Advertisement

ಗ್ರಾಮೀಣದಲ್ಲಿ  ಲಸಿಕೆ  ಅಭಾವ

06:00 PM Jul 26, 2021 | Team Udayavani |

ದೇವನಹಳ್ಳಿ: ಕೊರೊನಾ ತಡೆಗಟ್ಟಲುಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು.ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಲಸಿಕೆಅಭಾವ ತಲೆದೂರಿದ್ದು, ಶೇ.50ರಷ್ಟು ಮಾತ್ರಲಸಿಕೆ ಹಾಕಲಾಗಿದೆ ಎಂದು ಆಲೂರುದುದ್ದನಹಳ್ಳಿ ಗ್ರಾಪಂ ಅಧ್ಯಕ್ಷೆ ಗೌರಮ್ಮ ರಾಮಣ್ಣತಿಳಿಸಿದರು.

Advertisement

ತಾಲೂಕಿನ ದಿನ್ನೂರು ಗ್ರಾಮದಲ್ಲಿ ನಡೆದಕೋವಿಡ್‌ ಲಸಿಕೆ ಅಭಿಯಾನದಲ್ಲಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಶೇ.50ರಷ್ಟುಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ.ಯಾವುದೇ ಪಾಸಿಟೀವ್‌ ಪ್ರಕರಣಗಳು ಇಲ್ಲ.ವ್ಯಾಕ್ಸಿನೇಷನ್‌ ಸಮಸ್ಯೆ ಹೆಚ್ಚು ಇದೆ. ಆದಷ್ಟುವ್ಯಾಕ್ಸಿನ್‌ ಸರಿದೂಗಿಸಲು ಆರೋಗ್ಯ ಇಲಾಖೆಮುಂದಾಗಬೇಕು. ಕೊರೊನಾ ಬಗ್ಗೆಯಾರೂ ನಿರ್ಲಕ್ಷ್ಯ ಮಾಡಬೇಡಿ ಎಂದುಹೇಳಿದರು.

ಕುಂದಾಣ ವಿಎಸ್‌ಎಸ್‌ಎನ್‌ ಅಧ್ಯಕ್ಷದಿನ್ನೂರು ರಾಮಣ್ಣ ಮಾತನಾಡಿ, ಸುಣಘಟ್ಟ,ಬನ್ನಿಮಂಗಲ, ಆಲೂರು, ಬೀರಸಂದ್ರ ಗ್ರಾಮಗ Ù ‌ಲ್ಲಿ ಕೋವಿಡ್‌ ಲಸಿಕೆಯ ಅಭಾವವಿದೆ.ಈಗಾಗಲೇ ಕಡಿಮೆ ಜನಸಂಖ್ಯೆಯಗ್ರಾಮಗಳಲ್ಲಿ ಲಸಿಕೆ ಹಾಕಲಾಗಿದೆ. ಆದರೆ,ಲಸಿಕೆ ಪೂರ್ಣ ಪ್ರಮಾಣದಲ್ಲಿ ನೀಡಿದರೆ,ಹೆಚ್ಚು ಅನುಕೂಲವಾಗಲಿದೆ.

ಹೊಸದಾಗಿಲಸಿಕೆ ಹಾಕಿಸಿಕೊಳ್ಳಲು ಬರುತ್ತಿದ್ದು, ಲಸಿಕೆಯಪ್ರಮಾಣದಲ್ಲಿ ಹಂಚಿಕೆ ಮಾಡುವ ಕಾರ್ಯಮಾಡಲಾಗುತ್ತಿದೆ ಎಂದು ಹೇಳಿದರು.ಆಲೂರು ದುದ್ದನಹಳ್ಳಿ ಗ್ರಾಪಂಉಪಾಧ್ಯಕ್ಷೆ ಕಾಂತ ಮುನಿರಾಜು ಮತ್ತುಸದಸ್ಯರು, ಮುಖಂಡರು, ಆರೋಗ್ಯಇಲಾಖೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next