Advertisement

ಆಸ್ಟ್ರೇಲಿಯನ್‌ ಎಲ್‌ಪಿಜಿಎ ಪ್ರವೇಶ ಪಡೆದ ವಾಣಿ ಕಪೂರ್‌

12:30 AM Feb 03, 2019 | Team Udayavani |

 ಬಲ್ಲಾರತ್‌ (ಆಸ್ಟ್ರೇಲಿಯ): ಇಲ್ಲಿನ ಗಾಲ್ಫ್ ಕ್ಲಬ್‌ನಲ್ಲಿ ನಡೆದ ಮೊದಲ ಅರ್ಹತಾ ಕೂಟದಲ್ಲಿ ಗೆದ್ದಿರುವ ಭಾರತದ ವಾಣಿ ಕಪೂರ್‌ “ಆಸ್ಟ್ರೇಲಿಯನ್‌ ಲೇಡಿಸ್‌ ಪಿಜಿಎ ಟೂರ್‌’ (ಎಲ್‌ಪಿಜಿಎ)ಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ ಈ ಕೂಟಕ್ಕೆ ಪ್ರವೇಶ ಪಡೆದ ಭಾರತದ ಮೊದಲ ಭಾರತೀಯ ಗಾಲ#ರ್‌ ಎಂದೆನಿಸಿಕೊಂಡಿದ್ದಾರೆ.

Advertisement

ಅರ್ಹತಾ ಕೂಟದಲ್ಲಿ ಅಗ್ರ 20ರಲ್ಲಿ ಸ್ಥಾನ ಪಡೆದ ಆಟಗಾರ್ತಿಯರು ಆಸ್ಟ್ರೇಲಿಯನ್‌ ಎಲ್‌ಪಿಜಿಎ ಪ್ರವೇಶ ಪಡೆಯುತ್ತಾರೆ. ವಾಣಿ ಕಪೂರ್‌ ಜಂಟಿ 12ನೇ ಸ್ಥಾನ ಸಂಪಾದಿಸಿದ್ದಾರೆ.  ಈ ಅರ್ಹತಾ ಕೂಟದಲ್ಲಿ ಭಾರತದ ದೀಕ್ಷಾ ದಾಗಾರ್‌(30ನೇ ಸ್ಥಾನ), ಅಸ್ತಾ ಮದನ್‌ (37ನೇ ಸ್ಥಾನ) ಮತ್ತು ರಿಧಿಮಾ ದಿಲ್ವಾರಿ (57ನೇ ಸ್ಥಾನ) ಸ್ಪರ್ಧಿಸಿದ್ದರೂ, ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫ‌ಲಾದರು. ಮುಂಬರುವ ಬಲ್ಲಾರತ್‌ ಐಕಾನ್ಸ್‌ ಆಸ್ಟ್ರೇಲಿಯನ್‌ ಎಲ್‌ಪಿಜಿಎ ಪ್ರೊ ನಲ್ಲಿ ಈ ಮೂವರು ಆಟಗಾರ್ತಿಯರು ಸ್ಪರ್ಧಿಸುವುದರಿಂದ ಆಸ್ಟ್ರೇಲಿಯನ್‌ ಎಲ್‌ಪಿಜಿಎಗೆ ಪ್ರವೇಶ ಪಡೆಯಲು ಪ್ರಯತ್ನಿಸಬಹುದು.

ಈ ಗೆಲುವಿನಿಂದಾಗಿ ವಾಣಿ ಕಪೂರ್‌ಗೆ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ 3 ವನಿತಾ ಯುರೋಪಿಯನ್‌ ಟೂರ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿದೆ.

Advertisement

Udayavani is now on Telegram. Click here to join our channel and stay updated with the latest news.

Next