ಶುಕ್ರವಾರ ಒಂದೇ ದಿನ ಒಂದು ಕೋಟಿಯಷ್ಟು ಲಸಿಕೆ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯ ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ. ಕೋವಿನ್ ಪೋರ್ಟಲ್‌ನ ಮಾಹಿತಿ ಪ್ರಕಾರ ಶುಕ್ರವಾರ ರಾತ್ರಿ ಒಂದು ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿತ್ತು. ಜತೆಗೆ ದೇಶದ 14 ಕೋಟಿ ಮಂದಿ ಎರಡೂ ಡೋಸ್ ಪಡೆದಿದ್ದಾರೆ. ಒಟ್ಟು 62 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ.
Advertisement
ಕರ್ನಾಟಕದಲ್ಲಿ ಶುಕ್ರವಾರ 10 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಏಳು ಲಕ್ಷ ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಈ ಮೂಲಕ ದಾಸ್ತಾನು ಕೊರತೆಯಿಂದ ದೇಶ ಮತ್ತು ರಾಜ್ಯದಲ್ಲಿ ನಿಧಾನಗತಿಯಲ್ಲಿದ್ದ ಅಭಿಯಾನಕ್ಕೆ ಭಾರೀ ವೇಗ ಸಿಕ್ಕಂತಾಗಿದೆ.
ದೇಶದಲ್ಲಿ ಅತೀ ಹೆಚ್ಚು ಲಸಿಕೆ ವಿತರಣೆ ಬೆಂಗಳೂರಿನಲ್ಲಿ ನಡೆದಿದ್ದು, 1.9 ಲಕ್ಷ ಮಂದಿಗೆ ವಿತರಿಸಲಾಗಿದೆ. ನಗರದ ಒಟ್ಟು ಜನಸಂಖ್ಯೆಯಲ್ಲಿ ಶೇ. 75ರಷ್ಟು ಮಂದಿ ಈಗಾಗಲೇ ಲಸಿಕೆ ಪಡೆದಿದ್ದಾರೆ. ಈ ಮೂಲಕ ಲಸಿಕೆ ಗುರಿಸಾಧನೆಯಲ್ಲಿ ದೇಶದ ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಶುಕ್ರವಾರ ಉತ್ತರ ಪ್ರದೇಶ 27 ಲಕ್ಷ ಮಂದಿಗೆ ಲಸಿಕೆ ವಿತರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
Related Articles
ರಾಜ್ಯದಲ್ಲಿ ಶುಕ್ರವಾರದ ಅಂತ್ಯಕ್ಕೆ 3,99,50,503 ಡೋಸ್ ಲಸಿಕೆ ವಿತರಿಸಲಾಗಿದೆ. ಶನಿವಾರ ನಾಲ್ಕು ಕೋಟಿಯ ಗಡಿ ದಾಟಲಿದೆ. 4.95 ಕೋಟಿ ಮಂದಿ ಲಸಿಕೆ ವ್ಯಾಪ್ತಿಯಲ್ಲಿದ್ದು, ಈ ಪೈಕಿ ಈಗಾಗಲೇ 3.04 ಕೋಟಿ ಮಂದಿ ಮೊದಲ ಡೋಸ್, 96.4 ಲಕ್ಷ ಮಂದಿ ಎರಡೂ ಡೋಸ್ ಪಡೆದಿದ್ದಾರೆ. ಈ ಮೂಲಕ ಶೇ. 62ರಷ್ಟು ಗುರಿ ಸಾಧನೆಯಾಗಿದೆ.
Advertisement