Advertisement
ಚಿತ್ರ ಬರೆಯುವ ಚಿತ್ರಗಾರನೊಬ್ಬ ಹಲವು ಬಗೆಯ ಚಿತ್ರಗಳನ್ನು ಬರೆದು ಪ್ರಸಿದ್ದಿಯಾಗಬೇಕೆಂಬ ಮಹದಾಸೆ ಹೊಂದಿದ್ದ. ಪ್ರತಿಗಳಿಗೆಗೊಂದು ಚಿತ್ರ ಬರೆದು ರವಿವರ್ಮನಂತಾಗಬೇಕು, ಲಿಯನಾಡೋì ಡಾವಿಂಚಿಯಂತಾಗಬೇಕು ಎಂದೆಲ್ಲ ಕನಸುಗಳನು ಹೊಂದಿ ಬರೆಯುತ್ತಲೆ ಇದ್ದ ಆದರೆ ಬರೆಯುವ ಚಿತ್ರಗಳಲ್ಲಿ ಒಂದು ಕಲ್ಪನೆಬೇಕು ಜತೆಗೆ ಆ ಚಿತ್ರ ಕಥೆ ಹೇಳಬೇಕು. ಹೀಗಿರುವಾಗ ಚಿತ್ರ ಪ್ರದರ್ಶನದಲ್ಲಿ ಈತನ ಚಿತ್ರಗಳು ಹೆಚ್ಚಾಗಿ ಮಾರಾಟವಾಗಲಿಲ್ಲ. ಇದನ್ನು ಗಮನಿಸಿದ ಇನ್ನೊಬ್ಬ ಅನುಭವಿಕ ಚಿತ್ರಗಾರ ತರುಣ ಚಿತ್ರಗಾರನನ್ನು ಹುಡುಕಿಕೊಂಡು ಹೊರಟ. ವನದಲ್ಲಿ ಚಿಂತಿಸುತ್ತ ಕುಳಿತ ಇತನನ್ನು ಆತ ಹೀಗೆ ಹೇಳಿದ ನೋಡು ನಿನ್ನಲ್ಲಿ ಸೃಜಿಸುವ ಸಾಮರ್ಥ್ಯವಿದೆ. ಆದರೆ ಅದನ್ನು ನಿಧಾನವಾಗಿ ಯೋಚಿಸಿ ಸೃಜಿಸು ಅಂದಾಗ ಅದು ಯಶಸ್ಸು ಪಡೆಯುತ್ತದೆ ಎಂದು ಬೆನ್ನು ತಟ್ಟಿದ. ತರುಣ ಚಿತ್ರಗಾರ ಅವನಂತೆ ನಡೆದು ಮುಂದೆ ದೊಡ್ಡ ಚಿತ್ರಗಾರನಾದ. ಹೀಗೆ ಜೀವನದಲ್ಲಿ ಅವಸರಿಸಿದರೆ ಏನೇನು ಆಗಲು ಸಾಧ್ಯವಿಲ್ಲ. ನಿಧಾನಿಸಿ ಯೋಚಿಸಬೇಕು ಹಾಗೂ ಪ್ರತಿಯೊಂದನ್ನು ಗಮನಿಸಿ ಕಾರ್ಯಪ್ರವೃತ್ತರಾಗಬೇಕು ಅಂದಾಗ ಮಾತ್ರ ಎಲ್ಲವೂ ಸಾಧ್ಯ.
Related Articles
Advertisement