Advertisement
1 ಭೋಜ ಶಾಲಾ-ಕಮಲ್ ಮೌಲಾ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಇರುವ ವಿವಾದಿತ ಸ್ಥಳ.
ಹಿಂದೂ ವಾದ: 1034ರಲ್ಲಿ ಮಧ್ಯಪ್ರದೇಶದ ಧಾರ್‌ನಲ್ಲಿ ವಾಗ್ದೇವಿ ದೇಗುಲ ನಿರ್ಮಾಣ ಮಾಡಲಾಗಿತ್ತು. ಅಲ್ಲಾವುದ್ದೀನ್ ಖಿಲ್ಜಿ 13ನೇ ಶತಮಾನದಲ್ಲಿ ಮಸೀದಿ ನಿರ್ಮಿಸಿದ್ದ.
ಮುಸ್ಲಿಂ ವಾದ: ದೇಗುಲ ನಾಶ ಆಗಿರಲಿಲ್ಲ. 1291ರಲ್ಲಿ ಮೌಲಾ ಕಮಾಲುದ್ದೀನ್ ಚಿಸ್ತಿ ಎಂದ ಸೂಫಿ ಸಂತ ಅಲ್ಲಿಗೆ ಬಂದಿದ್ದ. ಆತನ ಕಾಲಾನಂತರ ಮಸೀದಿ ಜತೆಗೆ ಸಮಾಧಿ ನಿರ್ಮಿಸಲಾಗಿದೆ.
ರಾಜಸ್ಥಾನದ ಅಜ್ಮೇರ್ ನಲ್ಲಿರುವ ಖ್ವಾಜಾ ಮೊಯಿನುದ್ದೀನ್ ಚಿಸ್ತಿ
ಹಿಂದೂ ವಾದ: ಮೂಲತಃ ಇದು ಶಿವನ ದೇವಾಲಯ. ಇತಿಹಾಸಕಾರ ರಾಬರ್ಟ್ ಹ್ಯಾಮಿಲ್ಟನ್ ಇರ್ವಿನ್ ಸಹ ಇಲ್ಲಿ ದರ್ಗಾ ನಿರ್ಮಾಣವಾಗುವುದಕ್ಕಿಂತ ಮೊದಲು ದೇಗುಲ ಇತ್ತು ಎಂದು ಬರೆದಿದ್ದಾರೆ.
ಮುಸ್ಲಿಂ ವಾದ: ಮೊಯಿನುದ್ದೀನ್ ಚಿಸ್ತಿ ಇರಾನ್‌ನಲ್ಲಿ ಜನಿಸಿ ಭಾರತಕ್ಕೆ ಆಗಮಿಸಿ ಅಜೆ¾àರ್‌ನಲ್ಲಿ ನೆಲೆಸಿದ್ದರು. ಅವರ ಸ್ಮರಣಾರ್ಥವಾಗಿ ಈ ದರ್ಗಾವನ್ನು 1236ರಲ್ಲಿ ನಿರ್ಮಿಸಲಾಗಿದೆ. 3. ಸಂಭಲ್‌ನ ಮಸೀದಿ
ಉತ್ತರಪ್ರದೇಶದ ಸಂಭಲ್ ಜಿಲ್ಲೆಯಲ್ಲಿನ ಶಾಹಿ ಜಾಮಾ ಮಸೀದಿ-ಹರಿಹರ ದೇಗುಲ
ಹಿಂದೂ ವಾದ: ಮಸೀದಿ ಇರುವುದಕ್ಕಿಂತ ಮೊದಲು ಹರಿಹರ ದೇಗುಲವಿತ್ತು. 1526ರಲ್ಲಿ ಮೊಘಲ್ ದೊರೆ ಬಾಬರ್ ಇಲ್ಲಿದ್ದ ದೇವಸ್ಥಾನವನ್ನು ಕೆಡವಿ ಹಾಕಿ ಮಸೀದಿ ನಿರ್ಮಿಸಿದ್ದ. 1878ರಲ್ಲೇ ಈ ಬಗ್ಗೆ ದಾವೆ ಶುರುವಾಗಿತ್ತು.
ಮುಸ್ಲಿಂ ವಾದ: ದೇಗುಲ ಕೆಡವಿ ಮಸೀದಿ ನಿರ್ಮಾಣವಾಗಿಲ್ಲ. 1947 ಆ.15ಕ್ಕಿಂತ ಮೊದಲು ಅಲ್ಲಿ ನಮಾಜು ಮಾಡಲಾಗುತ್ತಿತ್ತು.
Related Articles
ಈಗಿನ ಹೊಸದಿಲ್ಲಿಯ ಚಾಂದನಿ ಚೌಕ ಪ್ರದೇಶದಲ್ಲಿ ಇರುವ ಮಸೀದಿ.
ಹಿಂದೂ ವಾದ: ರಾಜಸ್ಥಾನದ ಜೋಧ್‌ಪುರದಿಂದ ತರಲಾಗಿದ್ದ ಆಭರಣಗಳಿಂದ ಅಲಂಕೃತವಾಗಿದ್ದ
ದೇವರ ವಿಗ್ರಹಗಳನ್ನು ತರಲಾಗಿತ್ತು. ಅದನ್ನು ಮೊಘಲ್ ದೊರೆ ಜಾಮಾ ಮಸೀದಿಯ ಮೆಟ್ಟಿಲುಗಳಲ್ಲಿ ಪ್ರದರ್ಶಿಸಲು ಆದೇಶಿಸಿದ್ದ.
ಮುಸ್ಲಿಂ ವಾದ: ಜಾಮಾ ಮಸೀದಿಗೆ ಸಂಬಂಧಿಸಿದಂತೆ ಇದುವರೆಗೆ ಯಾವ ಪ್ರತಿಕ್ರಿಯೆಯೂ ವ್ಯಕ್ತವಾಗಿಲ್ಲ.
Advertisement
5. ಕಾಶಿ ವಿಶ್ವನಾಥ ದೇಗುಲ-ಜ್ಞಾನವಾಪಿ ಮಸೀದಿಉತ್ತರ ಪ್ರದೇಶದ ವಾರಾಣಸಿಯಲ್ಲಿ ಇರುವ ಧಾರ್ಮಿಕ ಕೇಂದ್ರ
ಹಿಂದೂ ವಾದ: 1585ರಲ್ಲಿ ಮೊದಲನೇ ಮಾನ್‌ಸಿಂಗ್ ಮತ್ತು ರಾಜಾ ತೋದರ್ ಮಾಲ್‌ರಿಂದ ನಿರ್ಮಾಣವಾಗಿದೆ. ಇಲ್ಲಿರುವುದು ಶಿವನ ಹೆಸರಲ್ಲಿ ಇರುವ ದೇವಾಲಯ. ಅದನ್ನು 17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬ್ ದೇಗುಲವನ್ನು ಕೆಡವಿ ಹಾಕಿ ಮಸೀದಿ ನಿರ್ಮಿಸಿದ್ದ.
ಮುಸ್ಲಿಂ ವಾದ: ದೇಗುಲವನ್ನು ಕೆಡವಿ ಹಾಕಿ ಮಸೀದಿ ನಿರ್ಮಿಸಿಲ್ಲ. ಇಲ್ಲಿ ಮೊದಲಿನಿಂದಲೂ ಮಸೀದಿ ಅಸ್ತಿತ್ವದಲ್ಲಿತ್ತು. 6. ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ
ಉತ್ತರಪ್ರದೇಶದ ಮಥುರಾದಲ್ಲಿರುವ ಸ್ಥಳ
ಹಿಂದೂ ವಾದ: ಪರಮಾತ್ಮ ಶ್ರೀ ಕೃಷ್ಣನ ಜನ್ಮಸ್ಥಳವಾಗಿರುವ ಮಥುರಾದಲ್ಲಿ ದೇಗುಲ ನಿರ್ಮಾಣವಾಗಿತ್ತು. ಅದನ್ನು ಕೆಡವಿ ಹಾಕಿ ಒಟ್ಟು 13.37 ಎಕ್ರೆ ಪ್ರದೇಶದಲ್ಲಿ ಕಾಲಾನಂತರದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ.
ಮುಸ್ಲಿಂ ವಾದ: ಮಸೀದಿ ಎನ್ನುವುದು ವಿವಾದಿತ ಸ್ಥಳದಲ್ಲಿ ನಿರ್ಮಾಣವಾಗಿಲ್ಲ. 1968ರ ಒಪ್ಪಂದದ ಪ್ರಕಾರ ಜಮೀನಿನ ಆಂಶಿಕ ಭಾಗವನ್ನು ಮಸೀದಿ ಆಡಳಿತ ಮಂಡಳಿಗೆ ನೀಡಿತ್ತು. 7. ಬಿಜಾ ಮಂಡಲ್ ಮಸೀದಿ
ಮಧ್ಯಪ್ರದೇಶದ ವಿದಿಶಾದಲ್ಲಿರುವ ಧಾರ್ಮಿಕ ಸ್ಥಳ
ಹಿಂದೂ ವಾದ: ಇಲ್ಲಿರುವುದು ವಿಜಯ ಸೂರ್ಯ ಮಂದಿರವಾಗಿದ್ದು ಇದು ಹಿಂದೂ ಸಮುದಾಯಕ್ಕೆ ಸೇರಿದ ಸ್ಥಳ.
11ನೇ ಶತಮಾನದಲ್ಲಿ ಚಾಲುಕ್ಯ ರಾಜ ಮನೆತನಕ್ಕೆ ಸೇರಿದ ವಾಚಸ್ಪತಿ ಇಲ್ಲಿ ಭವ್ಯವಾದ ಸೂರ್ಯ ಮಂದಿರವನ್ನು ನಿರ್ಮಾಣ ಮಾಡಿದ್ದ. ಮುಸ್ಲಿಂ ವಾದ: 1951ರ ಗೆಜೆಟ್ ಪ್ರಕಾರ ಅದು ಸಮುದಾಯಕ್ಕೆ ಸೇರಿದ್ದು. ಅದು ದೇಗುಲಕ್ಕೆ ಸೇರಿದ ಜಮೀನು ಅಲ್ಲ. ಅಲ್ಲಿ ಸರಕಾರದ ವತಿಯಿಂದಲೇ ಮಸೀದಿ ನಿರ್ಮಿಸಲಾಗಿದೆ. 8. ಕ್ವಾವತ್-ಉಲ್- ಇಸ್ಲಾಂ ಮಸೀದಿ
ದಿಲ್ಲಿಯ ಕುತುಬ್ ಮಿನಾರ್ ಸಮೀಪ ನಿರ್ಮಿಸಲಾಗಿರುವ ಮಸೀದಿ
ಹಿಂದೂ ವಾದ: ಇತಿಹಾಸ ಕಾಲದಲ್ಲಿ ಹಿಂದೂ ಮತ್ತು ಜೈನ ಧಾರ್ಮಿಕ ಕೇಂದ್ರಗಳನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಲಾಗಿದೆ. ಭಾರತದ ಮೇಲೆ ಹಲವು ಬಾರಿ ದಾಳಿ ಮಾಡಿದ ಮೊಹಮ್ಮದ್ ಘೋರಿಯ ಸೇನೆ ಈ ಕೃತ್ಯವೆಸಗಿತ್ತು.
ಮುಸ್ಲಿಂ ವಾದ: 700 -800 ವರ್ಷಗಳಿಂದ ಮುಸ್ಲಿಮರು ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. 1914 ಜ.16ರಂದು ಆಗಿನ ಸರಕಾರದಿಂದಲೇ ಅದೊಂದು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. 1991ರ ಪೂಜಾ ಸ್ಥಳ ಕಾಯ್ದೆ ಏನು ಹೇಳುತ್ತದೆ?
ಅಯೋಧ್ಯೆಯಲ್ಲಿ ಇದ್ದ ಬಾಬರಿ ಮಸೀದಿ ಧ್ವಂಸಗೊಂಡ ಬಳಿಕ ಪಿ.ವಿ.ನರಸಿಂಹ ರಾವ್ ನೇತೃತ್ವದ ಸರಕಾರ ಧಾರ್ಮಿಕ ಸ್ಥಳಗಳ ವಿವಾದಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾಯ್ದೆ ಜಾರಿಗೊಳಿಸಿತು. ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾದ 1947 ಆ.15ರ ಬಳಿಕ ದೇಶದಲ್ಲಿ ಇರುವ ಯಾವುದೇ ಧಾರ್ಮಿಕ ಕ್ಷೇತ್ರದ ವಿವಾದದ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಬಗ್ಗೆ ಅದರಲ್ಲಿ ಉಲ್ಲೇಖಿಸಲಾಗಿತ್ತು. ಈಗ ಸುಪ್ರೀಂ ಕೋರ್ಟ್‌ನಲ್ಲಿ ಈ ಕಾಯ್ದೆಯ ಪ್ರಸ್ತುತತೆಯನ್ನೇ ಪ್ರಶ್ನಿಸಿ ದಾವೆ ಹೂಡಲಾಗಿದೆ. ಸದಾಶಿವ ಕೆ.