Advertisement

UV Fusion: ಭಾವ ಜೀವಿಗಳಾಗೋಣ

03:42 PM Aug 30, 2024 | Team Udayavani |

ಪ್ರತಿಯೊಬ್ಬರ ಬದುಕಿನಲ್ಲೂ ಹುಟ್ಟಿನಿಂದ ಸಾವಿನವರೆಗೂ ಪರಿಚಯವಾದ ಸಂಬಂಧಿಗಳಲ್ಲಿ ಎಲ್ಲರೂ ಜತೆಗೆ ಇರುವುದಿಲ್ಲ. ಪ್ರತಿಯೊಂದು ಹಂತದಲ್ಲೂ ಹಲವಾರು ವ್ಯಕ್ತಿಗಳ ಪರಿಚಯವಾಗುತ್ತದೆ. ಪರಿಚಯವಾದ ವ್ಯಕ್ತಿಗಳ ಜತೆಗೆ ಸ್ನೇಹ ಆಯಾ ಪರಿಸ್ಥಿತಿಗೆ ತಕ್ಕಂತೆ ನಮಗೆ ಆತ್ಮೀಯತೆ ಬೆಳೆಯುತ್ತದೆ. ಜೀವನ ಘಟ್ಟದಲ್ಲಿ  ಪ್ರತಿ ವ್ಯಕ್ತಿ ಪರಿಚಯವಾದಗಲೂ ಆ ವ್ಯಕ್ತಿಯ ವ್ಯಕ್ತಿತ್ವ ಹಾಗೂ ವ್ಯಕ್ತಿಯಿಂದ ನಮಗೆನಾದರೂ ಪ್ರಯೋಜನವಿದೆಯೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪರಿಚಯವಾದ ವ್ಯಕ್ತಿಗಳೆಲ್ಲರೂ ನಮ್ಮ ಜೀವನದ ಕೊನೆವರೆಗೂ ಇರುವುದಿಲ್ಲ.

Advertisement

ಅವಶ್ಯಕತೆ ಹಾಗೂ ಅಗತ್ಯಗಳ ಆಧಾರದಲ್ಲಿ ಕೆಲವು ವರ್ಷಗಳೊ, ದಿನಗಳೊ ಇದ್ದು ದೂರಾಗುತ್ತಾರೆ. ರಕ್ತ ಸಂಬಂಧಿಗಳ ವಿಚಾರದಲ್ಲಿ ನಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ನಮ್ಮನ್ನ ಗೌರವಿಸುವುದು ಗುರುತಿಸುವುದು ವಾಡಿಕೆಯಾಗಿ ಬಿಟ್ಟಿದೆ. ಆರ್ಥಿಕವಾಗಿ ನಾವೆಷ್ಟು ಸದೃಢರೊ ಅಷ್ಟು ಸಂಬಂಧಿಗಳು ನಮಗೆ ಸ್ಪಂದಿಸುತ್ತಾರೆ. ನಾವು ಆರ್ಥಿಕವಾಗಿ ಸಬಲರಲ್ಲ ಎಂದಾದರೆ ಮೂಲೆ ಗುಂಪಾಗಿಸಿ ತಮ್ಮ ಉಚಿತ ಬುದ್ಧಿಮಾತಿಗಳಿಗಷ್ಟೆ ನಮ್ಮನ್ನ ಸೀಮಿತಗೊಳಿಸುತ್ತಾರೆ.

ನಮ್ಮ ಸಂಬಂಧಿಗಳು ಹಾಗೂ ಪರಿಚಯಸ್ಥರು ನಮ್ಮಿಂದ ದೂರಾಗುವ ಸಮಯ ಬಂದಾಗ ನಮ್ಮ ಆತ್ಮಸಾಕ್ಷಿಗೆ ಮೋಸ ಮಾಡದೆ ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆಕೊಟ್ಟು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಮನಸ್ಥಾಪವಿದ್ದರೆ ಬಗೆಹರಿಸಿಕೊಳ್ಳಬೇಕು. ಅವರು ನಮ್ಮಲ್ಲಿರೂ ಗುಣಕ್ಕೆ ಗೌರವಿಸುವವರಾದರೆ ನಾವು ಯಾವುದೇ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದರೂ ಅವರು ನಮ್ಮಿಂದ ದೂರವಾಗುವುದಿಲ್ಲ. ಅವರು ನಮ್ಮ ಪರಿಸ್ಥಿತಿ ಹಾಗೂ ಆರ್ಥಿಕತೆ ಆಧಾರದಲ್ಲಿ ಗೌರವಿಸುವವರಾದರೆ ಅಂತಹವರ ಸ್ನೇಹಕ್ಕೆ ಯಾವುದೇ ಅರ್ಥವಿಲ್ಲ, ಅಂತಹವರಿಂದ ದೂರವಾದರೆ ಒಳಿತು.

ನಮ್ಮ ಬದುಕಿನಲ್ಲಿ ಪರಿಚಯವಾದರು ಹಾಗೂ ಸಂಬಂಧಿಗಳು  ನಮ್ಮ ಕೆಟ್ಟ ಪರಿಸ್ಥಿತಿಯಿಂದ ದೂರದರೆ ಅಂತಹವರನ್ನ ಮರಳಿ ಎಂದಿಗೂ ನಿಮ್ಮ ಬದುಕಿನಲ್ಲಿ ಆಹ್ವಾನಿಸಬೇಡಿ. ನಮ್ಮ ಬದುಕಿನಲ್ಲಿ ಯಾರೇ ಪರಿಚಯವಾದರೂ ಅದು ಋಣವೇ ಆಗಿರುತ್ತದೆ. ನಮ್ಮ ಜತೆ ಇದ್ದಷ್ಟು ದಿನ ಒಳಿತಿನ ಹಾದಿಯಲ್ಲಿ ಅವರೊಟ್ಟಿಗಿದ್ದು ಅವರು ನಿರ್ಗಮಿಸುವ ಮನಸ್ಥಿತಿಗೆ ಬಂದಾಗ ಬಿಳ್ಗೊಡುವ ಮನಸ್ಸು ನಮ್ಮದಾಗಲಿ. ಸಾವಿನವರೆಗೂ ಯಾರು ಬರುವುದಿಲ್ಲ.

ನಮ್ಮ ಬದುಕಿನಲ್ಲಿ ಪ್ರತಿ ಪರಿಚಯಕ್ಕೂ ಒಂದು ಅರ್ಥ ನಿಡೋಣ. ಋಣವಿದಷ್ಟೆ ದಿನ ನಮ್ಮ ಬಂಧಗಳು ನಮ್ಮ ಜತೆಗಿರುತ್ತವೆ, ದೂರವಾದವರನ್ನ ದೂರದಿರಿ, ಸನಿಹ ನಿಂತು ಗೌರವಿಸುವ ಬಂಧಗಳನ್ನ ಆಹ್ವಾನಿಸೋಣ. ನಮ್ಮ ಆಲೋಚನ ತರಂಗಕ್ಕೆ ಕಿವಿಗೊಟ್ಟ ಜೀವಗಳಿಗೆ ಋಣಿಯಾಗಿರೊಣ.

Advertisement

ಹಾಗೆಯೇ ಸುಖ ಸುಮ್ಮನೆ ಯಾರ ಬದುಕಿನಲ್ಲೂ ಸುಳ್ಳಿನ ಭರವಸೆ, ಸ್ವಾರ್ಥಕೆಂದು ತುಂಬಾ ಸನಿಹವಾಗಿ ದಿನ ಕಳೆದಂತೆ ಅವರ ಭಾವನೆಗಳೊಂದಿಗೆ ಬೆರೆತು, ದಿಢೀರನೇ ಅವರ ಬದುಕಿನಿಂದ ನಿರ್ಗಮಿಸುವ ಹಾಗೂ ಅವರನ್ನ ಕಡೆಗಳಿಸುವ ತಪ್ಪು ನಿರ್ಧಾರ ಎಂದಿಗೂ ಮಾಡಬಾರದು. ಬಂಧಗಳು ಹೆಣೆಯೊಂದು ರಕ್ತದಲ್ಲೋ, ರೂಪದಲ್ಲೋ, ಸಂಪತ್ತಿನಲ್ಲೋ ಅಲ್ಲವೇ ಅಲ್ಲ. ಬಂಧಗಳು ಹೆಣೆಯೊಂದು ನಮ್ಮ ಋಣದಿಂದ ಆ ಋಣಕ್ಕೆ ನಮ್ಮ ಒಳಿತಿನ ಭಾವನಾತ್ಮಕ ಪನ್ನೀರನೆರೆದು ಗೌರವಿಸೋಣ. ಈ ಭೂಮಿಗೆ ನಾವೆಲ್ಲರೂ ಯಾತ್ರಿಕರಷ್ಟೆ, ಯಂತ್ರ , ತಂತ್ರದ ಬದುಕು ನಮ್ಮದಾಗದಿರಲಿ. ಭಾವ ಜೀವಿಗಳಾಗೋಣ.

 -ಮಂಜೇಶ್‌ ದೇವಗಳ್ಳಿ

ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next