Advertisement
ಜಗತ್ತಿನ ಶ್ರೇಷ್ಠ ಕಾರ್ಯಗಳಲ್ಲಿ ಶಿಕ್ಷಕ ವೃತ್ತಿಯು ಅಗ್ರಸ್ಥಾನ ಪಡೆದಿದೆ. ಬಹು ಕಾಲದಿಂದಲೂ ಗುರು-ಶಿಕ್ಷಕರ ಸಂಪ್ರದಾಯ ನಡೆದುಕೊಂಡು ಬಂದಿದ್ದು, ನಮ್ಮ ಪೋಷಕರು ನಮ್ಮ ಮೊದಲ ಗುರುಗಳಾಗಿರುತ್ತಾರೆ ಏಕೆಂದರೆ ಅವರು ನಮಗೆ ಜಗತ್ತನ್ನು ತೋರಿಸಿದ್ದಾರೆ. ಅವರ ಸ್ಥಾನವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಸಮತೆಯ ತತ್ವದ ಮೂಲಕ ಸಂವಿಧಾನದ ಆಶಯವನ್ನು ವಿದ್ಯಾರ್ಥಿಗಳಿಗೆ ಭೋದಿಸಿ ಸಾಮರಸ್ಯ ಮೂಡಿಸುವ ಶಿಕ್ಷಕರು ಸಹ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದು ಅಕ್ಷರಶಃ ಸತ್ಯ.
Related Articles
Advertisement
ಇವರು ತರಬೇತಿಯಲ್ಲಿ ಉತ್ತಮ ಧರ್ಮವನ್ನು ಹೊಂದಿದ್ದರು ಮತ್ತು ಹೆಚ್ಚುವರಿಯಾಗಿ ವಿದ್ವಾಂಸ, ರಾಜತಾಂತ್ರಿಕ, ಬೋಧಕ ಮತ್ತು ಭಾರತದ ರಾಷ್ಟ್ರಪತಿಯಾಗಿ ಪ್ರಸಿದ್ಧರಾಗಿ ಶಿಕ್ಷಣತಜ್ಞರು ಸಹ ಆಗಿದ್ದರು, ಅವರು ಭಾರತದ ಶಿಕ್ಷಣ ಮಟ್ಟವನ್ನು ಸುಧಾರಿಸಲು ಅನೇಕ ಕೆಲಸಗಳನ್ನು ಮಾಡಿದರು. ರಾಧಾಕೃಷ್ಣನ್ ಅವರಿಗೆ 1954 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ ಅಂದರೆ “ಭಾರತ ರತ್ನ” ನೀಡಲಾಯಿತು.
ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕೆಲವು ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಒಮ್ಮೆ ಅವರ ಜನ್ಮದಿನವನ್ನು ಆಚರಿಸುವಂತೆ ಕೇಳಿಕೊಂಡರು ಎಂದು ಹೇಳಿದರು, ಅದಕ್ಕೆ ರಾಧಾಕೃಷ್ಣನ್ ಅವರು “ನನ್ನ ಜನ್ಮದಿನವನ್ನು ಪ್ರತ್ಯೇಕವಾಗಿ ಆಚರಿಸುವ ಬದಲು ಶಿಕ್ಷಕರ ದಿನವಾಗಿ ಆಚರಿಸಿದರೆ ನನಗೆ ತುಂಬಾ ಹೆಮ್ಮೆಯಾಗುತ್ತದೆ. ಅಂದಿನಿಂದ ಭಾರತದಲ್ಲಿ ಶಿಕ್ಷಕರ ದಿನಾಚರಣೆ ಆರಂಭವಾಯಿತು.
ಗುರು ಶಿಕ್ಷಣವನ್ನು ನೀಡುವುದರ ಜೊತೆಗೆ ಶಿಕ್ಷಣದ ಮೂಲ ಅರ್ಥವನ್ನು ಪ್ರತಿಯೊಬ್ಬ ವ್ಯಕ್ತಿಯ ಬದುಕಲ್ಲಿ ಜ್ಞಾನವೆಂಬ ದೀಪವನ್ನು ಬೆಳಗುವನು. ಇಂದಿನ ಜನ ಮಾನಸದಲ್ಲಿ ವಿದ್ಯೆ ಎಂಬುದೇ ಬದಲಾದ ಹಾದಿಯಲ್ಲಿ ಸಾಗುತ್ತಿದೆ ಏನೋ ಗೊತ್ತಿಲ್ಲ ಮಕ್ಕಳಲ್ಲಿ ಕಲಿಕಾ ಮಟ್ಟದಲ್ಲಿ ಸತ್ಯ ಅಥವಾ ಕಲಿಕೆಯ ಮೇಲಿನ ನಿರಾಸಕ್ತಿಯು ತಿಳಿಯದು. ಶಿಕ್ಷಕನಿಗಿದ್ದ ಗೌರವ ದಿನದಿಂದ ದಿನಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ ಘಟನೆ ಸಹ ನಡೆದಿದೆ. ಮೊದಲೆಲ್ಲ ಗುರುವನ್ನ ಗುರುವೇ ಪರಬ್ರಹ್ಮ ಎಂಬ ಸ್ವರೂಪದಲ್ಲಿ ಕಾಣಲಾಗುತ್ತಿತ್ತು ಪ್ರಸ್ತುತ ಮುಂದುವರಿದ ಕಾಲಘಟ್ಟದಲ್ಲಿ ಈ ರೀತಿ ಇದು ಕಣ್ಮರೆಯಾಗುತ್ತಿದೆ. ಅಲ್ಲದೆ ಈ ಕಾಲದ ವಿದ್ಯಾರ್ಥಿಗಳ ಮನಸ್ಸು ಕಿನ್ನತೆಯೆಡೆಗೆ ಸಾಗುತ್ತಿರುವುದು ವಿಷಾದನೀಯ ಅಂಶವಾಗಿದೆ. ಪೂಜ್ಯ ಭಾವನೆಯಿಂದ ಕಂಡುಬಂದ ಕಾಲ ಸಾಗಿ ಒಬ್ಬ ಗುರು ಎಂದರೆ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಒಂದು ಮಾಧ್ಯಮವಾಗಿ ರೂಪಗೊಂಡಿದ್ದಾನೆ.
ಒಟ್ಟಾರೆಯಾಗಿ ಹಿಂದೆ “ಚಡಿ ಚಡಿ ಚಂ ಚಂ ವಿದ್ಯಾ ಗಮ ಗಮ” ಎಂಬ ಶಿಕ್ಷೆಯಿಂದ ಶಿಕ್ಷಣವೆಂಬ ರೀತಿಯಲ್ಲಿತ್ತು . ಮೊದಲು ಏಟು ನಂತರ ವಿದ್ಯೆ ಗುರುಕುಲ ಪದ್ಧತಿ ಕಾಲದಲ್ಲಿ ಗುರುಗಳೆಲ್ಲ ವಿದ್ಯೆಯನ್ನು ಕಲಿಸಿಸುವ ಮೇಧಾವಿಗಳಾಗಿದ್ದರು. ಹೀಗೆ ದೇಶದ ಪ್ರಗತಿಗೆ ಶಿಕ್ಷಕನು “ಅಂಧಕಾರ” ವನ್ನು ದೂರಮಾಡಿ ಸುಜ್ಞಾನದ ಸನ್ಮಾರ್ಗವನ್ನು ತೋರುವ ವೈಚಾರಿಕತೆಯ ಬೀಜ ಬಿತ್ತುವ ಶಿಕ್ಷಕರ ಅಗತ್ಯತೆ ಇಂದಿನ ಆಧುನಿಕ ಸಮಾಜಕ್ಕೆ ತುರ್ತಾಗಿ ಬೇಕಿದೆ ಎಂದರೆ ತಪ್ಪಾಗಲಾರದು.
-ಕಿರಣ್ ಕುಮಾರ್ ಕೆ.ಎ.
ಕುವೆಂಪು ವಿ.ವಿ.