Advertisement
ಹದಿನಾಲ್ಕು ವರ್ಷದ ಒಳಗಿನ ಮಕ್ಕಳು, ದೈಹಿಕ ಸ್ವರೂಪದಲ್ಲಿ ಅಥವಾ ಮಾನಸಿಕ ಸ್ವರೂಪ ದಲ್ಲಿ ದುಡಿದರೆ ಅದು ಬಾಲಾಪರಾಧವೇ ಸರಿ. ಅದೇ ರೀತಿ ಪ್ರತಿಭೆಯ ಹೆಸರಿನಲ್ಲಿ ಮಕ್ಕಳಿಗೆ ಮಾನಸಿಕವಾಗಿ ಒತ್ತಡ ಹಾಕುವುದು ಸರಿಯಲ್ಲ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಆಟವಾಡಿಸುತ್ತಾ ಪಾಠವನ್ನು ಕಲಿಸಬೇಕು, ಅದನ್ನು ಬಿಟ್ಟು ಪ್ರತಿಭೆ ಅನಾವರಣ ಹೆಸರಿನಲ್ಲಿ ಚಿಕ್ಕ ವಯಸ್ಸಿನಿಂದಲೇ ಹಲವು ತರಗತಿಗಳಿಗೆ ಸೇರಿಸಿ ಅವರ ಬಾಲ್ಯವನ್ನು ಕಸಿದುಕೊಳ್ಳುವುದು ಸರಿಯಲ್ಲ.
Related Articles
Advertisement
ಮಕ್ಕಳು ಹೆತ್ತವರ ವಿರುದ್ಧ ಮಾತನಾಡುವುದೇ ಹಾಸ್ಯವೆಂದು ತಿಳಿದುಬಿಡುತ್ತಾರೆ. ನಿರೂಪಕರು ಮಕ್ಕಳೊಂದಿಗೆ ಅವರ ತಂದೆ ತಾಯಿಯ ನಡುವಿನ ತೀರಾ ವೈಯುಕ್ತಿಕ ಪ್ರಶ್ನೆಗಳನ್ನು, ಅಸಂಬದ್ಧ ಪ್ರಶ್ನೆಗಳನ್ನು ತಮ್ಮ ವಾಹಿನಿಯ ಟಿಆರ್‌ಪಿ ಗಳಿಸುವ ದೃಷ್ಟಿಯಿಂದ ಕೇಳುವುದು ಮಗುವಿನ ಯೋಚನಾ ಲಹರಿಯ ದಿಕ್ಕನ್ನು ತಪ್ಪಿಸಿದ ಹಾಗಾಗುತ್ತದೆ. ಮಕ್ಕಳನ್ನು ಮಕ್ಕಳ ಹಾಗೆಯೇ ಇರಲು ಬಿಡಬೇಕು. ಅದನ್ನು ತಮ್ಮ ವಾಹಿನಿಯ ಅಭಿಲಾಷೆಗೆ ತಿದ್ದುವುದು ಹಣದಾಸೆಗೆ ಬಳಸಿಕೊಳ್ಳುವುದು ಸಲ್ಲದು.
ಜಗತ್ತಿನಲ್ಲಿರುವ ಪ್ರತಿಯೊಂದು ಮಗುವಿಗೂ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ಪ್ರತಿಭೆ ನೈಜವಾಗಿದ್ದರೆ ಅದು ತನ್ನಿಂದ ತಾನೇ ಹೊರಬರುತ್ತದೆ. ಶಾಲಾ ಮಟ್ಟದಲ್ಲಿ ಹಲವಾರು ಸಾಂಸ್ಕೃತಿಕ ಸ್ಪರ್ಧೆ, ಪ್ರತಿಭಾ ಕಾರಂಜಿ ನಡೆಯುತ್ತವೆ. ಆದರೆ ಆ ಪ್ರತಿಭೆಯನ್ನು ಮುಂದಿಟ್ಟುಕೊಂಡು ಮನೋರಂಜನೆಯ ಹೆಸರಿನಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ತರವಲ್ಲ. ಮಕ್ಕಳು ಬೆಳೆಯುತ್ತಾ ಹೋದಂತೆ ಅವರನ್ನು ಗುರುತಿಸುವುದು ಕಡಿಮೆಯಾಗುತ್ತದೆ. ಅವಕಾಶಗಳು ಕ್ಷೀಣಿಸುತ್ತದೆ. ಅವಕಾಶ ಸಿಗದೆ ಖನ್ನತೆಗೆ ಒಳಗಾಗುವುದೂ ಇದೆ. ಬಾಲ ಕಲಾವಿದರಾಗಿ ಮೆರೆದ ಅದೆಷ್ಟೋ ಮಕ್ಕಳು ತಮ್ಮ ವಯಸ್ಸಿಗೆ ಬಂದಾಗ ಹಾಗೂ ಜೀವನದಲ್ಲಿ ಏನೂ ಆಗದೆ ಹತಾಶರಾದ
ಹಲವು ಕಥೆಗಳು ನಮಗೆ ಸಿಗುತ್ತವೆ. ಹೀಗೆ ವಾಹಿನಿಗಳು ಪ್ರತಿಭೆಯನ್ನು ಬಳಸಿಕೊಂಡು ಮಕ್ಕಳ ಬಾಲ್ಯವನ್ನು ಮುಗ್ಧತೆ ಯನ್ನು ಹಾಳು ಮಾಡುವಂತಹ ಕೆಲಸಗಳಿಗೆ ಕೈ ಹಾಕ ಬಾರದು. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿ ಸೋಣ ಅದನ್ನು ವ್ಯಾಪಾರಿಕರಣ ಗೊಳಿಸುವುದು ಸರಿಯಲ್ಲ.
ಚೇತನ ಭಾರ್ಗವ
ಬೆಂಗಳೂರು