Advertisement
ನಿಕೋಲಾ ಟೆಸ್ಲಾ ಮತ್ತು ಗುಗ್ಲಿಯೆಲ್ಮೊ ಮಾರ್ಕೋನಿ ಅವರಿಂದ ವೈರ್ಲೆಸ್ ರೇಡಿಯೊದ ಆವಿಷ್ಕಾರ, ಆನಂತರ ಎಫ್. ಎಂ. ರೇಡಿಯೊ ಕಡೆಗೆ ಬದಲಾವಣೆ, ಡಿಜಿಟಲ್ ಪರಿವರ್ತನೆ ರೇಡಿಯೊದ ಸುವರ್ಣ ಯುಗದಲ್ಲಾದದ್ದೇ.
Related Articles
Advertisement
ಜೂನ್ 8, 1936 ರಂದು, ಭಾರತೀಯ ರಾಜ್ಯ ಪ್ರಸಾರ ಸೇವೆಯು ಆಲ್ ಇಂಡಿಯಾ ರೇಡಿಯೋ ಆಗಿ ಮಾರ್ಪಟ್ಟಿತು. ಆಲ್ ಇಂಡಿಯಾ ರೇಡಿಯೋದ ಸುದ್ದಿ ಸೇವೆಗಳ ವಿಭಾಗವು ಗೃಹ, ಪ್ರಾದೇಶಿಕ, ಬಾಹ್ಯ ಮತ್ತು ಡಿಟಿಎಚ್ ಸೇವೆಗಳಲ್ಲಿ ಸುಮಾರು 90 ಭಾಷೆಗಳು, ಉಪಭಾಷೆಗಳಲ್ಲಿ ಸುಮಾರು 56 ಗಂಟೆಗಳ ಕಾಲ ಪ್ರತಿದಿನ 647 ಬುಲೆಟಿನ್‌ಗಳನ್ನು ಪ್ರಸಾರ ಮಾಡುತ್ತದೆ. 41 ಆಕಾಶವಾಣಿ ಕೇಂದ್ರಗಳಿಂದ ಗಂಟೆಗೆ 314 ಸುದ್ದಿ ಮುಖ್ಯಾಂಶಗಳನ್ನು ಎಫ್ಎಂ ಮೋಡ್‌ನಲ್ಲಿ ಅಳವಡಿಸಲಾಗುತ್ತಿದೆ. 44 ಪ್ರಾದೇಶಿಕ ಸುದ್ದಿ ಘಟಕಗಳು 75 ಭಾಷೆಗಳಲ್ಲಿ 469 ದೈನಂದಿನ ಸುದ್ದಿ ಬುಲೆಟಿನ್ ಗಳನ್ನು ಪ್ರಾರಂಭಿಸುತ್ತವೆ.
ಆಲ್ ಇಂಡಿಯಾ ರೇಡಿಯೋ ಭಾರತದಲ್ಲಿನ ಸಮುದಾಯದ ಮೇಲೆ ಮಹತ್ವದ ಪ್ರಭಾವ ಬೀರಿದ ರೇಡಿಯೋ ಸಂಸ್ಥೆ. ಇದು 262 ರೇಡಿಯೋ ಕೇಂದ್ರಗಳನ್ನು ಹೊಂದಿದ್ದು, 23 ಭಾಷೆಗಳು ಮತ್ತು 146 ಉಪಭಾಷೆಗಳಲ್ಲಿ ಭಾರತದ ಪ್ರತಿಯೊಂದು ಭಾಗವನ್ನು ತಲುಪುತ್ತದೆ.
ಇದು ಭಾರತದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಸುದ್ದಿ ಮತ್ತು ಮಾಹಿತಿಯ ಪ್ರಾಥಮಿಕ ಮೂಲವಾಗಿದೆ. ದೇಶದ 92% ರಷ್ಟು ಜನಸಂಖ್ಯೆಯ 99.20% ಅನ್ನು ರೇಡಿಯೋ ತಲುಪುತ್ತದೆ. ನಗರ ಮತ್ತು ಗ್ರಾಮೀಣ ಪ್ರೇಕ್ಷಕರ ನಡುವಿನ ಮಾಹಿತಿಯ ಅಂತರವನ್ನು ಕಡಿಮೆ ಮಾಡಲು ಸಮುದಾಯ ರೇಡಿಯೋ ಕೇಂದ್ರಗಳು ಹುಟ್ಟಿಕೊಂಡಿವೆ. ಇವು ಸಾಮಾನ್ಯವಾಗಿ ಮೂಲಭೂತ ಮೂಲಸೌಕರ್ಯ ಮತ್ತು ಕನಿಷ್ಠ, ಬಹುಕಾಯಕ ಸಿಬಂದಿಯೊಂದಿಗೆ ಸಣ್ಣ ಕೊಠಡಿಗಳಿಂದ ಕಾರ್ಯನಿರ್ವಹಿಸುತ್ತವೆ.
ಈ ಕೇಂದ್ರಗಳು ಗ್ರಾಮೀಣ ಭಾರತದಲ್ಲಿನ ತಮ್ಮ ಪ್ರೇಕ್ಷಕರಿಗೆ ಸಂಬಂಧಿತ ಮತ್ತು ಮುಖ್ಯವಾದ ಮಾಹಿತಿಯನ್ನು ರವಾನಿಸುತ್ತವೆ.ಹಲವಾರು ಕಾರಣಗಳಿಗಾಗಿ ರೇಡಿಯೋ ಭಾರತದಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ. ಆಕಾಶವಾಣಿಗೆ ವ್ಯಾಪಕ ಮತ್ತು ವೈವಿಧ್ಯಮಯ ಪ್ರೇಕ್ಷಕರಿದ್ದಾರೆ ಇಲ್ಲಿ.
ಇಂಡಿಯಾ ರೇಡಿಯೊ ಫೋರಮ್ (IRF) 2021 ರ ವರದಿಯ ಪ್ರಕಾರ, ರೇಡಿಯೊದ ವ್ಯಾಪ್ತಿ ನಗರ ಪ್ರದೇಶಗಳಲ್ಲಿ 83% ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 73% . 400 ದಶಲಕ್ಷಕ್ಕೂ ಹೆಚ್ಚು ಜನರು ರಾಷ್ಟ್ರವ್ಯಾಪಿ ರೇಡಿಯೊ ಕೇಂದ್ರಗಳಿಗೆ ಟ್ಯೂನ್ ಮಾಡುತ್ತಿದ್ದಾರೆ. ನೀಲ್ಸನ್ ಇಂಡಿಯಾದ 2020 ರ ವರದಿಯು ಭಾರತದಲ್ಲಿನ ಎಲ್ಲಾ ಕುಟುಂಬಗಳಲ್ಲಿ 95% ರಷ್ಟು ರೇಡಿಯೊವನ್ನು ಹೊಂದಿದೆ ಎಂದು ಹೇಳಿದೆ. ಈ ಕುಟುಂಬಗಳಲ್ಲಿ ಹೆಚ್ಚಿನವರು ಸಾಂಪ್ರದಾಯಿಕ ರೇಡಿಯೊ ರಿಸೀವರ್‌ಗಳನ್ನು ಬಳಸುತ್ತಾರಂತೆ. ರೇಡಿಯೋ ಇನ್ನೂ ವ್ಯಾಪಕವಾಗಿ ಪ್ರವೇಶಿಸಬಹುದಾದ ಮಾಧ್ಯಮವಾಗಿದೆ ಎಂದು ಇದು ಸೂಚಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಭಾಷಾ ವೈವಿಧ್ಯತೆಯನ್ನು ರೇಡಿಯೋ ಕೇಂದ್ರಗಳು ರೂಪಿಸಿವೆ.
ಭಾರತದಲ್ಲಿ 420 ಖಾಸಗಿ ಎಫ್.ಎಂ. ರೇಡಿಯೋ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು, ಬೆಂಗಾಲಿ ಮತ್ತು ಪಂಜಾಬಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಪ್ರಸಾರ ಮಾಡುತ್ತಿವೆ. ಈ ಭಾಷಾ ವೈವಿಧ್ಯತೆಯು ರೇಡಿಯೊವನ್ನು ಹೆಚ್ಚಿನ ಕೇಳುಗರಿಗೆ ತಲುಪಿಸಿದೆ. ಭಾರತದಲ್ಲಿ ಸಮುದಾಯ ಸಂಪರ್ಕ ಮತ್ತು ಮಾಹಿತಿಯ ಕ್ರಾಂತಿ ಆರಂಭವಾಗಿದ್ದು ರೇಡಿಯೊದಿಂದಲೇ.
ರೇಡಿಯೋ ಗ್ರಾಮೀಣ ಕೇಳುಗರೊಂದಿಗೆ ಆಳವಾದ ಸಂಪರ್ಕವನ್ನು ಅಭಿವೃದ್ಧಿಪಡಿಸಿದೆ. ಮನೋರಂಜನೆಯ ಅಗ್ಗದ ಮಾಧ್ಯಮ ರೇಡಿಯೋವೇ. ದೂರದರ್ಶನ ಅಥವಾ ಮೊಬೈಲ್ ಫೋನYಳಂತಹ ಇತರ ಮಾಧ್ಯಮಗಳಿಗಿಂತ ರೇಡಿಯೋ ಹೆಚ್ಚು ಕೈಗೆಟುಕುವ ಮಾಧ್ಯಮ. ಆದುದರಿಂದ ರೇಡಿಯೋದ ಬಳಕೆ ವ್ಯಾಪಕ. ಬಹುಮುಖ್ಯವಾಗಿ ರೇಡಿಯೊ ತನ್ನ ಆಳವಾದ ಸಮುದಾಯ ಸಂಪರ್ಕಗಳು, ಭಾಷಾ ವೈವಿಧ್ಯತೆ, ವ್ಯಾಪಕ ಪ್ರವೇಶ ಮತ್ತು ಕೈಗೆಟುಕುವ ಕಾರಣದಿಂದಾಗಿ ಭಾರತದಲ್ಲಿ ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಇದು ದೇಶದಾದ್ಯಂತ ಮನೋರಂಜನೆ, ಮಾಹಿತಿ ಮತ್ತು ಸಂವಹನಕ್ಕೆ ಪ್ರಮುಖ ಮಾಧ್ಯಮವಾಗಿದೆ. ಧ್ವನಿ ಪೆಟ್ಟಿಗೆಯನ್ನು ಜನ ಬಹಳವಾಗಿಯೇ ಆಲಿಸಿದರು.
ಶ್ರೋತೃಗಳು ರೇಡಿಯೋ ಕಾರ್ಯಕ್ರಮಗಳನ್ನು ಆಲಿಸಿ ಪ್ರತಿಕ್ರಿಯಿಸಿ ವಿಶ್ಲೇಷಿಸುವ ರೀತಿಯಲ್ಲಿ ಬೆಳೆದರು. ಡಿ.ಎಸ್. ಇ.ಆರ್ಟಿ, ಆಕಾಶವಾಣಿ ಸಹಯೋಗದಲ್ಲಿ 2004ರಲ್ಲಿ ಸರ್ವಶಿûಾ ಅಭಿಯಾನ ಅಡಿಯಲ್ಲಿ “ಚಿಣ್ಣರ ಚುಕ್ಕಿ, ಚುಕ್ಕಿ ಚಿನ್ನ, ಕೇಳಿ ಕಲಿ’ ಆರಂಭಿಸಿತ್ತು. ಪೀಳಿಗೆಗಳು ಮಧ್ಯಾಹ್ನ ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ಕೇಳಿ ಬೆಳೆದ ಜನ ಜನಿತ ಉದಾಹರಣೆಗಳಿವೆ.
ದಶಕಗಳವರೆಗೆ ಕ್ರಿಕೆಟ್ ಶ್ರೋತೃ ವಿವರಣೆಯನ್ನು ತಿಳಿಸಿದ ಕಾರ್ಯಕ್ರಮಗಳೂ ಸುಪ್ರಸಿದ್ಧ. ಭಾನುವಾರದ ಚಲನಚಿತ್ರಗಳನ್ನು ಕಣ್ಮುಚ್ಚಿ ಕೇಳಿದ ಅನುಭವಗಳಾಗಿದ್ದುದು ರೇಡಿಯೋ ಮೂಲಕವೇ.ಸಮುದಾಯ ರೇಡಿಯೋ ಕೇಂದ್ರಗಳು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೆಮ್ಮೆಯಿಂದ ತಿಳಿಸಿತ್ತು.
ರೇಡಿಯೋ ಕಾರ್ಯಕ್ರಮಗಳನ್ನು ಆಲಿಸುವವರೇ ಇಲ್ಲ ಎನ್ನುವಷ್ಟರಲ್ಲಿ ಖಾಸಗೀ ಎಫ್.ಎಂ. ಚಾನೆಲ್ಲುಗಳು ಮನರಂಜನೆಯನ್ನು ಹೊತ್ತೂಯ್ದು ಆಲಿಸುವವರ ಸಂಖ್ಯೆಯನ್ನು ಇಮ್ಮಡಿಗೊಳಿಸಿತ್ತು. ಯೂಟ್ಯೂಬ್ ದೃಶ್ಯ-ಶ್ರವ್ಯ ತುಣುಕುಗಳು, ಮ್ಯೂಸಿಕ್ ಸ್ಟ್ರೀಮಿಂಗ್ ಆಪ್‌ಗಳ ನಡುವೆ ಬಾನುಲಿಯ ಭವಿಷ್ಯವೇನೆಂಬುವುದನ್ನು ಊಹಿಸಲು ಸಧ್ಯಕ್ಕೆ ಅಸಾಧ್ಯವೇ. ಆದರೂ, ರೇಡಿಯೋ ಕಾಲಾಂತರದಲ್ಲಿ ತನ್ನ ಅಗತ್ಯತೆಯನ್ನು ನಿರೂಪಿಸಿಕೊಂಡಿದೆ.
-ವಿಶ್ವನಾಥ ಭಟ್
ಧಾರವಾಡ