Advertisement

ಯಾರಿಗೆ ವಂದೇ ಭಾರತ್‌ ಟೆಂಡರ್‌?

01:09 PM Dec 02, 2022 | Team Udayavani |

200 ವಂದೇ ಭಾರತ್‌ ರೈಲುಗಳ ತಯಾರಿಕೆ ಮತ್ತು ಮುಂದಿನ 35 ವರ್ಷಗಳ ಕಾಲ ಅದರ ನಿರ್ವಹಣೆಗಾಗಿ 58,000 ಕೋಟಿ ರೂ.ಗಳ ಬೃಹತ್‌ ಯೋಜನೆಗಾಗಿ ಟೆಂಡರ್‌ ಕರೆಯ ಲಾಗಿದೆ.  ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌(ಬಿಎಚ್‌ಇಎಲ್‌) ಸೇರಿ ಐದು ಕಂಪನಿಗಳು ಬಿಡ್‌ನ‌ಲ್ಲಿ ಭಾಗವ ಹಿಸಿವೆ. ಟಿಟಾಗರ್‌ ವ್ಯಾಗನ್ಸ್‌ ಜತೆ ಸೇರಿಕೊಂಡು ಬಿಎಚ್‌ಇಎಲ್‌ ಈ ಟೆಂಡರ್‌ಗೆ ಬಿಡ್‌ ಮಾಡಿದೆ.

Advertisement

ಮುಂಗಡ 26 ಸಾವಿರ ಕೋಟಿ, ನಿರ್ವಹಣೆಗೆ 32 ಸಾವಿರ ಕೋಟಿ:

ವಂದೇ ಭಾರತ್‌ ರೈಲುಗಳನ್ನು ತಯಾರಿಸಿಕೊಡಲು ಮುಂಗಡ ಹಣವಾಗಿ 26,000 ಕೋಟಿ ರೂ., ನಂತರ ಮುಂದಿನ 35 ವರ್ಷಗಳ ಕಾಲ ರೈಲುಗಳ ನಿರ್ವಹಣೆಗಾಗಿ 32,000 ಕೋಟಿ ರೂ. ಪಾವತಿಸಲಾಗುತ್ತದೆ.

ಮೊದಲ ಬಾರಿಗೆ ಸ್ಲೀಪರ್‌ ಕೋಚ್‌ :

ಮೊದಲ ಬಾರಿಗೆ ಸ್ಲೀಪರ್‌ ಕೋಚ್‌ಗಳು ಇರುವ ವಂದೇ ಭಾರತ್‌ ರೈಲುಗಳ ತಯಾರಿಕೆಗೆ ಯೋಜನೆ ರೂಪಿಸಲಾ ಗಿದೆ. 2024ರ ಮೊದಲ ತ್ತೈಮಾಸಿಕದಲ್ಲಿ ಈ ರೈಲುಗಳು ಕಾರ್ಯಾ ರಂಭ ಮಾಡಲಿವೆ. ಚೇರ್‌ ಕಾರುಗಳು ಇರುವ 102 ವಂದೇ ಭಾರತ್‌  ಎಕ್ಸ್‌ಪ್ರೆಸ್‌ ರೈಲುಗಳ ತಯಾರಿಕೆಗೆ ಈಗಾಗಲೇ ಟೆಂಡರ್‌  ಪೂರ್ಣಗೊಂಡಿದೆ.

Advertisement

200: ವಂದೇ ಭಾರತ್‌ ರೈಲುಗಳ ತಯಾರಿಕೆ ಮತ್ತು ನಿರ್ವಹಣೆ

58,000: ಕೋಟಿ ರೂ. ಒಟ್ಟು ಯೋಜನಾ ವೆಚ್ಚ

26,000: ಕೋಟಿ ರೂ. ರೈಲುಗಳ ತಯಾರಿಕೆಗೆ

32,000: ಕೋಟಿ ರೂ. ರೈಲುಗಳ ನಿರ್ವಹಣೆಗೆ

45: ಟೆಂಡರ್‌ ತೆರೆಯಲು ಬೇಕಾಗಿರುವ ದಿನದಶು

130: ಕೋಟಿ ರೂ. 16 ಕೋಚ್‌ಗಳ ಒಂದು ವಂದೇ ಭಾರತ್‌ ತಯಾರಿಕೆ ವೆಚ್ಚ

35: ವರ್ಷಗಳು ಕಂಪನಿಗಳಿಂದ ರೈಲುಗಳ ನಿರ್ವಹಣೆ

2024: ಸ್ಲೀಪರ್‌ ಕೋಚ್‌ಗಳಿರುವ ರೈಲು ಕಾರ್ಯಾರಂಭ ಸಾಧ್ಯತೆ

2026: ವೇಳೆಗೆ ವಿದೇಶಗಳಿಗೆ ವಂದೇ ಭಾರತ್‌ ರೈಲುಗಳು ರಫ್ತು ಗುರಿ

ಬಿಡ್‌ನ‌ಲ್ಲಿ ಭಾಗವಹಿಸಿದ ಕಂಪನಿಗಳು :

ಬಿಎಚ್‌ಇಎಲ್‌-ಟಿಟಾಗರ್‌ ವ್ಯಾಗನ್ಸ್‌, ಅಲ್ಸ್ಟಾಮ್‌, ಸ್ಟಾಡ್ಲರ್‌ ರೈಲ್‌-ಮೇಧಾ, ಮೀಡಿಯಾ ಸವೊì ಡ್ರೈವ್ಸ್‌, ಬಿಇಎಂಎಲ್‌-ಸೀಮೆನ್ಸ್‌, ಟ್ರಾನ್ಸ್‌ ಮ್ಯಾಶ್‌ಹೋಲ್ಡಿಂಗ್‌(ಟಿಎಂಎಚ್‌).

Advertisement

Udayavani is now on Telegram. Click here to join our channel and stay updated with the latest news.

Next