Advertisement

ವೈಷ್ಣೋದೇವಿಯಿಂದ ಮರಳಿದ ಗುಜರಾತ್‌ ಮಹಿಳಾ ಯಾತ್ರಿ ಸಾವು

10:46 AM Feb 18, 2019 | udayavani editorial |

ಜಮ್ಮು : ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮರಳುತ್ತಿದ್ದ 55 ವರ್ಷದ ಮಹಿಳಾ ಯಾತ್ರಿಯೋರ್ವರು ಹೃದಯ ಸ್ತಂಭನದಿಂದ ನಿಧನ ಹೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಗುಜರಾತ್‌ನ ಖೇದಬ್ರಹ್ಮ-ಕಾಂತಾ ನಿವಾಸಿಯಾಗಿರುವ ಪ್ರೇಘನಾ ಬೆಹೆನ್‌ ಅವರು ನಿನ್ನೆ ಭಾನುವಾರ ಕಾಟ್ರಾದ ಮೂಲ ಶಿಬಿರದಲ್ಲಿನ ತಮ್ಮ ಹೊಟೇಲ್‌ ಕೋಣೆ ತಲುಪುತ್ತಿದ್ದಂತೆಯೇ ಅಲ್ಲಿ ಕುಸಿದು ಬಿದ್ದು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next