Advertisement
ನಗರದಲ್ಲಿ ಬುಧವಾರ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಜನ ಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು.ಆಸರೆ ಇಲ್ಲದ ಬಡವರಿಗೆ ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಡುವುದು ಸರ್ಕಾರದ ಉದ್ದೇಶ. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಬರೋಬ್ಬರಿ 15 ಲಕ್ಷ ಮನೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿತ್ತು. ಯಂಕ, ಸೀನ ಹೆಸರಿನಲ್ಲಿ 6ರಿಂದ 7 ಮನೆ ಹಾಕಲಾಗಿದೆ. ಒಬ್ಬರಿಗೆ ಒಂದೇ ಮನೆ ಹಾಕಬೇಕು. ಒಬ್ಬೊಬ್ಬರ ಹೆಸರಿನಲ್ಲಿ ಆರೇಳು ಮನೆ ಇರುವುದು ಸರ್ಕಾರದ ಗಮನಕ್ಕೆ ಬಂದ ಬಳಿಕ ರಾಜ್ಯದಲ್ಲಿ ಸುಮಾರು 6 ಲಕ್ಷ ಮನೆಗಳ ಪ್ರಕ್ರಿಯೆ ಲಾಕ್ ಮಾಡಲಾಗಿತ್ತು. ಇದೀಗ ಸಮಗ್ರ ತನಿಖೆ ನಡೆಸಿದ ಬಳಿಕ, ಅಗತ್ಯ ಹಾಗೂ ಅರ್ಹರಾದವರಿಗೆ ಈ ವರ್ಷ ಒಟ್ಟು 1.17 ಲಕ್ಷ ಮನೆ ನಿರ್ಮಿಸಿಕೊಡಲಾಗಿದೆ. ಮುಂದಿನ ವರ್ಷ ಮುಖ್ಯಮಂತ್ರಿಗಳ ಮನವೋಲಿಸಿ, 1.50 ಲಕ್ಷ ಮನೆ ಮಂಜೂರು ಮಾಡಿಸಲಾಗುವುದು ಎಂದರು.
Related Articles
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಗ್ರಾ.ಪಂ.ಗೆ ಹೆಚ್ಚು ಅನುದಾನ ನೀಡುತ್ತಿದ್ದಾರೆ. 14ನೇ ಹಣಕಾಸು ಆಯೋಗದಡಿ ಒಂದೊಂದು ಪಂಚಾಯಿತಿಗೂ ಸುಮಾರು 60 ಲಕ್ಷ ಅನುದಾನ ಕೊಟ್ಟಿದ್ದಾರೆ. ಈಗ 15ನೇ ಹಣಕಾಸು ಆಯೋಗದಡಿ 1 ಕೋಟಿ ವರೆಗೂ ಅನುದಾನ ನೀಡಲಿದ್ದಾರೆ ಎಂದರು.
Advertisement
ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಪಂಚಾಯಿತಿ ಬಯಲು ಶೌಚ್ಯಮುಕ್ತ ಮಾಡುವ ಮಹತ್ವದ ಕಾರ್ಯ ಪ್ರಧಾನ ಮಂತ್ರಿಗಳು ಮಾಡಿದ್ದು, ಮುಂದಿನ ವರ್ಷದಿಂದ ಪ್ರತಿ ಮನೆಗೂ ನಲ್ಲಿಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲು, ಶೀಘ್ರವೇ ನಲ್ ಸೇ ಜಲ್ (ನಳದಿಂದ ಮನೆ ಮನೆಗೂ ಕುಡಿಯುವ ನೀರು) ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಅಧಿಕಾರಿಗಳು ಹುಶಾರ್ ಇರ್ತಾರ್ :ಗ್ರಾ.ಪಂ. ನೂತನ ಸದಸ್ಯರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ಸಿಎಂ, ಸಚಿವ, ಶಾಸಕರಿಗೂ ಇಲ್ಲದ ಅಧಿಕಾರ ಗ್ರಾ.ಪಂ. ಸದಸ್ಯರಿಗೆ ಇರುತ್ತದೆ. ಗ್ರಾ.ಪಂ. ಅಧ್ಯಕ್ಷರ ದಾರಿ ತಪ್ಪಿಸುವ ಕೆಲಸ ಅಧಿಕಾರಿಗಳು ಮಾಡುತ್ತಾರೆ. ಅವರಿಂದ ಎಚ್ಚರಿಕೆ ಇರಬೇಕು ಎಂದು ಸಲಹೆ ನೀಡಿದರು.