Advertisement
ಇಸ್ರೋದ ಈ ಸಾಧನೆಯಿಂದ ಮೊದಲ ಬಾರಿಗೆ ದಕ್ಷಿಣ ಧ್ರುವದಲ್ಲಿ ಇಳಿಸಿದ ಮೊದಲ ಗಗನನೌಕೆ ಭಾರತ ದೇಶದ್ದು ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಚಂದ್ರನ ಮೇಲೆ ನೌಕೆ ಇಳಿಸಿದ ನಾಲ್ಕನೇ ದೇಶ ಎಂಬ ಹಿರಿಮೆಗೆ ಸಪ್ತಾಹದ ಗರಿಮೆ ತೋರಿಸಿದೆ ಭಾರತ ದೇಶ. ಇದುವರೆಗೆ ಅಮೆರಿಕಾ, ರಷ್ಯಾ ಮತ್ತು ಚೀನಾ ಈ ಸಾಧನೆಯನ್ನು ಮಾಡಿದ್ದವು. ಇಸ್ರೋ ಶಶಿಭೂಷಣಪ್ರಾಯ ಸಾಧನೆ ಎಂದರು ತಪ್ಪಾಗಲಾರದು.
Related Articles
Advertisement
ಚಂದ್ರನ ಮೇಲೆ ಇಳಿದಿರುವ ಪ್ರಜ್ಞಾನ್ ರೋವರ್ ಭೂಮಿಗೆ ರವಾನಿಸಿಕೊಡುವ ಚಂದ್ರನ ಮೇಲಿರುವ ತಾಪಮಾನ, ಛಾಯಾಚಿತ್ರ, ಮಣ್ಣಿನ ಮಾದರಿ, ಚಿತ್ರಣವನ್ನು, ವಿಡಿಯೋ ಮಹತ್ವದ ಮಾಹಿತಿಗಳು ಲಭ್ಯವಾಗುತ್ತಿದೆ. ಚಂದ್ರನ ಮೇಲೆ ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್ ಬಗ್ಗೆ ಇಡೀ ಭಾರತವೇ ಹೆಮ್ಮೆ ಪಡುವಂತಹ ವಿಷಯ. ಚಂದ್ರಯಾನ-3 ಭಾರತದ ಆಸ್ಟ್ರಲ್ ಭರವಸೆ ಮತ್ತು ಅನ್ವೇಷಣೆಯ ಸಂಕೇತವಾಗಿ ಪ್ರಕಾಶಮಾನವಾಗಿ ಹೊಳೆಯುತ್ತದೆ. ಚಂದ್ರಯಾನ 3 ವಿಜಯೋತ್ಸವದ ನೆನಪಿಗಾಗಿ ಪಿಎಂ ಮೋದಿ ಘೋಷಿಸಿದಂತೆ ಪ್ರತಿ ವರ್ಷ ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತದೆ.
ಸಂತೋಷ ಕಾಖಂಡಕಿ
ಬಾದಾಮಿ