಪ್ರಸಾದ್ ಪ್ರಭು, ತಬಲಾದಲ್ಲಿ ರಾಜೇಶ್ ಪೈ, ಪಖ್ವಾಜ್‌ನಲ್ಲಿ ಗಣೇಶ್ ಪೈ ಮತ್ತು ತಾಳದಲ್ಲಿ ಅಶೋಕ್ ಶಿಂಧೆ ಅವರು ಸಹಕರಿಸಿದರು. ಸ್ಮಿತಾ ಗಣೇಶ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಪಾಲ್ಗೊಂಡ ಎಲ್ಲಾ ಕಲಾವಿದರನ್ನು ಶ್ರೀ ದತ್ತ ಮಂದಿರ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಗೌರವಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ದತ್ತ ಮಂದಿರದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಬಾಲಾಜಿ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.