ಭಾರತವು ಅನೇಕ ವರ್ಷಗಳಿಂದ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ಆದರೆ ಈಗ ಎಲ್ಲವೂ ಮರೆಯಾಗುತ್ತಿದೆ. ಭಾರತದ ಸಂಸ್ಕೃತಿ, ಆಚಾರ, ವಿಚಾರಗಳಿಗೆ ಮನಸೋಲದವರು ಯಾರೂ ಇಲ್ಲ. ವಿದೇಶಿಯರ ಆಕರ್ಷಣೀಯ ಕೇಂದ್ರ ಭಾರತ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಭಾರತೀಯರು ಅಂದಕೂಡಲೇ ನೆನಪಾಗುವುದು ನಮ್ಮ ಉಡುಗೆ ತೊಡುಗೆ.
ಹುಡುಗಿಯರಾದರೆ ಸೀರೆ ಉಟ್ಟು ಕೈ ತುಂಬಾ ಬಳೆ ಹಾಕಿ, ಹಣೆಗೆ ಬಿಂದಿ ಇಟ್ಟು, ಮುಡಿಗೆ ಹೂವು ಮುಡಿದು ಇರುತ್ತಾರೆ ಹಾಗೆಯೇ ಹುಡುಗರಾದರೆ ಅಂಗಿ ಪಂಚೆ ಇದನೆಲ್ಲ ಉಡುತ್ತಾರೆ ಎಂದು. ಆದರೆ ಭಾರತದÇÉೇ ಹುಟ್ಟಿ, ಬೆಳೆದು ನಮ್ಮ ಸಂಸ್ಕೃತಿಯನ್ನು ನಾವು ಪಾಲಿಸುತ್ತಿಲ್ಲ. ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ನಮ್ಮತನವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ವಿದೇಶಿಯರು ನಮ್ಮ ಉಡುಗೆ ತೊಡುಗೆ, ಆಚಾರ, ವಿಚಾರಗಳಿಗೆ ನಮ್ಮನ್ನು ಗೌರವಿಸುತ್ತಾರೆ.
ಹೀಗಿದ್ದಾಗಲೇ ಭಾರತದಲ್ಲಿ ಹುಟ್ಟದಿದ್ದರು ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾ ಅದರಂತೆ ಮೈ ತುಂಬಾ ಬಟ್ಟೆ ಹಾಕಿಕೊಂಡು ಭಾರತದ ಆಚಾರ, ವಿಚಾರಗಳನ್ನು ಪಾಲಿಸುತ್ತಿದ್ದಾರೆ. ಮುಂದೊಂದು ದಿನ ನಮ್ಮ ಸಂಸ್ಕೃತಿಯು ಹೀಗಿತ್ತು ಎಂದು ಕೇಳಬಹುದು ಅಷ್ಟೇ ಆದರೆ ಅದನ್ನು ನೋಡಲು ಸಾಧ್ಯವಿಲ್ಲ.ನನ್ನ ಮನಸ್ಸಿನಲ್ಲಿ ಕಾಡುವ ಪ್ರಶ್ನೆ ಅಥವಾ ಇದು ಎಲ್ಲರ ಮನಸ್ಸಿನಲ್ಲಿ ಕಾಡುವ ಪ್ರಶ್ನೆಯಾಗಿರಬಹುದು.
ಏನೆಂದರೆ ಕಾಲಗಳು ಉರುಳಿದ ಹಾಗೆ ನಮ್ಮ ಸಂಸ್ಕೃತಿ ಯಾವ ಸ್ಥಿತಿಗೆ ತಲುಪ ಬಹುದು ಎಂದು. ಹಾಗೆಯೇ ನಮ್ಮ ಪೂರ್ವಜರು ಉಳಿಸಿಕೊಂಡು ಬಂದ ಸಂಸ್ಕೃತಿ ಬಗ್ಗೆ ನಾವು ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕು ಇಲ್ಲದಿದ್ದರೆ ನಮ್ಮ ಆಚಾರ, ವಿಚಾರಗಳು ಯಾವ ರೂಪ ಹೊಂದಬಹುದು ಎಂದು ಊಹಿಸಲು ಸಾಧ್ಯವಿಲ್ಲ.
-ಲಾವಣ್ಯ ನಾಗತೀರ್ಥ,
ವಿವೇಕಾನಂದ ಮಹಾವಿದ್ಯಾಲಯ, (ಸ್ವಾಯತ್ತ)
ಪುತ್ತೂರು