Advertisement
ಚಳಿ, ಮಳೆ, ಗಾಳಿ ಎನ್ನದೆ ಪತ್ರಿಕೆಯನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಹುಡುಗ. ಇವರಿಗೆಲ್ಲ ಎಂದಾದರೂ ಒಂದು ಕೃತಜ್ಞತೆಯನ್ನು ಹೇಳಿದ್ದೇವೆಯೇ? ನಾವು ಕುಡಿಯುವ ಕಾಫಿಯ ಹಿಂದೆ ಎಷ್ಟೊಂದು ಜನರ ಪರಿಶ್ರಮವಿದೆ. ಹೆಂಡತಿ ಅಥವಾ ಅಮ್ಮನಿಂದ ಕಾಫಿಯ ಕಪ್‌ನ್ನು ತೆಗೆದುಕೊಳ್ಳುವಾಗ ಒಂದು ಕೃತಜ್ಞತೆಯ ನಗುವನ್ನು ಬೀರಿದ್ದೇವೆಯೇ? ಇವುಗಳೆಲ್ಲವೂ ನಮಗೆ ಕೃತಕವಾಗಿಯೇ ಕಾಣುತ್ತವೆ. ಪ್ರತಿದಿನ ಪತ್ರಿಕೆ ಬರುತ್ತದೆ, ಕಾಫಿ ಕುಡಿಯುತ್ತಾ ಓದಿ ಮುಗಿಸುತ್ತೇವೆ ಅಷ್ಟೇ.
Related Articles
Advertisement
ನಮ್ಮ ಬದುಕಿನ ಹಾದಿಯಲ್ಲಿ ಕೆಟ್ಟವರು ಮತ್ತು ಒಳ್ಳೆಯವರು ಸದಾ ಎಡತಾಕುತ್ತಲೇ ಇರುತ್ತಾರೆ. ಇಬ್ಬರಿಗೂ ನಾವು ಕೃತಜ್ಞರಾಗಿರಬೇಕು. ಒಳ್ಳೆಯವರು ಸನ್ಮಾರ್ಗವನ್ನು ತೋರಿದರೆ, ಕೆಟ್ಟವರು ಒಳ್ಳೆಯ ಅನುಭವಗಳನ್ನು ಕಟ್ಟಿಕೊಡುತ್ತಾರೆ.
ಎನಿತು ಜೀವದಲಿ
ಎನಿತು ಜೀವರಿಗೆ
ಎನಿತು ನಾವು ಋಣಿಯೋ
ಅರಿತು ನೋಡಿದರೆ ಬಾಳು
ಎಂಬುದಿದು ಋಣದ ರತ್ನ ಗಣಿಯೋ
ಎನ್ನುತ್ತಾ ಜಿ . ಎಸ್. ಶಿವರುದ್ರಪ್ಪನವರು ಬದುಕಿನಲ್ಲಿ ನಾವು ಎಲ್ಲರಿಗೂ ಋಣಿಯಾಗಿರಬೇಕೆಂದು ಆಶಿಸುತ್ತಾರೆ.
ಒಂದು ಬೆಳಗು ಯಾರಿಗೆಲ್ಲ ಕೃತಜ್ಞರಾಗಿ ಇರಬೇಕೆಂದು ಹೇಳುತ್ತದೆ. ನಮ್ಮ ಕುಟುಂಬ, ಹಕ್ಕಿ ಪಕ್ಷಿಗಳ ಕಲರವ, ಸೂರ್ಯೋದಯ, ತಣ್ಣನೆಯ ಗಾಳಿ, ಗಿಡ ಮರಗಳು, ದಿನಪತ್ರಿಕೆ ಹಾಕುವ ಹುಡುಗ, ವಾಯು ವಿಹಾರಕ್ಕೆ ಜತೆಯಾಗುವ ಹಿರಿಕಿರಿಯರು, ಒಳಿತನ್ನು ಬಯಸುವ ಸನಿ¾ತ್ರರು, ಒಳಿತನ್ನು ಬಯಸುವಂತೆ ನಾಟಕವಾಡುವ ಗೋಮುಖ ವ್ಯಾಘ್ರರು, ತಪ್ಪಾದಾಗ ಮುನ್ನಡೆಸುವ ಮಾರ್ಗದರ್ಶಕರು,… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ನಾವು ಉಸಿರಾಡುವ ಗಾಳಿಯಿಂದ ಹಿಡಿದು ಪ್ರೀತಿಸುವ ಸಂಬಂಧಗಳವರೆಗೆ ಕೃತಜ್ಞತೆಯ ಮೂಲಕ ಜೀವನದಲ್ಲಿ ನಿಜವಾದ ಸಮೃದ್ಧಿಯನ್ನು ಕಾಣಬಹುದು. ಕೃತಜ್ಞತೆಯು ಹಲವಾರು ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ಹೊಂದಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಕೃತಜ್ಞತೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ಮೂಲಕ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಜೀವನದ ಸಕಾರಾತ್ಮಕ ಅಂಶಗಳ ಮೇಲೆ ಮನಸ್ಸು ಕೇಂದ್ರೀಕರಿಸುವ ಮೂಲಕ ಒತ್ತಡ, ಆತಂಕ ಮತ್ತು ಖನ್ನತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ಭಾವನಾತ್ಮಕ ಸ್ಥಿತಿ ಸ್ಥಾಪಕತ್ವ ಮತ್ತು ಚೈತನ್ಯಕ್ಕೆ ಕಾರಣವಾಗುತ್ತದೆ.
–ಕೆ.ಟಿ. ಮಲ್ಲಿಕಾರ್ಜುನಯ್ಯ
ಶಿಕ್ಷಕರು, ಕಳ್ಳಿಪಾಳ್ಯ, ಕೊರಟಗೆರೆ