Advertisement
ಕಮರಿಪೇಟೆ-ಗಿರಣಿಚಾಳ-ಉಣಕಲ್ಲ ಸಂಪರ್ಕಿಸುವ ವಾಣಿ ವಿಲಾಸ ವೃತ್ತದಿಂದ ಹೊಸ ಡಿಪೋವರೆಗಿನರಸ್ತೆ ದುರವಸ್ಥೆಯಿದು. ಮೂರು ವರ್ಷಗಳಿಂದ ಈ ರಸ್ತೆ ಕುಂಟುತ್ತಾ ತೆವಳುತ್ತಾ ಒಂದಿಷ್ಟು ಕಾಂಕ್ರಿಟ್ ರಸ್ತೆ ಕಂಡಿದ್ದು, ಉಳಿದ ಸುಮಾರು 500 ಮೀಟರ್‌ಅವ್ಯವಸ್ಥೆ ಆಗರವಾಗಿದೆ. ರಸ್ತೆಯುದ್ದಕ್ಕೂ ಒಂದು ಭಾಗಆಸ್ಪತ್ರೆಯೊಂದಕ್ಕೆ ಪಾರ್ಕಿಂಗ್ ಸ್ಥಳ, ಕಟ್ಟಡ ನಿರ್ಮಾಣಸಾಮಗ್ರಿ ಹಾಕುವ ಸ್ಥಳ, ಜನ ಬಳಕೆಗೆ ಸೀಮಿತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಇನ್ನೇನು ರಸ್ತೆ ನಿರ್ಮಾಣವಾಯಿತುಎನ್ನುವ ಭರವಸೆಯಲ್ಲೇ ವರ್ಷಗಳು ಕಳೆದಿದ್ದು, ಇದೀಗ ಅನುದಾನ ಕೊರತೆಯಿಂದ ಪಾಲಿಕೆಗೆ ರಸ್ತೆ ಮರಳಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.
Related Articles
Advertisement
ನಿರ್ಮಾಣಕ್ಕೆ ಅಡ್ಡಿಯಿದೆ! :
ಸಂಚಾರಕ್ಕೆ ತೊಂದರೆಯಾಗಿರುವ ಭಾಗದ ರಸ್ತೆ ನಿರ್ಮಾಣಕ್ಕೆ ಸ್ಲಂ ಅಡ್ಡಿಯಾಗಿದ್ದು, ಸ್ಮಾರ್ಟ್‌ಸಿಟಿ ಯೋಜನೆಯಡಿ ಅವರಿಗೆ ಮನೆ ನಿರ್ಮಾಣ ಮಾಡಿ ಸ್ಥಳಾಂತರ ಮಾಡಬೇಕು ಎನ್ನುವುದು ಸ್ಥಳೀಯ ಜನಪ್ರತಿನಿಧಿಗಳ ಲೆಕ್ಕಾಚಾರವಾಗಿದೆ. ಆದರೆ ಮೂರು ವರ್ಷ ಕಳೆದರೂಈ ವಿಚಾರದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಆದರೆ ವಾಣಿ ವಿಲಾಸ ರಸ್ತೆಯಿಂದ ಕೋರ್ಟ್ ಕಡೆ ಹೋಗುವಎಡ ಭಾಗದಲ್ಲಿ ಸರಕಾರಿ ಜಾಗೆಯಿದ್ದು, ತಾತ್ಕಾಲಿಕರಸ್ತೆಯನ್ನಾದರೂ ನಿರ್ಮಾಣ ಮಾಡಿದರೆ ಸುಗಮ ಸಂಚಾರ ಕಲ್ಪಿಸಿದಂತಾಗಲಿದೆ. ಹೊಸ ಯೋಜನೆಗಳಿಗೆ ನೀಡುವ ಒತ್ತುಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಇಚ್ಛಾಶಕ್ತಿ ಇಲ್ಲದಿರುವುದು ಈ ಸಮಸ್ಯೆಗೆ ಕಾರಣವಾಗಿದೆ.
ರಸ್ತೆ ಅಗಲೀಕರಣಕ್ಕೆ ಸ್ಲಂ ಅಡ್ಡಿಯಾಗಿದ್ದು, ಸ್ಮಾರ್ಟ್‌ಸಿಟಿ ಅಡಿಯಲ್ಲಿ ಮನೆ ನಿರ್ಮಿಸಿದ ನಂತರ ಅವರನ್ನು ಸ್ಥಳಾಂತರ ಮಾಡುವವರೆಗೂ ಕಷ್ಟವಾಗಲಿದೆ. ರಸ್ತೆ ಸುಧಾರಣೆಯಾಗುವವರೆಗೂ ಜನರು ಸುಧಾರಿಸಿಕೊಳ್ಳಬೇಕು. ಆದಷ್ಟು ಬೇಗ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಸೂಚನೆ ನೀಡುತ್ತೇನೆ. -ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ
ಬಿಆರ್‌ಟಿಎಸ್‌ನಿಂದ ಮೂಲಸೌಲಭ್ಯಗಳ ಸ್ಥಳಾಂತರ ಮಾಡಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆವತಿಯಿಂದ ರಸ್ತೆ ನಿರ್ಮಾಣವಾಗಬೇಕಾಗಿದೆ. ಬಸ್‌ಗಳ ಸಂಖ್ಯೆಹೆಚ್ಚಾಗುತ್ತಿದ್ದು, ವಾಹನಗಳ ಓಡಾಟಕ್ಕೆ ತೀರಾ ಕಷ್ಟವಾಗುತ್ತಿದೆ.ಖಾಲಿಯಿರುವ ಸ್ಥಳದಲ್ಲಿ ರಸ್ತೆ ನಿರ್ಮಾಣವಾದರೆ ಸುಗಮ ಸಂಚಾರ ಸಾಧ್ಯವಾಗಲಿದೆ. ಅನುದಾನ ನೀಡಿದರೆ ಬಿಆರ್ ಟಿಎಸ್ ವತಿಯಿಂದ ನಿರ್ಮಾಣ ಮಾಡಲಾಗುವುದು.-ಕೃಷ್ಣ ಬಾಜಪೇಯಿ, ಎಂಡಿ, ಬಿಆರ್‌ಟಿಎಸ್ ಹಾಗೂ ವಾಕರಸಾ ಸಂಸ್ಥೆ
ಕೋರ್ಟ್ ಉದ್ಘಾಟನೆ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಾಧೀಶರು ರಸ್ತೆ ಬಗ್ಗೆ ಪ್ರಸ್ತಾಪಿಸಿದ್ದರು.ಸ್ಥಳೀಯ ನ್ಯಾಯಾಂಗ ಇಲಾಖೆಯಿಂದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಕೀಲರಸಂಘದಿಂದಲೂ ಮನವಿ ಮಾಡಲಾಗಿದೆ. ವೋಟ್ ಬ್ಯಾಂಕ್‌ರಾಜಕಾರಣ, ಅಧಿಕಾರಿಗಳ ನಿರ್ಲಕ್ಷé ಬದಿಗಿಟ್ಟು ಮೊದಲು ರಸ್ತೆ ಅಗಲೀಕರಣ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ವಕೀಲರು ಹೋರಾಟಕ್ಕೆ ಇಳಿಯಬೇಕಾಗುತ್ತದೆ. –ಅಶೋಕ ಅರ್ಣೇಕರ, ಪ್ರಧಾನ ಕಾರ್ಯದರ್ಶಿ, ಹುಬ್ಬಳ್ಳಿ ವಕೀಲರ ಸಂಘ
-ಹೇಮರಡ್ಡಿ ಸೈದಾಪುರ