Advertisement
ದಿನೇಶ ದುಡಿಯುವುದು ಅನಿವಾರ್ಯ ಆಗಿತ್ತು. ಅದ್ರಿಂದಲೇ ತನ್ನ ಮನೆ ಸಾಗಿಸಬೇಕಾಗಿತ್ತು. ದಿನವೂ ಚಾಲಕನಾಗಿ ಬಹಳ ಪ್ರಾಮಾಣಿಕವಾಗಿ ಕಷ್ಟ ಪಡುತ್ತಿದ. ಹಬ್ಬಕ್ಕೋ ಇಲ್ಲ ಕಾರ್ಯಕ್ರಮಕ್ಕೋ ಊರಿಗೆ ಹೋಗುತ್ತಿದ್ದ. ಟ್ಯಾಕ್ಸಿ ಚಾಲಕನಾಗಿ ದುಡಿಮೆ ಮಾಡುತ್ತಿದ್ದ ದಿನೇಶನಿಗೆ ಸ್ನೇಹಿತ ವರ್ಗ ತುಂಬಾ ಕಡಿಮೆ. ಅವನದೊಂದು ಒಬ್ಬಂಟಿ ಜೀವನ. ಈ ಕಾರಣಕ್ಕೆ ದಿನ ಪೂರ್ತಿ ದುಡಿಮೆಯಲ್ಲೇ ಮುಳುಗಿ ಹೋಗುತ್ತಿದ್ದ.
Related Articles
Advertisement
ಇನ್ನೇನು ಮಲಗಬೇಕು ಎನ್ನುವ ಸಮಯದಲ್ಲಿ ಮೊಬೈಲ್ ಗೆ ಸಂದೇಶವೊಂದು ಬಂದಿತು. ಹಾಯ್ ಐ ಆಮ್ ಗೀತಾ ಎಂದು. ದಿನೇಶ ಹೇಳಿ ನನ್ನಿಂದ ಏನು ಆಗಬೇಕು ಎಂದು ಕೇಳಿದ. ಸ್ವಲ್ಪ ಸಮಯ ಇವರಿಬ್ಬರ ನಡುವೆ ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಪ್ರತಿದಿನ ಅನೇಕ ವಿಷಯಗಳು ಸಮಸ್ಯೆಗಳ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಗಾಢವಾದ ಇವರ ಸ್ನೇಹ ಪ್ರೀತಿಯಾಗಲು ತುಂಬಾ ದಿನ ಬೇಕಾಗಾಲಿಲ್ಲ.
ದಿನೇಶನಿಗೆ ಕಾಲ್ ಮಾಡಿದ ಗೀತಾ ತನ್ನ ತಂದೆಯ ಹತ್ತಿರ ಮಾತನಾಡಿ, ನಮ್ಮ ಮದುವೆಗೆ ಒಪ್ಪಿಸೋಣ ಎಂದು ಹೇಳಿದಳು . ಆಗ ದಿನೇಶ ಗೀತಾಳಿಗೆ ನಾವಿನ್ನೂ ಜೀವನದಲ್ಲಿ ನೆಲೆ ಕಂಡುಕೊಳ್ಳಲು ತುಂಬಾ ಸಮಯ ಬೇಕು, ಆತುರ ಬೇಡ ಎಂದು ಹೇಳಿದ. ಅದಕ್ಕೆ ಗೀತಾ ಇಬ್ಬರು ಕೆಲಸಕ್ಕೆ ಹೋಗುತ್ತಿದ್ದೇವೆ, ಸಾಕಷ್ಟು ದುಡಿಯುತ್ತಿದ್ದೇವೆ, ಸಮಸ್ಯೆ ಏನು ಆಗುವುದಿಲ್ಲ, ಯೋಚನೆ ಮಾಡಬೇಡ ಎಂದು ಹೇಳುತ್ತಾಳೆ. ನಿನಗೆ ನಾಳೆ ಒಂದು ಸರ್ಪ್ರೈಸ್ ಇದೇ ಎಂದು ಹೇಳಿ ತನ್ನ ಕಾಲ್ ಕಟ್ ಮಾಡುತ್ತಾಳೆ. ದಿನೇಶನಿಗೆ ಏನು ಅಂತಹ ಸರ್ಪ್ರೈಸ್ ಎಂದು ತನ್ನಲ್ಲೇ ಯೋಚನೆ ಮಾಡುತ್ತಲೇ ನಿದ್ರೆಗೆ ಜಾರುತ್ತಾನೆ.
ಗೀತಾ ಸುಮಾರು ಒಂಬತ್ತು ಗಂಟೆಗೆ ಕಾಲ್ ಮಾಡಿ ದಿನೇಶನಿಗೆ ಇವತ್ತು ನಮ್ಮ ಪಪ್ಪ ಬರ್ತಾರೆ ಮಾತಾಡೋದು ಇದೆ ಅಡ್ರಸ್ ಕಳಿಸ್ತಿನಿ ಬಾ ಎಂದಳು.
ದಿನೇಶ ರೆಡಿಯಾಗಿ ತನ್ನ ಟ್ಯಾಕ್ಸಿ ಆನ್ ಮಾಡಿ ಗೀತಾ ಹೇಳಿದ ವಿಳಾಸಕ್ಕೆ ಹೊರಟ. ಒಳಗೆ ಹೋದ ದಿನೇಶನಿಗೆ ಮೊದಲು ಕಂಡಿದ್ದು ಗೀತಾ ಸ್ವಲ್ಪ ಪಕ್ಕದಲ್ಲಿ ಸುಮಾರು ಐವತ್ತರ ಪ್ರಾಯದ ವ್ಯಕ್ತಿಯೊಬ್ಬರು ಕೂತಿದ್ದರು. ಅವರು ನೋಡಲು ದೊಡ್ಡ ಉದ್ಯಮಿಯಂತೆ ಕಾಣುತ್ತಿದ್ದರು. ದಿನೇಶ ಅವರ ಬಳಿ ಬಂದು ಕುಳಿತ. ಗೀತಾ ಇವರು ನಮ್ಮ ಪಪ್ಪ ಮುಂಬಯಿಯಲ್ಲಿ ದೊಡ್ಡ ಕಂಪನಿಯನ್ನು ಸ್ಥಾಪಿಸಿದ್ದಾರೆ ಎಂದಳು. ದಿನೇಶನಿಗೆ ಇದನ್ನು ಕೇಳಿ ತಲೆ ತಿರುಗಿದಂತೆ ಆಯಿತು ಯಾಕೆಂದರೆ ಗೀತಾ ಇದೆಲ್ಲ ಹೇಳಿರಲಿಲ್ಲ. ದಿನೇಶ ಗೀತಾ ಕೂಡ ಮಧ್ಯಮ ವರ್ಗದ ಹುಡುಗಿ ಎಂದುಕೊಂಡಿದ್ದ.
ಗೀತಾಳ ತಂದೆ ನನಗೆ ಇರುವುದು ಒಬ್ಬಳೇ ಮಗಳು ಅವಳ ಇಷ್ಟಕ್ಕೆ ನಾನು ಅಡ್ಡ ಬರುವುದಿಲ್ಲ ಎಂದು ದಿನೇಶನಿಗೆ ಹೇಳಿದರು. ಆದರೆ ನನ್ನದೊಂದು ಕಂಡೀಷನ್ ಇದೆ, ನೀನು ನನ್ನ ವ್ಯವಹಾರವನ್ನೆಲ್ಲಾ ನೋಡಿಕೊಳ್ಳಬೇಕು ಎಂದರು. ದಿನೇಶ ಏನು ಮಾತನಾಡದೆ ಮಂಕು ಬಡಿದವನಂತೆ ತಲೆಯಾಡಿಸಿದ. ಗೀತಾಳ ಮೊಗದಲ್ಲಿ ಮಂದಹಾಸವೊಂದು ಮೂಡಿತ್ತು. ದಿನೇಶನು ಇಷ್ಟು ದಿನ ಪಟ್ಟ ಕಷ್ಟಕ್ಕೆ ತರ್ಪಣ ಬಿಡುವ ದಿನ ಬಂದಿತ್ತು. ಸಂತೋಷದಿಂದ ಸ್ವಲ್ಪ ಸಮಯ ಮೂವರು ಮಾತನಾಡಿ ಮನೆಯ ಕಡೆ ಹೊರಟರು. ದಿನೇಶನ ಅದೃಷ್ಟ ಕೇಳದೆಯೇ ತಾನಾಗಿ ಗೀತಾಳ ರೂಪದಲ್ಲಿ ಬಂದಿತ್ತು.
-ಲೋಕೇಶ್
ಶಿರಾ