Advertisement

UV Fusion: ಕನಸಿನ ಬೆನ್ನು ಹತ್ತಿ

05:53 PM Oct 23, 2024 | Team Udayavani |

ಅನೇಕರು ತಾವು ಹಾಗಾಗಬೇಕು, ಹೀಗಾಗಬೇಕು ಎಂಬ ಹಲವು ಕನಸುಗಳನ್ನು ಹೊತ್ತುಕೊಂಡು ಜೀವನದ ಹಾದಿಯಲ್ಲಿ ಓಡುತ್ತಿರುತ್ತಾರೆ. ಇನ್ನು ಕೆಲವರು ತಮ್ಮ ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳಲಾಗದೇ ಪಾಲಿಗೆ ಬಂದದ್ದು ಪಂಚಾಮೃತ ಎಂದು ಸುಮ್ಮನಿದ್ದು ಬಿಡುತ್ತಾರೆ. ಇವುಗಳ ನಡುವೆ ತನ್ನದು ಮಾತ್ರ ನೆರವೇರದ ಕನಸು, ತಾನು ದುರಾದೃಷ್ಟವಂತ, ತನ್ನಿಂದ ಏನೂ ಸಾಧ್ಯವಿಲ್ಲ ಎಂಬ ಆಲೋಚನೆಗಳಿಂದ ತಮ್ಮೆಲ್ಲಾ ಕನಸುಗಳನ್ನು ಬದಿಗಿಟ್ಟುಬಿಡುವವರೂ ಇದ್ದಾರೆ.

Advertisement

ಇನ್ನು ಕೆಲವರು ತಮ್ಮ ಕನಸು ಈಡೇರುವ ಅವಕಾಶವಿದ್ದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವುದಿಲ್ಲ. ಭಾರತದ ಮಹಾನ್‌ ವಿಜ್ಞಾನಿ ಎ. ಪಿ. ಜೆ. ಅಬ್ದುಲ್‌ ಕಲಾಂ ಅವರು ಕನಸು ಕಾಣಿರಿ ಎಂಬ ಮಾತನ್ನು ಹೇಳುತ್ತಾರೆ. ಅದರರ್ಥ ನಾವು ಕಾಣುವ ಕನಸು ಸಾಧನೆಯ ಕನಸುಗಳಾಗಿರಬೇಕು. ಅವು ಆಲೋಚನೆಗಳಾಗಿ ರೂಪಾಂತರಗೊಂಡು ಬಳಿಕ ಕ್ರಿಯೆಗೆ ಕಾರಣವಾಗುತ್ತವೆ ಎಂದು.

ಮನುಷ್ಯನಿಂದ ಆಗದ ಕೆಲಸ ಯಾವುದು ಇಲ್ಲ ಎಂಬ ಮಾತನ್ನು ಕೇಳಿದ್ದೇವೆ. ಆದರೆ ಅದು ಮನುಷ್ಯನಲ್ಲಿರುವ ಛಲ, ಹಠದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ತಾವು ಕಾಣುವ ಕನಸನ್ನು ಹೇಗೆ ನನಸಾಗಿಸಬಹುದು ಎಂಬ ಪ್ರಶ್ನೆಯನ್ನು ಹಾಕಿಕೊಳ್ಳುವುದರ ಮೂಲಕ ಕನಸನ್ನು ನನಸಾಗಿಸುವ ದಾರಿಯನ್ನು ಕಂಡುಕೊಳ್ಳಬೇಕು. ಎಲ್ಲದ್ದಕ್ಕಿಂತ ಮುಖ್ಯವಾಗಿ ನಾವು ನಕಾರಾತ್ಮಕ ಚಿಂತನೆಗಳ ಕಡೆಗೆ ವಾಲದೆ, ಎಲ್ಲ ವಿಚಾರಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದನ್ನು ಮೊದಲಿಗೆ ರೂಢಿಸಿಕೊಳ್ಳಬೇಕು.

ಇದಕ್ಕೆ ಅದ್ಭುತ ಉದಾಹರಣೆಯೆಂದರೆ ಅಂಗವಿಕಲರು, ವಿಕಲಚೇತನರು. ಇವರಲ್ಲಿ ಅದೆಷ್ಟೋ ಜನರು ಸಾಧನೆ ಮಾಡಿದಂತಹ ಅನೇಕ ಉದಾಹರಣೆಗಳನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಇನ್ನು ಎಲ್ಲ ಸರಿ ಇರುವ ನಾವುಗಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೂ ಅನೇಕ ಉದಾಹರಣೆಗಳಿವೆ. ಇವನ್ನು ನಾವು ಸ್ಪೂರ್ತಿದಾಯಕರನ್ನಾಗಿ ತೆಗೆದುಕೊಳ್ಳಬೇಕು. ಪ್ರಯತ್ನಕ್ಕೆ ತಕ್ಕ ಪ್ರತಿಫ‌ಲ ಎಂಬ ಮಾತಿನಂತೆ ಸಾಧಕರ ಸಾಧನೆಯ ಹಾದಿಯನ್ನು ನೆನಪಿಸಿಕೊಂಡು ನಾವು ಕೂಡ ಪ್ರಯತ್ನಶೀಲರಾಗಿ ಧೈರ್ಯದಿಂದ ಮುನ್ನುಗೋಣ.

– ಮೇಘಾ ಡಿ. ಕಿರಿಮಂಜೇಶ್ವರ

Advertisement

ಬೆಂಗಳೂರು ವಿವಿ

Advertisement

Udayavani is now on Telegram. Click here to join our channel and stay updated with the latest news.

Next