ಅಹಮದಾಬಾದ್: ಗುಜರಾತ್ ಕಾಂಗ್ರೆಸ್‌ನ ಮಾಜಿ ನಾಯಕ ಶಂಕರಸಿನ್ಹ ವಘೇಲಾ “ಜನ ವಿಕಲ್ಪ’ ಎಂಬ ಹೊಸ ರಾಜಕೀಯ ರಂಗ ಹುಟ್ಟು ಹಾಕು ವುದಾಗಿ ಸೋಮವಾರ ಘೋಷಿಸಿದ್ದಾರೆ. ಜತೆಗೆ ಶೀಘ್ರದಲ್ಲಿಯೇ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆ ಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ “ಜನ ವಿಕಲ್ಪ’ದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸು ವುದಾಗಿ ಹೇಳಿದ್ದಾರೆ.
ಮೂಲತಃ ಈ ಸಂಘಟನೆ ಅಹಮ ದಾಬಾದ್‌ನ ವೃತ್ತಿಪರರ ಸಂಘಟನೆ ಯಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾಗಿ ವೇದಿಕೆ ರಚಿಸ ಬೇಕು ಮತ್ತು ಅದರ ನಾಯಕತ್ವ ವಹಿಸಬೇಕೆಂದು ಸಂಘಟನೆ ತಮ್ಮನ್ನು ಒತ್ತಾಯಿಸಿತ್ತು. ಗುಜರಾತ್‌ನ ಹೆಚ್ಚಿನ ಜನರು ತಮ್ಮನ್ನು ಮುಖ್ಯಮಂತ್ರಿ ಯನ್ನಾಗಿ ನೋಡಲು ಬಯಸಿದ್ದಾರೆ ಎಂದಿದ್ದಾರೆ ವಘೇಲಾ. ಆದರೆ ತಾವು ಚುನಾವಣೆಯಲ್ಲಿ ಸ್ಪರ್ಧಿ ಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ, ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನಾಗಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನ್ನಾಗಲಿ ವೈಯಕ್ತಿಕವಾಗಿ ಟೀಕಿಸುವು ದಿಲ್ಲ ಎಂದೂ ಹೇಳಿದ್ದಾರೆ. ಹೊಸ ಸಂಘಟನೆಯಲ್ಲಿ ಇತರ ಪಕ್ಷಗಳಲ್ಲಿದ್ದಂತೆ ಹೈಕಮಾಂಡ್ ಪದ್ಧತಿ ಇರುವುದಿಲ್ಲ ಎಂದಿದ್ದಾರೆ ವಘೇಲಾ. ಗುಜರಾತ್
ನಲ್ಲಿ ಗೆಲುವಿಗಾಗಿ ಶ್ರಮಿಸುತ್ತಿರುವ ಕಾಂಗ್ರೆಸ್‌ಗೆ ವಘೇಲಾರ ಈ ನಿರ್ಧಾರ ಬಿಸಿತುಪ್ಪವಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.