Advertisement

Doctors: ಬಡವರ ಪಾಲಿನ ಬಂಧು

05:50 PM Jun 05, 2024 | Team Udayavani |

ಸರಕಾರಿ ಆಸ್ಪತ್ರೆಯೆಂದರೆ ಬಡವರ ಪಾಲಿಗೆ ಜೀವ ಉಳಿಸುವ ತಾಣ ಎಂದರೆ ತಪ್ಪಲ್ಲ. ವೈದ್ಯರು ನಮ್ಮ ಕಣ್ಣಿಗೆ ಸಾಕ್ಷಾತ್‌ ಶಿವನ ರೂಪದಲ್ಲಿಯೇ ಕಾಣುತ್ತಾರೆ. ಇನ್ನೇನು ಕೆಲವು ಕ್ಷಣಗಳಲ್ಲಿ ಇಹಲೋಕವನ್ನು ತ್ಯಜಿಸುವ ವ್ಯಕ್ತಿಯನ್ನು ಮತ್ತೆ ಬದುಕುಳಿಸಿ ಜೀವನವನ್ನು ರೂಪಿಸುವಂತೆ ಮಾಡುವ ಪವಾಡ ಪುರುಷರಾಗಿದ್ದಾರೆ.

Advertisement

ಅದೇ ವೈದ್ಯನು ಕೊಂಚ ನಿರ್ಲಕ್ಷ್ಯದಿಂದ ಕೆಲಸ ಮಾಡಿದ್ದಲ್ಲಿ ವ್ಯಕ್ತಿಯ ಜೀವನವನ್ನೇ ಸರ್ವನಾಶ ಮಾಡಿ ರೋಗಿಯ ಕಣ್ಣಿಗೆ ಯಮನ ಹಾಗೆ ಕಾಣುವ ಪರಿಸ್ಥಿತಿ ಎದುರಾಗುತ್ತದೆ. ವೈದ್ಯನ ವೃತ್ತಿ ಎನ್ನುವುದು ತುಂಬಾ ಪುಣ್ಯದ ಕೆಲಸವಾಗಿದೆ. ಒಬ್ಬರ ಜೀವವನ್ನು ಉಳಿಸುವುದು ಅಷ್ಟೊಂದು ಸುಲಭದ ಮಾತಲ್ಲ. ವೈದ್ಯನೊಬ್ಬ ಸರಿಯಾಗಿದ್ದರೆ ಸಾಕೇ, ಆಸ್ಪತ್ರೆಯ ಸಿಬಂದಿ ಕೂಡ ಸೌಮ್ಯದಿಂದ ನಡೆದರೆ ಉತ್ತಮವಾದದ್ದು.

ಇಂದಿನ ದಿನದಲ್ಲಿ ಸರಕಾರಿ ಆಸ್ಪತ್ರೆ ಸರಕಾರಿ ಆಸ್ತಿ ಎಂದರೆ ಜನರಲ್ಲಿ ತುಂಬಾ ನಿರ್ಲಕ್ಷ್ಯ. ಇಂತಹ ಮನೋಭಾವದಿಂದಲೇ ಸರಕಾರಿ ಆಸ್ಪತ್ರೆ ಎಂದರೆ ಜನರು ಕೀಳಾಗಿ ನೋಡುವುದು. ಆಸ್ಪತ್ರೆಯನ್ನು ನಾವು ಹೇಗೆ ನೋಡುತ್ತೇವೆಯೋ ಹಾಗೆ ಆಸ್ಪತ್ರೆಯು ಕೂಡ ನಮ್ಮನ್ನು ಹಾಗೆ ಕಾಣುತ್ತದೆ.

ಸರಕಾರಿ ಆಸ್ಪತ್ರೆಗಳು ಎಂತಹ ಚಿಕಿತ್ಸೆಯನ್ನು ನೀಡಿದರೂ ಕೂಡ ಎಲ್ಲವೂ ಉಚಿತ ವಾಗಿರುವುದರಿಂದ ಬಡವರಲ್ಲಿ ಒಂದು ರೀತಿಯ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಧೈರ್ಯವನ್ನು ಒದಗಿಸುತ್ತದೆ. ಕಟ್ಟಡವನ್ನು ನಿರ್ಮಿಸಿ ಚಿಕಿತ್ಸೆಗೆ ಬೇಕಾದಂತ ಸಲಕರಣೆಗಳನ್ನು ತರಿಸಿ, ತಕ್ಕ ವೈದ್ಯರನ್ನು ನೇಮಿಸಿ, ಆಸ್ಪತ್ರೆಯಲ್ಲಿ ಎಲ್ಲವನ್ನೂ ನಿರ್ವಹಿಸಿ ರೋಗಿಗೆ ಉಚಿತವಾಗಿ ನೀಡುವುದು ಸುಲಭದ ಮಾತಲ್ಲ.

ಸರಕಾರಿ ಆಸ್ಪತ್ರೆಗಳು ಹಣಕಾಸಿನ ವಿಷಯದಲ್ಲಿ ಬಡವರಿಗೆ ಯಾವುದೇ ರೀತಿಯ ತೊಂದರೆಯಿಲ್ಲದೆ ಗುಣಪಡಿಸಿ ಮನೆಗೆ ಕಳುಹಿಸುತ್ತದೆ. ಕೆಲವೊಂದು ಕಡೆ ಸರಕಾರಿ ಆಸ್ಪತ್ರೆಯನ್ನು ನೋಡಿದರೆ ಅದು ಖಾಸಗಿ ಆಸ್ಪತ್ರೆಯೋ ಅಥವಾ ಸರಕಾರಿ ಆಸ್ಪತ್ರೆಯೋ ಎಂದು ತಿಳಿಯುವುದಿಲ್ಲ ಅಷ್ಟೊಂದು ಸುಂದರವಾಗಿದ್ದು ಬರುವಂತಹ ಪ್ರತಿಯೊಂದು ರೋಗಿಯನ್ನು ಬಹಳ ಅಚ್ಚುಕಟ್ಟಾಗಿ ನೋಡಿ ಚಿಕಿತ್ಸೆಯನ್ನು ನೀಡುತ್ತಾರೆ.

Advertisement

ಆಸ್ಪತ್ರೆಯನ್ನು ನಾವು ಎಷ್ಟು ಸ್ವತ್ಛಂದವಾಗಿ ಕಾಪಾಡಿಕೊಳ್ಳುತ್ತೇವೆಯೋ ಅಷ್ಟು ಸುಂದರವಾಗಿರುತ್ತದೆ.  ಇಂತಹ ಆಸ್ಪತ್ರೆಯಲ್ಲೂ ಕೂಡ ಕಳಪೆ ಕೆಲಸವನ್ನು ಮಾಡುವ ವ್ಯಕ್ತಿಯನ್ನು ಕೂಡ ನಾವು ನೋಡಬಹುದಾಗಿದೆ. ಕೇವಲ ಒಂದು ಶಸ್ತ್ರ ಚಿಕಿತ್ಸೆಯಾಗಬೇಕಾದರೆ ಹೇಳಿಕೊಳ್ಳಲು ಎಲ್ಲವೂ ಕೂಡ ಉಚಿತ.

ಆದರೆ ವೈದ್ಯರ ಬಳಿ ಒಳಗಿಂದೊಳಗೆ ಕೆಲವು ಹಣಕಾಸಿನ ವ್ಯವಹಾರಗಳು ಕೂಡ ನಡೆಯುತ್ತಿರುತ್ತದೆ.  ಮುಗ್ಧಮನಸ್ಸಿನ ಭಾವನೆಗಳೇನೆಂದರೆ ಏನೇ ಆಗಲಿ ಗುಣವಾದರೆ ಸಾಕು ಎನ್ನುವ ಭಾವನೆ ಇರುತ್ತದೆ. ಸರಕಾರಿ ಆಸ್ತಿ ಎಂದರೆ ಅದನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುವುದು ಸರಿಯಲ್ಲ. ಸಿಬಂದಿ  ಕೂಡ  ಅಚ್ಚುಕಟ್ಟಾಗಿ ಮನಸಾಕ್ಷಿ ಒಪ್ಪುವಂತೆ ತಮ್ಮ ವೃತ್ತಿಯನ್ನು ನಡೆಸಿಕೊಂಡು ಹೋಗಬೇಕು ಎನ್ನುವುದು ಅಭಿಪ್ರಾಯವಾಗಿದೆ.

-ಸುದೀಪ ರವಿ ಮಾಳಿ

ಎಂ.ಎಂ. ಕಾಲೇಜು, ಶಿರಸಿ 

Advertisement

Udayavani is now on Telegram. Click here to join our channel and stay updated with the latest news.

Next