Advertisement

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ

02:14 PM Dec 29, 2024 | Team Udayavani |

ಮಂಡ್ಯ: ಅಪ್ರಾಪ್ತರಿಬ್ಬರ ಪ್ರೇಮ ಪ್ರಕರಣದಲ್ಲಿ ಜಿಲೆಟಿನ್ ಸ್ಪೋಟಿಸಿಕೊಂಡು ಪ್ರೇಮಿಯೊಬ್ಬ ಮೃತಪಟ್ಟ ಘಟನೆ ಮಂಡ್ಯದ ನಾಗಮಂಗಲದ ಕಾಳೇನಹಳ್ಳಿಯಲ್ಲಿ ನಡೆದಿದೆ.

Advertisement

ನಾಗಮಂಗಲದ ಬಸವೇಶ್ವರ ನಗರದ ಯುವಕನ ಕಾಳೇನಹಳ್ಳಿಯ ಅಪ್ರಾಪ್ತ ಯುವತಿಯನ್ನು ಪ್ರೀತಿಸುತ್ತಿದ್ದ. ಕಳೆದ ವರ್ಷ ಇವರಿಬ್ಬರು ಮನೆ ತೊರೆದು ಓಡಿ ಹೋಗಿದ್ದರು. ಆ ವೇಳೆ ಯುವಕನ ವಿರುದ್ದ ಪೋಕ್ಸೋ ಕಾಯ್ದೆ ಪ್ರಕರಣ ದಾಖಲಾಗಿತ್ತು.

ರಾತ್ರಿ ಯುವತಿಯ ಮನೆ ಬಳಿ ಹೋಗಿದ್ದ ಯುವಕ, ಬಂಡೆಗಳನ್ನು ಸಿಡಿಸುವ ಜಿಲೆಟಿನ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜಿಲೆಟಿನ್ ಸಿಡಿದ ಪರಿಣಾಮ ಯುವಕ ದೇಹ ಚಿದ್ರ-ಚಿದ್ರವಾಗಿದೆ.

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next