Advertisement

ಬೊರಿವಲಿ ಸಾವರ್ಪಾಡಾದ ಶ್ರೀ ಶನಿಮಂದಿರದಲ್ಲಿ  ವರಮಹಾಲಕ್ಷ್ಮೀ ಪೂಜೆ

05:14 PM Aug 28, 2018 | Team Udayavani |

ಮುಂಬಯಿ: ಬೊರಿವಲಿ ಪೂರ್ವದ ಸಾವರ್ಪಾಡಾದ ಶ್ರೀ ಶನಿಮಹಾತ್ಮಾ ಪೂಜಾ ಮಿತ್ರ ಮಂಡಳಿಯ ಸಂಚಾಲಕತ್ವದ ಶ್ರೀ ಶನಿಮಂದಿರದಲ್ಲಿ ಮಹಿಳಾ ವಿಭಾಗದ ವತಿಯಿಂದ ಶ್ರೀ ವರಮಹಾಲಕ್ಷ್ಮೀಪೂಜೆ ಮತ್ತು ಅರಸಿನ ಕುಂಕುಮ ಕಾರ್ಯಕ್ರಮವು ಆ. 24ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಅದ್ದೂರಿಯಾಗಿ  ಜರಗಿತು.

Advertisement

ಸಂಜೆ ಮಹಿಳೆಯರಿಂದ ವಿವಿಧ ಪೂಜಾ ವಿಧಿ-ವಿಧಾನಗಳೊಂದಿಗೆ ಕಲಶ ಪ್ರತಿಷ್ಠಾಪನೆ, ಅರಸಿನ ಕುಂಕುಮ ಹಾಗೂ ವರಮಹಾಲಕ್ಷ್ಮೀ ಪೂಜೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿ ಪರಸ್ಪರ ಶುಭ ಹಾರೈಸಿಕೊಂಡರು.

ಕಾರ್ಯಕ್ರಮದಲ್ಲಿ ಮಂಡಳಿಯ ಮಹಿಳಾ ವಿಭಾಗದ ರಾಜೀವಿ ಸುವರ್ಣ, ಲಕ್ಷ್ಮೀ ಸಾಲ್ಯಾನ್‌, ಲಕ್ಷ್ಮೀ ಕಾಂಚನ್‌, ಲಕ್ಷ್ಮೀ ಕರ್ಕೇರ, ವಿದ್ಯಾ ಸಾಲ್ಯಾನ್‌, ಅಮಿತಾ ಪುತ್ರನ್‌, ಮಮತಾ ಶೆಟ್ಟಿ, ಪೂಜಾ ಪುತ್ರನ್‌, ಸವಿತಾ ಕರ್ಕೇರ, ದಮಯಂತಿ ಸನಿಲ್‌, ಪ್ರೇಮಾ ಸುವರ್ಣ, ರಜನಿ ಕುಂದರ್‌, ಉಷಾ ಸುವರ್ಣ, ಲತಾ ಅಮೀನ್‌, ಜಯಶ್ರೀ ಗೌಡ ಹಾಗೂ ಮಂದಿರದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಪ್ರಸಾದ ರೂಪದಲ್ಲಿ ಕೊನೆಯಲ್ಲಿ ಅನ್ನದಾನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next