Advertisement
ಎಲ್ಲ ಕಡೆ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ನಾವು ಸ್ವಾತಂತ್ರ್ಯ ಸಿಗುವ ಮೊದಲೇ ಆಚರಿಸಿದ್ದೇವೆ. 1630-1680ರಲ್ಲಿ ಮರಾಠ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿಯು ಪುಣೆಯಲ್ಲಿ ಈ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿದ್ದರು, ಆದರೇ ಬ್ರಿಟಿಷ್ ಆಳ್ವಿಕೆಯ ಬಳಿಕ ಗಣೇಶ ಹಬ್ಬದ ಆಚರಣೆಯು ರಾಜ್ಯದ ಪ್ರೋತ್ಸಾಹವನ್ನು ಕಳೆದುಕೊಂಡಿತು. ಗಣೇಶನ ಹಬ್ಬದಿಂದ ಹಿಂದೂಗಳು ಒಗ್ಗಟ್ಟಿನಲ್ಲಿ ಇರುವುದನ್ನು ತಿಳಿದು ಈ ರೀತಿ ಆದರೆ ನಮಗೆ ಉಳಿಗಾಲವಿಲ್ಲ ಎಂದು ಮನಗಂಡು ಹಬ್ಬದ ಆಚರಣೆ ಮಾಡುವಂತಿಲ್ಲ ಎಂದು ತಡೆಯುತ್ತಾರೆ.
Related Articles
Advertisement
ಆದರೆ ಈಗ ಕಾಲ ಬದಲಾಗಿದ್ದು, ಸಂಪ್ರದಾಯದ ಹೆಸರಲ್ಲಿ ಆಚರಣೆಯ ಮಹತ್ವವನ್ನು ಅರಿಯದೆ ಎಲ್ಲೆಂದರಲ್ಲಿ ಕುಡಿದು ಕುಪ್ಪಳಿಸುವುದನ್ನು ಕಾಣಬಹುದು. ವಿಜೃಂಭಿಸುವ ಸಲುವಾಗಿ ಅಥವಾ ಇನ್ನೊಬ್ಬರಿಗಿಂತ ಮೇಲಾಗಿ ನಾನೇ ಕಾಣುವ ಸಲುವಾಗಿ ಈ ಹಬ್ಬದ ಆಚರಣೆ ಮಾಡುವುದು ಸಲ್ಲದು. ಒಗ್ಗಟ್ಟಿನಲ್ಲಿ ಬಲವಿರಲಿ ಎಂದು ಈ ಹಬ್ಬ ಮಾಡಿದರೆ ನಮ್ಮ ದೇಶದ ಕೆಲವು ಕಡೆ ಇದು ಒಂದು ಸ್ಪರ್ಧೆಯಾಗಿ ಬಿಟ್ಟಿವೆ. ಆ ಗಲ್ಲಿಗಿಂತಲೂ ನಮ್ಮ ಗಣೇಶನ ವಿಗ್ರಹ ದೊಡ್ಡದಾಗಿರಬೇಕು, ನಾವೇ ಮೊದಲು ವಿಸರ್ಜನೆ ಮಾಡಬೇಕು ಹೀಗೆ ಹಲವಾರು ಆಟಗಳು. ಹಿಂದಿನ ಕಾಲದಲ್ಲಿ ಒಂದು ಗಲ್ಲಿಗೆ ಒಂದೇ ವಿಗ್ರಹ ಇದ್ದರು ಏನೋ ಒಂದು ಖುಷಿ ಆದರೆ ಈಗ ಎಷ್ಟು ಕ್ಲಬ್ ಎಷ್ಟು ಮಂದಿರ ಇದೆ ಅಷ್ಟು ವಿಗ್ರಹ ಅಷ್ಟೇ ಸ್ಪರ್ಧೆ.
-ಕಾವ್ಯಾ
ಪೆರುವಾಡು, ಕುಂಬಳೆ