Advertisement

ನೀಟ್‌ ಮೆರಿಟ್‌ ಪ್ರಕಾರ ಖಾಸಗಿ ವೈದ್ಯಕೀಯ ಸೀಟು ತುಂಬಿ: ಸುಪ್ರೀಂ

07:09 PM May 25, 2018 | Team Udayavani |

ಹೊಸದಿಲ್ಲಿ : ಖಾಸಗಿ ಅನುದಾನರಹಿತ ವೈದ್ಯಕೀಯ ಕಾಲೇಜುಗಳಲ್ಲಿ ಖಾಲಿ ಇರುವ ಸ್ನಾತಕೋತ್ತರ ಸೀಟುಗಳನ್ನು ನೀಟ್‌ ಪರೀಕ್ಷೆಯ ಮೆರಿಟ್‌ ಕ್ರಮಾಂಕದ ಪ್ರಕಾರ ಭರ್ತಿ ಮಾಡಬಹುದೆಂಬ ಸಲಹೆಯನ್ನು ಸುಪ್ರೀಂ ಕೋರ್ಟ್‌ ಇಂದು ಒಪ್ಪಿಕೊಂಡಿತು.

Advertisement

ಖಾಸಗಿ ಅನುದಾನರಹಿತ ವೈದ್ಯಕೀಯ ಕಾಲೇಜುಗಳಲ್ಲಿ 2018-19ರ ಸಾಲಿನ ಸಾತ್ನಕೋತ್ತರ ವೈದ್ಯಕೀಯ ಸೀಟುಗಳು ಶೇ.41.95ರಷ್ಟು ಖಾಲಿ ಉಳಿದಿವೆ ಎಂದು ಮೆಡಿಕಲ್‌ ಕೌನ್ಸಿಲ್‌ ಆಫ್ ಇಂಡಿಯಾ (ಎಂಸಿಐ) ಉತ್ತರ ಪ್ರದೇಶ ಪ್ರಕರಣವೊಂದರ ವಿಚಾರಣೆಯ ವೇಳೆ ಹೇಳಿರುವುದನ್ನು ಅನುಸರಿಸಿ ಜಸ್ಟಿಸ್‌ ಎ ಎಂ ಖಾನ್ವಿಲ್ಕರ್‌ ಮತ್ತು ಜಸ್ಟಿಸ್‌ ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಪೀಠವು, ಈ ಖಾಲಿ ಸೀಟುಗಳನ್ನು ನೀಟ್‌ ಮೆರಿಟ್‌ ಲಿಸ್ಟ್‌ ಪ್ರಕಾರ ಭರ್ತಿ ಮಾಡಬಹುದೆಂಬ ಸಲಹೆಗೆ ಅನುಮೋದನೆ ನೀಡಿತು.

ಈ ಸಂದರ್ಭದಲ್ಲಿ ಕೇಂದ್ರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಪಿಂಕಿ ಆನಂದ್‌ ಅವರು “2018ರ ಮೇ 31ರ ಕಟ್‌ ಆಫ್ ದಿನಾಂಕಕ್ಕೆ ಬದ್ಧರಾಗಿ ಉಳಿಯವುದಿದ್ದರೆ ಇರ ರಾಜ್ಯಗಳು ಕೂಡ ಇದೇ ರೀತಿಯ ಕ್ರಮವನ್ನು ಅನುಸರಿಸಬಹುದು’ ಎಂದು ಹೇಳಿದರು. 

ಈ ಸಲಹೆಯನ್ನು ನಾವು ಒಪ್ಪುತ್ತೇವೆ ಎಂದು ಹೇಳಿದ ಸುಪ್ರೀಂ ಪೀಠ, ಉತ್ತರ ಪ್ರದೇಶ ಅನುದಾನರಹಿತ ವೈದ್ಯಕೀಯ ಕಾಲೇಜುಗಳ ಕಲ್ಯಾಣ ಸಂಘ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿತು. 

Advertisement

Udayavani is now on Telegram. Click here to join our channel and stay updated with the latest news.

Next