Advertisement

UV Fusion: ಎಲ್ಲರೊಳಗೊಂದಾಗು ಮಂಕುತಿಮ್ಮ

02:52 PM Sep 10, 2024 | Team Udayavani |

ಬಾಲ್ಯದಲ್ಲಿ ಇದ್ದ ಸಂತಸ ಯೌವನದ ಜೀವನನಲ್ಲಿ ಸಿಗಲಾರದು. ನೆಮ್ಮದಿ, ಸಂತೋಷ, ಆಟ-ಪಾಠ, ಮೋಜು-ಮಸ್ತಿ ಹೀಗೆ ಹತ್ತು ಹಲವಾರು ವಿಷಯದಲ್ಲಿ ಗೆಳೆಯರೊಂದಿಗೆ ನೆಮ್ಮದಿಯಾಗಿ ಕಳೆಯುವ ಕಾಲವೇ ಬಾಲ್ಯ. ದೊಡ್ಡವರಾದಂತೆ ಕೆಲಸ, ಸದ್ದಿಲ್ಲದೆ ಬರುವ ಕಷ್ಟಗಳು, ಜವಾಬ್ದಾರಿಯ ಜತೆಗೆ ನೆಮ್ಮದಿಯ ಜೀವನವು ಈ ಮಾಯಾ ನಗರಿಯಲ್ಲಿ ಕಳೆದು ಹೋಗಿದೆ.

Advertisement

ನಾವು ಚಿಕ್ಕವರಿದ್ದಾಗ ದೊಡ್ಡವವರಿಗೆ ಏನು ಚಿಂತೆ ಇರುವುದಿಲ್ಲ ಎಂದು ಯೋಜನೆ ಮಾಡಿದೇ ಹೆಚ್ಚು. ಆದರೆ ಈಗ ಜೀವನದ ಜಂಜಾಟದಲ್ಲಿ ಬಾಲ್ಯವೇ ಎಷ್ಟೋ ಚೆನ್ನಾಗಿಯ್ತು ಅನ್ನಿಸಲು ಶುರುವಾಗಿದೆ. ಈ ಬಾಲ್ಯವೇ ಹಿಂಗೆ. ಬಾಲ್ಯದಲ್ಲಿ ಕಲಿತ ಪಾಠ ಯಾವ ವಿಶ್ವವಿದ್ಯಾಲಯಗಳಲ್ಲಿ ಸಹ ಕಲಿಸಲು ಸಾಧ್ಯವಿಲ್ಲ. ಸ್ನೇಹಿತರೊಂದಿಗೆ ಕಳೆದ ಕ್ಷಣಗಳು ನೆನೆದಷ್ಟು ಮನಸ್ಸಿಗೆ ಬಾರವಾದರೂ ಇನ್ನೂ ಮನಸ್ಸಲ್ಲಿ ಮಾಸದೆ ಹಾಗೆ ಉಳಿದುಕೊಂಡಿವೆ. ಮರಳಿ ಬರಬಾರದೇ ಆ ಬಾಲ್ಯ ಎನ್ನಿಸಿದು ಹಲವು ಬಾರಿ. ಆ ಕ್ಷಣಗಳನ್ನು ನೆನದರೆ ನನಗೆ ಅರಿವಿಲದಂತೆ ಈಗಲೂ ಕಣ್ಣೀರು ಜಾರುತ್ತಿರುವುದು.

ನಾ ಮುಂದು ತಾ ಮುಂದು ಎಂದು ಹೊಗುತ್ತಿರುವ ಕಾಲದ ಕೈ ಗೊಂಬೆಯಾಗಿರುವ ನಾವುಗಳು ನೆಮ್ಮದಿಯ ಜೀವನ ಮರೆತ್ತಿದ್ದೇವೆ. ಆ ದಿನಗಳಲ್ಲಿ ಭಾರವಾದ ಶಾಲೆಯ ಬ್ಯಾಗ್‌ ಹೊತ್ತು ಗೆಳತಿಯರೊಂದಿಗೆ ಊರಿನಲ್ಲಿ ನಡೆಯುವ, ನಡೆಯತ್ತಿರುವ ಸುದ್ದಿಗಳನ್ನು ಗಾಸಿಪ್‌ ಮಾಡುತ್ತಾ ಶಾಲೆಗೆ ತಲುಪುವುದು, ಶಾಲೆಗೆ ಹೋಗುವುದು ತಡವಾದರೆ ಗುರುಗಳಿಂದ ಬೈಸುಗ್ಳೋ ಜೊತೆಗೆ ನಾಲ್ಕೈದು ಪಟ್ಟು ತಿನ್ನುವುದು, ಶಾಲೆಯಲ್ಲಿ ಕುಳಿತು ಬೇಸರವಾಯ್ತು ಎಂದು ಶಾಲೆ ಬಂಕ್‌ ಮಾಡಿ ಸ್ನೇಹಿತರೊಂದಿಗೆ ನಮ್ಮಾರ ಸಾಹುಕಾರನ ಹೊಲದ ಮಾವಿನ ಹಣ್ಣು ಕದ್ದು ತಿನ್ನುದ್ದು, ಆ ವಿಷಯ ಮನೆಯಲ್ಲಿ ಗೊತ್ತಾಗಿ ಬಸುಂಡೆ ಬರುವ ಹಾಗೆ ಹೊಡೆದರು ಏನು ಆಗಿಲ್ಲ ಎನ್ನುವ ಹಾಗೆ ನಗು ಮುಖದ ರಾಣಿಯಂತೆ ಇರುವುದು. ಮರ ಕೋತಿ, ಗೋಲಿ ಆಟ, ಕಣ್ಣಾ ಮುಚ್ಚಾಲೆ ಆಟ ಆಡುವುದು. ಅದರಲ್ಲಿ ಸೊತರೇ ಗೆಳತಿಯರನ್ನು ಬೈದು ಅವರ ಮೇಲೆ ಮುನಿಸಿಕೊಂಡು ಇಡೀ ದಿನ ಮಾತಾಡದೆ ಇರುವುದು, ಅನಂತರ ಮುನಿಸು ಮುರಿದು ಮತ್ತೆ ಅವರೊಂದಿಗೆ ಆಡುವುದು ಆ ಕ್ಷಣದ ಸಂತಸ ತುಂಬಾ ಹಿತ್ತ ಎನ್ನಿಸುವುದು.

ಮಳೆಗಾಲದಲ್ಲಿ ಅಂತೂ ಪಾಠ ಬಿಟ್ಟು ಮಳೆಯಲ್ಲಿ ಆಡುವುದೇ ಒಂದು ಮಜ. ಮಳೆಯಲ್ಲಿ ಜೊತೆಯಲ್ಲಿ ಎಂದು ಪ್ರೇಮಿಗಳಂತೆ ಕುಣಿವುದು. ಹೀಗೆ ಬಾಲ್ಯದಲ್ಲಿ ನಡೆದ ಅನೇಕ ಸಣ್ಣ ಸಣ್ಣ ವಿಷಯದಲೂ ಸಂತಸ ಕಂಡ ನಾವುಗಳು ದೊಡ್ಡವರಾದಂತೆ ಎಲ್ಲವು ಕೇವಲ ನೆನಪುಗಳಾಗಿ ಮನಸಿನಲ್ಲಿ ಮಾಸದೆ ಉಳಿದುಕೊಳ್ಳುತ್ತವೆ. ಹೀಗೆ ನನ್ನ ಬಾಲ್ಯದ ನೆನಪು ಮನದಲ್ಲಿ ಉಳಿದುಕೊಂಡಿದೆ.

ನಾವು ದೊಡ್ಡವರಾದಂತೆ ಎಲ್ಲರಂತೆ ಹಣ ಮಾಡಬೇಕು ಎಂದು ಹಣದ ಹಿಂದೆ ಹೋಗಿ ಬಿಡುವಿಲ್ಲದ ಕೆಲಸದ ಮಧ್ಯ ಸಿಲುಕಿ ನಮ್ಮನ್ನು ನಾವು ಕಳೆದುಕೊಳ್ಳುವುದರ ಜತೆಗೆ ನೆಮ್ಮದಿಯ ಜೀವನ ಸಹ ಕಳೆದುಕೊಳ್ಳುತ್ತೇವೆ. ಬಿಜಿ ಟೈಮ್‌ ಗೆ ಬಾಯ್‌ ಹೇಳಿ ನೆಮ್ಮದಿ ಹುಡುಕಲು ಶುರು ಮಾಡಿದಾಗ್ಲೇ ಅರಿವಾಗುವುದು. ನಮ್ಮ ನೆಮ್ಮದಿಯ ಜೀವನ ಬಾಲ್ಯದಲ್ಲೇ ಕಳೆದು ಹೋಗಿದೆ ಎಂದು.

Advertisement

ಇಂದು ಅವಸರವಾಗಿ ಹೋಗುತ್ತಿರುವ ಕಾಲದ ಜತೆಗೆ ನಮ್ಮ ಜೀವನ ಸಾಗಿಸುವುದು ಅನಿವಾರ್ಯವಾಗಿದೆ. ಸಮಯವು ಸ್ಪರ್ಧೆಗೆ ನಿಂತ ಕುದುರೆಯಂತೆ ಓಡುತ್ತಿದೆ. ಅದರಲ್ಲಿ ನಮ್ಮ ಪಾಡು ನಾಯಿ ಪಾಡಗಿ ಹೋಗಿದೆ. ಚಿಂತೆಯಿಲ್ಲದ, ನಿಷ್ಕಲ್ಮಶದ ಮನಸ್ಸು, ಮುಖದಲ್ಲಿ ಸದಾ ಸಂತಸ ತುಂಬಿ, ಎಲ್ಲರನ್ನು ಸಮಾನವಾಗಿ ನೋಡು ದೃಷ್ಟಿ, ಆಟ-ಪಾಠದಲ್ಲಿ ಏನೋ ಹುಮ್ಮಸ್ಸು, ಜೀವನದಲ್ಲಿ ಯಾವಾಗಲೂ ತೇಜಸ್ಸು ಇರುವ ಬಾಲ್ಯವೇ ದಯಮಾಡಿ ಮತ್ತೂಮ್ಮೆ ನಮ್ಮ ಬಾಳಿನಲ್ಲಿ ಮರುಳಿ ಬರುವೆಯಾ….?

- ನೀಲಾ ಹೊಸಮನಿ

ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next