Advertisement

ಪಡುಅಲೆವೂರಿಗೆ ಲಸಿಕೆ ಕೇಂದ್ರ ಶಿಫ್ಟ್ : ವೈದ್ಯಾಧಿಕಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

05:35 PM May 24, 2021 | Team Udayavani |

ಕಟಪಾಡಿ : ಮಣಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಬೇಕಿದ್ದ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಲು ದೂರದ ಪಡುಅಲೆವೂರಿಗೆ ಹೋಗಿ ಪಡೆದುಕೊಳ್ಳಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿದ ವೈದ್ಯಾಧಿಕಾರಿ ವಿರುದ್ಧ ಗ್ರಾ.ಪಂ. ಅಧ್ಯಕ್ಷ ಹಸನ್ ಶೇಖ್ ಅಹಮದ್, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಘರಂ ಆದ ಘಟನೆಯು ಮೇ 24ರಂದು ಘಟಿಸಿದೆ.

Advertisement

ಆ ಬಗ್ಗೆ ಅರೋಗ್ಯ ಕೇಂದ್ರದ ಮುಂದೆ ಒಟ್ಟುಗೂಡಿದ ಸಾರ್ವಜನಿಕರು ಲಸಿಕಾ ಕೇಂದ್ರದ ಸ್ಥಳಾಂತರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಲಸಿಕೆಯ ಕಾರಣಕ್ಕಾಗಿ ಸುಮಾರು 350 ರೂ. ರಿಕ್ಷಾ ಬಾಡಿಗೆ ಭರಿಸಿ ದೂರ ಪಯಣಿಸಿ ಲಸಿಕೆಯನ್ನು ಪಡೆದುಕೊಳ್ಳಬೇಕಾದ ಪ್ರಮೇಯ ಸೃಷ್ಟಿಸಿದ್ದು, ಸರಿಯಲ್ಲಿ ಎಂದು ಅಸಹನೆಯನ್ನು ಹೊರಹಾಕಿದರು.

ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬಂದವರಿಗೂ ಕಿಟಕಿಯಲ್ಲಿಯೇ ವಿಚಾರಿಸಿ ಔಷಧಿ ನೀಡುವುದು, ಕೆಲವರನ್ನು ಹಿಂದಕ್ಕೆ ಕಳುಹಿಸಿರುವುದು, ಬಿಸಿಲಿನಲ್ಲಿ, ಮಳೆಯಲ್ಲಿ ಕೊಡೆ ಹಿಡಿದು ರೋಗಿಗಳು ನಿಲ್ಲಬೇಕಾದ ಸ್ಥಿತಿಗಳ ಬಗ್ಗೆ ಗಮನ ಸೆಳೆದಿದ್ದು, ರೋಗಿಗಳನ್ನು ಸಮರ್ಪಕವಾಗಿಯೇ ಉಪಚರಿಸುವಂತೆ ಒತ್ತಾಯಿಸಿದ್ದರು.

ಪಿ.ಹೆಚ್.ಸಿ. ವೈದ್ಯಾಧಿಕಾರಿ ಡಾ|ಅಂಜಲಿ ವಾಗ್ಳೆ ಅವರು ಬಳಿಕ ಸ್ಥಳಕ್ಕಾಗಮಿಸಿದ ಸಾರ್ವಜನಿಕರೊಂದಿಗೆ ಚರ್ಚಿಸಿದ್ದು, ಸರಕಾರದ ಸೂಚನೆಯನ್ನು ಪಾಲಿಸಬೇಕಿದ್ದು, ಎಲ್ಲರಿಗೂ ಕೇಂದ್ರ ಬಿಂದುವಾಗಲಿ ಎಂಬ ಉದ್ದೇಶದಿಂದ ಪಡು ಅಲೆವೂರಿಗೆ ಸ್ಥಳಾಂತರಿಸಲಾಗಿದೆ. ಸ್ಥಳೀಯವಾಗಿಯೇ ವ್ಯವಸ್ಥೆ ಕಲ್ಪಿಸಿದಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಮಜಾಯಿಷಿಕೆ ನೀಡಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next