Advertisement

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

01:49 AM Jan 07, 2025 | Team Udayavani |

ಪಟ್ನಾ: ಬಿಹಾರದ ರಾಜಧಾನಿ ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ಶಿವನ ದೇವಾಲಯ ಪತ್ತೆಯಾಗಿದೆ. ಹಲವಾರು ವರ್ಷಗಳಿಂದ ಕಸದ ರಾಶಿ ಹಾಕಲಾಗಿದ್ದ ಸ್ಥಳದಲ್ಲಿ ನೆಲ ಕುಸಿದ ಕಾರಣ ನೆಲಮಾಳಿಗೆಯಂತಹ ಪ್ರದೇಶದಲ್ಲಿ ಈ ದೇವಾಲಯ ಕಾಣಿಸಿಕೊಂಡಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಬರುವುದಕ್ಕೂ ಮುನ್ನವೇ ಸ್ಥಳೀಯರು ಅಲ್ಲಿನ ಅವಶೇಷಗಳನ್ನು ತೆರವುಗೊಳಿಸಿ, ಸ್ವತ್ಛಗೊಳಿಸಿ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ. ಈ ದೇವಾಲಯ ಪತ್ತೆಯಾದ ಜಾಗ ಈ ಹಿಂದೆ ಮಠವೊಂದಕ್ಕೆ ಸೇರಿತ್ತು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next