Advertisement
ಮಂಗಳವಾರ ಟೌನ್ ಹಾಲ್‌ನಲ್ಲಿ ನಡೆದ ಬಿಜೆಪಿ ನಗರ ಮಂಡಲ ಕಾರ್ಯಕಾರಿಣಿ ಸಭೆ, ನಗರಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು, ಕಾರ್ಯ ಕರ್ತರ ಅಭಿನಂದನ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು.
Related Articles
ಬಿಜೆಪಿಯಲ್ಲಿ ನಗರಮಂಡಲ, ಗ್ರಾಮಾಂತರ ಮಂಡಲ ವಿಭಜಿಸಿರುವುದು ಸಂಘಟನಾತ್ಮಕ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಇದರಿಂದ ಪಕ್ಷವನ್ನು ಬಲಾಡ್ಯ ವಾಗಿ ಸಂಘಟಿಸಲು ಸಾಧ್ಯವಿದೆ. ಪಕ್ಷ ನಮ್ಮ ಮನೆ ಎನ್ನುವ ನಿಟ್ಟಿನಲ್ಲಿ ಭಾವಿಸಿ, ದುಡಿಯಬೇಕು. ಪುತ್ತೂರಿಗೆ ಅಚ್ಚೇದಿನ್ ಬರುವುದು ಖಚಿತ ಎಂದರು. ಗೆಲುವು ಸಾಧಿಸಿದ ನಗರಸಭಾ ಸದಸ್ಯರು ಹಾಗೂ ಪರಾಜಿತ ಅಭ್ಯರ್ಥಿಗಳು ತಮ್ಮ ವಾರ್ಡ್‌ನ್ನು ಅಭಿವೃದ್ಧಿಗೊಳಿಸಿ, ಮತ ದಾರರ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದರು.
Advertisement
ಜನಪ್ರತಿನಿಧಿಯ ಕರ್ತವ್ಯಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಗೋಪಾಲಕೃಷ್ಣ ಹೇರಳೆ ಮಾತನಾಡಿ, ನಗರಸಭೆ ಉಪಚುನಾವಣೆ ಗೆಲುವೇ ಸಂಘಟಿತ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ ಯಾಗಿದೆ. ವಿಜೇತ ಅಭ್ಯರ್ಥಿಗಳಷ್ಟೇ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಜವಾಬ್ದಾರಿಯಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಜನಪ್ರತಿನಿಧಿಯಾದವನ ಆದ್ಯ ಕರ್ತವ್ಯವಾಗಿದೆ ಎಂದರು. ರಾಷ್ಟ್ರ ರಕ್ಷಣೆ ಭಾರತೀಯ ಜನತಾ ಪಾರ್ಟಿಯಿಂದ ಮಾತ್ರ ಸಾಧ್ಯ ಎನ್ನುವುದನ್ನು ಪ್ರಧಾನಿ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ನಾವು 3 ಸ್ಥಾನಗಳಲ್ಲಿ ಗೆದ್ದರೂ ಕೂಡಾ 6 ಸ್ಥಾನಗಳನ್ನು ಗೆದ್ದಂತೆ. ಸಂಘಟನಾತ್ಮಕ ಕಾರ್ಯ, ಕಾರ್ಯಕರ್ತರ ಉತ್ಸಾಹದಿಂದ ಗೆಲುವು ಸಾಧ್ಯವಾಗಿದೆ ಎಂದರು. ಈ ಚುನಾವಣೆಯಲ್ಲಿ ಉಳಿದ 21 ವಾರ್ಡಿನ ಕಾರ್ಯಕರ್ತರು ಕೂಡ ಬಿಜೆಪಿಯನ್ನು ಗೆಲ್ಲಿಸಲೇಬೇಕೆಂಬ ಶಪಥದೊಂದಿಗೆ ಶ್ರಮ ಪಟ್ಟಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ ನಗರಮಂಡಲ ಅಧ್ಯಕ್ಷ ಜೀವಂದರ್ ಜೈನ್ ಮಾತನಾಡಿ, 6 ವಾರ್ಡ್ ಗಳಲ್ಲೂ ಕಾರ್ಯಕರ್ತರು ಅದ್ಭುತವಾದ ಪರಿಶ್ರಮ ಪಟ್ಟಿದ್ದಾರೆ. 3 ವಾರ್ಡ್‌ಗಳಲ್ಲಿ ಅಲ್ಪ ಮತಗಳಿಂದ ಸೋತಿದ್ದರೂ ಮತಗಳಿಕೆ ಯಲ್ಲಿ ಮುಂದಿದ್ದೇವೆ ಎಂದರು. ಹಿಂದೆ 200- 300 ಮತಗಳ ಅಂತರದಿಂದ ಪರಾಭ ವಗೊಳ್ಳುತ್ತಿದ್ದೆವು. ಆದರೆ ಅದು ಇದೀಗ ಎರಡಂಕಿಗೆ ಕುಸಿದಿದೆ. ಇದರಿಂದ ವಾರ್ಡ್ ಗಳಲ್ಲಿ ಬಿಜೆಪಿಯ ಬೆಳವಣಿಗೆ ಎಂದರು. ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ ಮಾತನಾಡಿದರು. ವಿಜೇತ ಅಭ್ಯರ್ಥಿಗಳಾದ ಸುಂದರ ಪೂಜಾರಿ ಬಡಾವು, ರಮೇಶ್ ರೈ ಮೊಟ್ಟೆತ್ತಡ್ಕ ಹಾಗೂ ಶ್ಯಾಮಲಾ ವಸಂತ್‌ರನ್ನು ಅಭಿನಂದಿಸಲಾಯಿತು. ಪರಾಜಿತ ಅಭ್ಯರ್ಥಿಗಳನ್ನು ಕಾರ್ಯಕಾರಿಣಿಯಲ್ಲಿ ಗುರುತಿಸುವ ಕಾರ್ಯ ನಡೆಯಿತು. ವಿಜೇತ ಅಭ್ಯರ್ಥಿಗಳು ಗೆಲುವಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ನಿಧನ ಹೊಂದಿದ ಆರ್‌ಎಸ್‌ಎಸ್ ಹಿರಿಯ ನಾಯಕ ಮೈ.ಚ. ಜಯದೇವ್ ಅವರಿಗೆ ಮೌನ ಪ್ರಾರ್ಥನೆ ಮೂಲಕ ಗೌರವ ಸಲ್ಲಿಸಲಾಯಿತು. ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ ವರದಿ ಮಂಡಿಸಿದರು. ವಿವಿಧ ಮೋರ್ಚಾಗಳ ಪ್ರಧಾನ ಕಾರ್ಯದರ್ಶಿಗಳು ವರದಿ ಮಂಡಿಸಿದರು. ನಗರಮಂಡಲ ಪ್ರಧಾನ ಕಾರ್ಯದರ್ಶಿ ಗೌರಿ ಬನ್ನೂರು ಸ್ವಾಗತಿಸಿ, ನಗರಸಭೆ ಸದಸ್ಯ ಸುಜೀಂದ್ರ ಪ್ರಭು ವಂದಿಸಿದರು. ನಗರಮಂಡಲ ಯುವಮೋರ್ಚಾದ ಅಧ್ಯಕ್ಷ ಅನೀಶ್ ಬಡೆಕ್ಕಿಲ ಕಾರ್ಯಕ್ರಮ ನಿರ್ವಹಿಸಿದರು.