ಓದಿದವರಿಗೆ ಗ್ರಂಥಾಲಯಗಳು ಮನೆ. ಕೈ ತೋಟ ಇವುಗಳು ವಿಶ್ರಾಂತಿ ಪಡೆಯುವ ಜಾಗವಾಗಿರುತ್ತದೆ. ಆದರೆ ನಮ್ಮ ರೈತರಿಗೆ ವಿಶ್ರಾಂತಿ ಮತ್ತು ನೆಮ್ಮದಿ ಪಡೆಯುವ ಜಾಗವೆಂದರೆ ತೋಟಗಳು, ಜಮೀನು ಗದ್ದೆಗಳಾಗಿರುತ್ತವೆ. ಹಸುರು ಹುಲ್ಲು, ಬಣ್ಣದ ಹೂಗಳು, ತೆಂಗಿನ ಮರ, ಅಡಿಕೆ ಮರ, ಚಿಲಿಪಿಲಿ ಹಕ್ಕಿಗಳು ಮತ್ತು ಮರಗಳು ಯಾವುದೇ ಉದ್ವಿಗ್ನ ಪರಿಸ್ಥಿತಿಯಲ್ಲಿ ತತ್‌ಕ್ಷಣವೇ ನನ್ನನ್ನು ಶಾಂತಗೊಳಿಸುತ್ತವೆ.
ನನ್ನ ತೋಟದಲ್ಲಿ ನನ್ನ ನೆಚ್ಚಿನ ಗುಲಾಬಿ ಗಿಡ, ಐದು ವಿಭಿನ್ನ ಹಣ್ಣಿನ ಮರಗಳು, 2,000ಕ್ಕೂ ಹೆಚ್ಚು ಅಡಿಕೆ ಮರಗಳು ಹಾಗೂ 300 ತೆಂಗಿನ ಮರಗಳು ಇವೆ. ಬೇಸಗೆ ಸಮಯದಲ್ಲಿ ತೆಂಗಿನ ಮರದಲ್ಲಿ ಎಳನೀರು ಕುಡಿಯುವುದೇ ಒಂದು ಚಂದ ಅಲ್ಲವೇ. ತೋಟಗಳಲ್ಲಿ ವಿವಿಧ ರೀತಿಯ ಸೊಪ್ಪುಗಳು ಮತ್ತು ತರಕಾರಿಗಳನ್ನು ಬೆಳೆಯುವುದೇ ಒಂದು ಚೆಂದ.
ಇವುಗಳಲ್ಲಿ ಕಾರಂಜಿಗಳು, ಕೊಳಗಳು, ಜಲಪಾತಗಳು ಅಥವಾ ತೊರೆಗಳು, ಒಣ ತೊರೆ ತಳ, ಪ್ರತಿಮೆ, ಲತಾಮಂತಪಗಳು, ಹಂದರಗಳಂತಹ ಜಲ ವೈಶಿಷ್ಟ್ಯಗಳು ಸೇರಿರುತ್ತವೆ. ತೋಟ ವಿನ್ಯಾಸದ ಅಂಶಗಳಲ್ಲಿ ದಾರಿಗಳು, ಬಂಡೆ ವಿನ್ಯಾಸ, ಗೋಡೆಗಳು, ಇವುಗಳ ಮಧ್ಯದಲ್ಲಿ ಕುಳಿತುಕೊಂಡು ರೈತರಿಗೆ ಊಟ ಮಾಡುವುದು ಒಂದು ಆನಂದ. ತೋಟದಲ್ಲಿ ಸಿಗುವ ನೆಮ್ಮದಿ ಬೇರೆ ಎಲ್ಲೂ ಸಿಗುವುದಿಲ್ಲ. ಹಸುಗಳನ್ನು ಸಹ ತನ್ನ ಕುಟುಂಬದಂತೆ ನೋಡಿಕೊಳ್ಳುತ್ತಾನೆ.
ಹೊಲ ಗದ್ದೆಗಳಲ್ಲಿ ಮಳೆ ಚಳಿ ಎನ್ನದೆ ಶ್ರದ್ಧೆಯಿಂದ ಕೆಲಸವನ್ನು ಮಾಡುತ್ತಾರೆ.ನಾನು ಒಬ್ಬ ರೈತನ ಮಗ. ನಾನು ಸಹ ನೀರು ಕಟ್ಟುವುದು ಹೊಲ ಉಳುವುದು ಸಸ್ಯಗಳನ್ನು ಪೋಷಣೆ ಮಾಡುವುದು ತರಕಾರಿಗಳನ್ನು ಬೆಳೆಯುವುದು ಕೀಳುವುದು ವಿವಿಧ ಕೆಲಸಗಳನ್ನು ಮಾಡುವುದರಲ್ಲಿ ಖುಷಿ ಸಿಗುತ್ತಿತ್ತು.ಈ ತೋಟದ ನಿರ್ಮಾಣದಿಂದ ಮನಸ್ಸಿಗೆ ಉಲ್ಲಾಸ ಮತ್ತು ರೈತರ ಮೊಗದಲ್ಲಿ ನೆಮ್ಮದಿಯನ್ನು ಕಾಣಬಹುದು.
-ವಿನೋದ್
ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರು