Advertisement
ನೀನು ಸಾಧನೆ ಮಾಡಬೇಕು ಅಂದರೆ ಶಾಲೆಗೆ ಹೋಗಲೇಬೇಕು ಎನ್ನುವ ಮಾತುಗಳು. ಇಷ್ಟವೋ, ಕಷ್ಟವೋ ಆತ ಶಾಲೆಗೆ ಹೋಗಲೇಬೇಕು. ಅಲ್ಲಿ ಬೇರೆ ಯಾವುದೇ ಆಯ್ಕೆಗಳಿಲ್ಲದೆ ಶಾಲೆಗೆ ಹೋಗಬೇಕೆನ್ನುವ ಅನಿವಾರ್ಯತೆಯೊಂದು ಸೃಷ್ಟಿಯಾಗಿಬಿಟ್ಟಿತ್ತು.
Related Articles
Advertisement
ಅನಿವಾರ್ಯತೆಯ ಸಂದರ್ಭದಲ್ಲಿ ವ್ಯಕ್ತಿಯ ಮನಸ್ಸು ಎಷ್ಟು ಪ್ರಫುಲ್ಲವಾಗಿ ಪಾಲ್ಗೊಳ್ಳುತ್ತದೆ ಎನ್ನುವುದು ಕಾರ್ಯದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಪಂಕೈರ್ವಿನಾ ಸರೋ ಭಾತಿ ಸದಃ ಖಲಜನೈರ್ವಿನಾ
ಕಟುವಣೈìರ್ವಿನಾ ಕಾವ್ಯಂ ಮಾನಸಂ ವಿಷಯೈರ್ವಿನಾ
(ಕೆಸರಿಲ್ಲದ ಸರೋವರವೂ ಖಳರಿಲ್ಲದ ಸಭೆಯೂ ಒರಟಾದ ಅಕ್ಷರಗಳಿಲ್ಲದ ಕಾವ್ಯವೂ ಶೋಭಿಸುತ್ತದೆ. ವಿಷಯವಾಸನೆಗಳಿಲ್ಲದಿದ್ದಲ್ಲಿ ಮನಸ್ಸು ಶೋಭಿಸುತ್ತದೆ.) ಅನಿವಾರ್ಯತೆ ಒದಗಿತೆಂದು ಹಳಿದುಕೊಳ್ಳುತ್ತಾ ಬದುಕನ್ನು ಸವೆಸುವುದಕ್ಕೂ, ಭರದಿಂದ ಅಪ್ಪಿಕೊಂಡು ಅನಿವಾರ್ಯತೆಯನ್ನು ಎದುರಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ವ್ಯಕ್ತಿ ವಿವಿಧ ಮುಖಗಳನ್ನು ತೆರೆದುಕೊಳ್ಳುವಾಗ, ವಿವಿಧತೆಯನ್ನು ಅನುಸರಿಸುವುದೇ ಜೀವಿಸುವ ಕೌಶಲ್ಯ.
ಇಷ್ಟವನ್ನು ಬಿಟ್ಟು, ಬದುಕು ಒಡ್ಡುವ ಅನಿವಾರ್ಯತೆಗೆ ಜೀವ ಒಗ್ಗಲೇಬೇಕು. ಶಾಲೆಗೆ ಹೋಗುವ ಎಳೆಯ ಪೋರನಿಂದ ತೊಡಗಿ, ಪ್ರತಿಯೊಬ್ಬರಿಗೂ ಅಥವ ಪ್ರತಿಯೊಂದಕ್ಕೂ ತಮಗೆ ಒಪ್ಪುವಂತಹ ಅಂಶವಿದ್ದರೂ, ಇಲ್ಲದಿದ್ದರೂ ಸಂದರ್ಭಗಳಿಗನುಗುಣವಾಗಿ ಸ್ಪಂದಿಸುವಂತೆ ಮನಸ್ಸು ಮಾಗಬೇಕು.
ಅನಿವಾರ್ಯ ಎಷ್ಟೇ ಆತಂಕಕಾರಿಯಾದರೂ, ಅದೇ ಆದ್ಯತೆಯಾಗಿರುವಾಗ ಅನಿರೀಕ್ಷಿತ ತಿರುವುಗಳನ್ನು ಎದುರಿಸುವ ಛಲವಿರಬೇಕು. ಅನಿವಾರ್ಯವೆಂದು ನಮ್ಮ ಸಿದ್ಧಾಂತವನ್ನು ಬಿಟ್ಟುಬಿಡುತ್ತೇವೆ ಎಂದರ್ಥವಲ್ಲ, ಸಂದರ್ಭಗನುಗುಣವಾಗಿ ಸಿದ್ಧಾಂತದಲ್ಲೂ ಮಾರ್ಪಾಡಗುತ್ತದೆ ಎಂದರ್ಥ. ಹಳೆಯ ದಿನಗಳ ಜೊತೆಗೆ ಹೊಸ ದಿನಗಳ ಹೊಸ ಅನುಭವಗಳು ಸೇರಿ ರಸಪಾಕವಾದಾಗ ಬದುಕು ಬೆಳಗುತ್ತದೆ.
– ಪಂಚಮಿ ಬಾಕಿಲಪದವು
ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು