ಹೊಸದಿಲ್ಲಿ: ತಾವು ತಯಾರಿಸಿರುವ ಕೋವಿಡ್ ಲಸಿಕೆಯು ಭಾರತದಲ್ಲಿ ರೂಪಾಂತರಗೊಂಡಿರುವ ಸೋಂಕಿಗೆ ಪರಿಣಾಮಕಾರಿಯಾಗಬಲ್ಲದು ಎಂದು ಲಸಿಕಾ ಉತ್ಪಾದನೆ ಸಂಸ್ಥೆ ಫೈಜರ್ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಅದಲ್ಲದೆ 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಪ್ರಾಯದವರಿಗೆ ಈ ಲಸಿಕೆಯನ್ನು ನೀಡಬಹುದಾಗಿದೆ. ಎರಡರಿಂದ ಎಂಟು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಇದನ್ನು ತಿಂಗಳುಗಳ ಕಾಲ ಸಂಗ್ರಹಿಸಿಡಬಹುದಾಗಿದೆ ಎಂದು ಫೈಜರ್ ಹೇಳಿದೆ.
ಇದನ್ನೂ ಓದಿ:ಕೋವಿಡ್ ನಿಧಿಗೆ ದಾನ ಮಾಡಲು ತನ್ನ ಪ್ರೀತಿಯ ಆಡುಗಳನ್ನು ಮಾರಿದ 61 ರ ವೃದ್ಧೆ.!
ಸರ್ಕಾರ ಮತ್ತು ಫೈಜರ್ ಕಂಪೆನಿ ಅಧಿಕಾರಿಗಳ ನಡುವೆ ಸರಣಿ ಮಾತುಕತೆ ನಡೆಯುತ್ತಿದೆ. ಜುಲೈ ಮತ್ತು ಅಕ್ಟೋಬರ್ ಒಳಗೆ ಐದು ಕೋಟಿ ಡೋಸ್ ಲಸಿಕೆ ನೀಡಲು ಫೈಜರ್ ಮುಂದಾಗಿದೆ.
ಭಾರತವು ಪ್ರಸ್ತುತ ಮುಖ್ಯವಾಗಿ ಎರಡು ‘ ದೇಶೀಯ ನಿರ್ಮಿತ ‘ ಲಸಿಕೆಗಳನ್ನು ಬಳಸುತ್ತಿದೆ. ಸೀರಮ್ ಇನ್‌ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್, ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ನನ್ನು ದೇಶದಲ್ಲಿ ನೀಡಲಾಗುತ್ತಿದೆ. ಸದ್ಯ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ದೇಶದಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ.