Advertisement

ರಾಸುಗಳ ಕಾಲುಬಾಯಿ ರೋಗ ತಡೆಗೆ ಲಸಿಕೆ ಹಾಕಿಸಿ

05:22 PM Jun 11, 2021 | Team Udayavani |

ದೊಡ್ಡಬಳ್ಳಾಪುರ: ಕಾಲುಬಾಯಿ ರೋಗವನ್ನುತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಸುಗಳಿಗೆ ಲಸಿಕೆಯನ್ನು ಹಾಕಿಸಬೇಕು. ರೋಗಬಂದ ರಾಸುಗಳನ್ನು ಆರೋಗ್ಯವಂತ ದನಗಳಿಂದ ಬೇರ್ಪಡಿಸಿ, ಕೂಡಲೇ ಪಶು ವೈದ್ಯರಿಂದ ಸೂಕ್ತಚಿಕಿತ್ಸೆ ನೀಡಬೇಕು ಎಂದು ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಅಂಜನಪ್ಪ ತಿಳಿಸಿದರು.

Advertisement

ಪಶುಪಾಲನಾ ಮತ್ತು ಪಶು ವೈದ್ಯ ಸೇವಾಇಲಾಖೆ ವತಿಯಿಂದ ನಗರಸಭೆ ವ್ಯಾಪ್ತಿ ಹಾಗೂನಗರದಿಂದ 5 ಕಿ.ಮೀ ಸುತ್ತಲಿನ ಗ್ರಾಮಗಳಲ್ಲಿಗುರುವಾರ ಹಮ್ಮಿಕೊಂಡಿದ್ದ ಕಾಲುಬಾಯಿ ಲಸಿಕಾಕಾರ್ಯಕ್ರಮದಲ್ಲಿ ಮಾತನಾಡಿ, ಕಾಲುಬಾಯಿರೋಗಕ್ಕೆ ತುತ್ತಾದ ರಾಸುವಿನ ಬಾಯಿಂದ ಜೊಲ್ಲುಸೋರಲು ಆರಂಭವಾಗುತ್ತದೆ. ರಾಸುವಿನಬಾಯಲ್ಲಿ ಸಣ್ಣ ಗುಳ್ಳೆಗಳು ಆಗುವ ಮೂಲಕಉಣ್ಣಾಗಲಿದೆ. ಇದರಿಂದ ಹುಲ್ಲು ತಿನ್ನಲುಸಾಧ್ಯವಾಗದೇ ರಾಸು ನಿಶಕ್ತಿಯಾಗುತ್ತದೆ.ರಾಸುವಿನ ಗೊರಸುಗಳಲ್ಲೂ ಗಾಯಗಳಾಗಿನಡೆಯಲು ಕಷ್ಟವಾಗುತ್ತದೆ. ಈ ಎಲ್ಲಾ ಲಕ್ಷಣಗಳುಆರಂಭವಾಗುತ್ತಿದ್ದಂತೆ ಸೂಕ್ತ ಸಮಯಕ್ಕೆ ಚಿಕಿತ್ಸೆದೊರೆಯದೇ ಇದ್ದರೆ ರಾಸು ಮೃತಪಡುವಅಪಾಯವೇ ಹೆಚ್ಚಾಗಿರುತ್ತದೆ ಎಂದು ಹೇಳಿದರು.

ರೈತರು ಎಚ್ಚರವಹಿಸಿ: ರಾಸುಗಳು ಗುಂಪಾಗಿಮೇವು ಮೇಯಲು ಕೆರೆ ಅಂಗಳ ಮತ್ತಿತರೆಕಡೆಗಳಲ್ಲಿ ಸೇರಿದಾಗಲು ಕಾಲುಬಾಯಿ ರೋಗಒಂದು ರಾಸುವಿನಿಂದ ಮತ್ತೂಂದು ರಾಸುವಿಗೆಹರಡಲಿದೆ. ರೈತರು ಎಚ್ಚರ ವಹಿಸಬೇಕು.ರಾಸುಗಳ ಗಾಯಗಳ ಸೂಕ್ತ ಉಪಚಾರದಜೊತೆಯಲ್ಲಿ ಖನಿಜ ಮಿಶ್ರಣ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳನ್ನು ಬಳಸುವುದರಿಂದ ಜಾನುವಾರುಗಳು ನಿಶ್ಯಕ್ತವಾಗುವುದನ್ನುತಪ್ಪಿಸಬಹುದು ಎಂದರು.

ಲಸಿಕೆ ಹಾಕಲು ವೈದ್ಯರ ತಂಡ ನಿಯೋಜನೆ:ಕಾಲುಬಾಯಿ ಲಸಿಕೆ ಹಾಕಲು ಹತ್ತು ಜನ ಪಶುವೈದ್ಯರ ತಂಡಗಳನ್ನು ನಿಯೋಜಿಸಲಾಗಿದೆ. ಕಸಬಾಯೋಬಳಿಯಲ್ಲಿ 1,568 ಹಸುಗಳು, 73 ಎಮ್ಮೆಗಳುಸೇರಿದಂತೆ ಒಟ್ಟು 1,651 ಇವೆ. ಈ ಎÇÉಾರಾಸುಗಳಿಗೂ ಸಾಮೂಹಿಕವಾಗಿ ಕಾಲುಬಾಯಿಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.ಎಲ್ಲಾ ಗ್ರಾಮದಲ್ಲೂ ಲಸಿಕೆ ಹಾಕಿ: ತಾಲೂಕಿನವಿವಿಧ ಗ್ರಾಮಗಳಲ್ಲಿ ಹಸುಗಳನ್ನು ಕಾಲುಬಾಯಿ ರೋಗವಿದ್ದು, ರೈತರು ತೀವ್ರ ಸಂಕಷ್ಟಕ್ಕೆಸಿಲುಕುವಂತಾಗಿದೆ. ಕಸಬಾ ಹೋಬಳಿ, ನಗರಸಭೆವ್ಯಾಪ್ತಿಯಲ್ಲಿ ಲಸಿಕೆ ಹಾಕಿದಂತೆ ಇತರೆ ಗ್ರಾಮಗಳಲ್ಲಿಯೂ ರಾಸುಗಳಿಗೆ ಕಾಲುಬಾಯಿ ಲಸಿಕೆಹಾಕಬೇಕಿದೆ ಎಂದು ರೈತರು ಮನವಿ ಮಾಡಿದ್ದಾರೆ.ಪಶು ವೈದ್ಯರಾದ ಡಾ.ಎಸ್‌.ವಿಶ್ವನಾಥ್‌,ಕುಚ್ಚಪ್ಪನ ಪೇಟೆ ಡೇರಿ ಕಾರ್ಯದರ್ಶಿ ರಾಜೇಂದ್ರಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next