Advertisement
ಕ್ಲೌಡ್ ಆಧರಿತ ಸೇವೆಗಳನ್ನು ಅವಲಂಬಿಸಿರುವವರಿಗೆ ಮಾತ್ರವೇ ಈ ಸಮಸ್ಯೆಯಾಗಿದ್ದು, ಉಳಿದಂತೆ ಇತರೆಲ್ಲ ಸೇವೆಗಳು ಎಂದಿನಂತೆ ಇದ್ದವು. ನಗರದಲ್ಲಿರುವ ಕೆಲವು ಕಾಲ್‌ಸೆಂಟರ್‌ಗಳು ಕ್ಲೌಡ್ ಸೇವೆಯನ್ನು ಬಳಸುತ್ತಿದ್ದು, ಅವರಿಗೆ ದಿನವಿಡೀ ಕಾರ್ಯನಿರ್ವಹಿಸಲು ಆಗಲಿಲ್ಲ. ಕೆಲವು ಬ್ಯಾಂಕ್‌ಗಳ ಆನ್‌ಲೈನ್ ಸೇವೆಗಳು ಸ್ವಲ್ಪ ಕಾಲ ಸ್ಥಗಿತಗೊಂಡಿ ದ್ದವು. ಕೆಲವು ಸ್ಟಾಕ್‌ಬ್ರೋಕಿಂಗ್ ಆ್ಯಪ್‌ಗ್ಳೂ ಸಮಸ್ಯೆಗೊಳಗಾದವು.
ಮಂಗಳೂರು ವಿಮಾನ ನಿಲ್ದಾಣದ ಮೂರು ದೇಶೀಯ ವಿಮಾನ ಹಾರಾಟಗಳು ರದ್ದುಗೊಂಡಿವೆ. ಮೂರು ಅಂತಾರಾಷ್ಟ್ರೀಯ ವಿಮಾನ ಹಾರಾಟ ವಿಳಂಬಗೊಂಡಿದ್ದು, ಮಂಗಳೂರು ನಿಲ್ದಾಣಕ್ಕೆ ಕೆಲವು ತಾಸುಗಳಷ್ಟು ತಡವಾಗಿ ಆಗಮಿಸಿವೆ. ಏರ್ ಇಂಡಿಗೋದ 3 ಬೆಂಗಳೂರು, ದಿಲ್ಲಿ ಹಾಗೂ ಹೈದರಾಬಾದ್ ದೇಶೀಯ ವಿಮಾನ ಹಾರಾಟಗಳು ರದ್ದುಗೊಂಡಿವೆ. ಹಲವು ವಿಮಾನ ಕಂಪೆನಿಗಳ ಸರ್ವರ್‌ಗಳು ಮೈಕ್ರೋಸಾಫ್ಟ್ ಆಧಾರಿತವಾದ್ದರಿಂದ ಅಂತಾರಾ ಷ್ಟ್ರೀಯ ವಾಗಿಯೇ ಎಲ್ಲ ಕಡೆಗಳಲ್ಲೂ ಚೆಕ್-ಇನ್, ಬೋರ್ಡಿಂಗ್ ಪಾಸ್ ನೀಡಿಕೆ ಇತ್ಯಾದಿಗಳಲ್ಲಿ ತೊಂದರೆ ಉಂಟಾಗಿದೆ. ಕೆಲವೆಡೆ ಮ್ಯಾನ್ಯುವಲ್ ಆಗಿ ಬೋರ್ಡಿಂಗ್ ಪಾಸ್ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಉಡುಪಿಯಲ್ಲೂ ವಿವಿಧ ಕ್ಷೇತ್ರ ಗಳಲ್ಲಿ ದುಡಿಯುವವರಿಗೆ ಈ ಸಮಸ್ಯೆ ಅನುಭವಕ್ಕೆ ಬಂದಿತು.