Advertisement

ಹಂಗರಗಿಯಲ್ಲಿ ಹಿರಿಯ ನಾಗರಿಕರಿಗೆ ಲಸಿಕೆ

06:04 PM Apr 11, 2021 | Team Udayavani |

ಗುಳೇದಗುಡ್ಡ: ಹಂಗರಗಿಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ ನೀಡಲಾಯಿತು. ಲಸಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಸದಸ್ಯೆ ಸರಸ್ವತಿ ಮೇಟಿ,ಗ್ರಾಮದ ಜನರಿಗೆ ಸರಕಾರದಿಂದ ನೀಡುವ ಕೋವಿಡ್‌ ಲಸಿಕೆ ಉತ್ತಮವಾಗಿದ್ದು,ಎಲ್ಲರೂ ಧೈರ್ಯದಿಂದ ಹಾಕಿಸಿಕೊಂಡು ಆರೋಗ್ಯವಾಗಿರಲು ತಿಳಿಸಿದರು.

Advertisement

ಕಾಂಗ್ರೆಸ್‌ ಮುಖಂಡ ಪ್ರಕಾಶ ಮೇಟಿ ಮಾತನಾಡಿ, ದೇಶದಲ್ಲಿ ಕೋವಿಡ್‌ ಲಸಿಕೆನೀಡಲು ಆರಂಭಿಸಲಾಗಿದೆ. ನಾನು ಕೂಡಕಟಗೇರಿಯ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಂಡಿರುವೆ. ಯಾವುದೇ ತೊಂದರೆ ಆಗಿಲ್ಲ. ಎಲ್ಲರೂ ಲಸಿಕೆಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಲಸಿಕೆ ಹಾಕಿಸಿಕೊಳ್ಳುವ ಮೂಲಕ ಬಾದಾಮಿ ತಾಪಂ ಮಾಜಿ ಅಧ್ಯಕ್ಷ ಪ್ರಮೋದ ಕವಡಿಮಟ್ಟಿ ಚಾಲನೆ ನೀಡಿ, ಪ್ರತಿಯೊಬ್ಬರೂಲಸಿಕೆ ಹಾಕಿಸಿಕೊಂಡು ಕೊರೊನಾ ರೋಗಬರದಂತೆ ಜಾಗೃತರಾಗೋಣ ಎಂದು ಮನವಿ ಮಾಡಿದರು.

ಹಿರಿಯ ಆರೋಗ್ಯ ಸಹಾಯಕ ಬಿ.ಎಸ್‌. ಮದ್ಲಿ ಲಸಿಕಾ ಕಾರ್ಯಕ್ರಮದನೇತೃತ್ವ ವಹಿಸಿ ಮಾತನಾಡಿ, ಗ್ರಾಮದ ಜನರಲ್ಲಿ ಭಯಬೇಡ 45 ವರ್ಷಮೇಲ್ಪಟ್ಟವರು ಪ್ರತಿಯೊಬ್ಬರೂ ಲಸಿಕೆಹಾಕಿಸಿಕೊಂಡು ಆರೋಗ್ಯವಂತರಾಗಿರಲು ವಿನಂತಿಸಿದರು.

44 ಜನರಿಗೆ ಸೋಂಕು :

Advertisement

ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆ ಅರ್ಧ ಶತಕದತ್ತ ಬಂದಿದ್ದು, ಶನಿವಾರ ಒಂದೇ ದಿನ 44 ಜನರಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ 45 ಜನ ಗುಣಮುಖರಾಗಿದ್ದು, ಹೊಸದಾಗಿ 44 ಜನರಿಗೆ ದೃಢಪಟ್ಟಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 14127ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆಒಟ್ಟು 13815 ಜನ ಕೋವಿಡ್‌ನಿಂದಗುಣಮುಖರಾಗಿದ್ದಾರೆ. ಕೋವಿಡ್‌ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗುತ್ತಿದ್ದ 2838 ಸ್ಯಾಂಪಲ್‌ಗ‌ಳ ವರದಿಇನ್ನೂ ಬರಬೇಕಿದೆ. 176 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next