Advertisement
ಇದೊಂದು ಸೈಕಾಲಾಜಿಕಲ್ ಥ್ರಿಲ್ಲಿಂಗ್ ಫಿಲಂ ಆದ ಕಾರಣ ಥಿಯೇಟರ್‌ಗಳಲ್ಲಿ ಜನರ ಸಂಖ್ಯೆಗಳಿಗೆ ಕೊರತೆ ಇರಲಿಲ್ಲ.
Related Articles
Advertisement
ಗಿಫ್ಟ್ ಬಾಕ್ಸೊಂದರಲ್ಲಿ ಗೊಂಬೆಯ ತಲೆಯನ್ನಿಟ್ಟು ಅದರಲ್ಲಿ ಆಟವಾಡಿಸೋ ವಿಲನ್ ಪಾತ್ರ ವೀಕ್ಷಕರನ್ನು ದಿಗ್ಭ್ರಮೆಗೊಳಿಸುತ್ತದೆ. ಒಂದೊಂದಾಗಿ ಅಪಹರಣಕ್ಕೊಳಗಾಗಿ ಕಣ್ಮರೆಯಾಗುವ ಹರೆಯದ ಹುಡುಗಿಯರು ಕೊನೆಗೆ ಉಸಿರು ನಿಲ್ಲಿಸೋ ರೀತಿಯಲ್ಲಿ ಕಾಣಸಿಗುತ್ತಾರೆ.
ಈ ಮಧ್ಯೆ ನಟ ಪೊಲೀಸ್ ಅಧಿಕಾರಿಯ ಪಾತ್ರಧಾರಿಯಾಗಿ ಈ ಸೈಕೋ ವಿಲನ್‌ನನ್ನು ಹುಡುಕಾಡಲು ಚಡಪಡಿಸುವ ಸಂದರ್ಭ ಉತ್ತಮ ರೀತಿಯಲ್ಲಿ ಚಿತ್ರಿತವಾಗಿದೆ. ಕೆಲವು ಭಾವನೆಗಳನ್ನು ಕಣ್ಣೀರಿನ ಮೂಲಕ ವೀಕ್ಷಕರಿಗೆ ಬಹಳ ಹತ್ತಿರವೆನಿಸುವಂತೆ ತೋರ್ಪಡಿಸಲಾಗಿದೆ.
ಹುಡುಗಿಯರ ಅಪಹರಣದ ಹಿಂದೆ ಅಡಗಿರುವ ಕರಾಳ ಮುಖ ಹಾಗೂ ಅದರ ಹುಡುಕಾಟದಲ್ಲಿ ತೊಡಗಿದಾಗ ದೊರೆತ ಕೆಲವು ಸಾಕ್ಷಿಗಳು ಸಿನೆಮಾವನ್ನು ಮತ್ತಷ್ಟೂ ಕೌತುಕದೆಡೆಗೆ ದೂಡುತ್ತದೆ. ಕ್ರಿಸ್ಟೋಪರ್ ನ ನಿಜ ಜೀವನದಲ್ಲಿ ಎದುರಾಗುವ ನೈಜ ಘಟನೆಗಳನ್ನು, ಅದಕ್ಕೆ ಅನುಸಾರವಾಗಿ ಹೊಂದಿಸಿಕೊಂಡು ಹೋಗುವ ಕೆಲವು ದೃಶ್ಯಗಳು ವಿಭಿನ್ನ ರೀತಿಯಲ್ಲಿ ಕಂಡುಬರುತ್ತವೆೆ. ಬದುಕು ನಡೆಸಿಕೊಂಡು ಹೋಗುವ ರೀತಿ ಹಾಗೂ ಘಟನೆಯೊಂದು ಮನಸ್ಸಿನ ಮೇಲೆ ಪರಿಣಾಮ ಬೀರಿ ಅದು ದ್ವೇಷದ ಹಾದಿಯನ್ನು ಹಿಡಿಯುತ್ತದೆ.
ಈ ಸಂದರ್ಭ ನಿರ್ದೇಶಕನ ಸೃಜನಶೀಲತೆ ಹಾಗೂ ಕೆಮರಮೆನ್‌ನ ಕೈ ಚಳಕ ಅತ್ಯುತ್ತಮವಾಗಿ ಕೆಲಸಮಾಡಿದೆ. ಸಿನೆಮಾ ವೀಕ್ಷಕನನ್ನು ಎಲ್ಲೂ ನಿರಾಸೆಗೊಳಿಸದೇ ಅವನನ್ನೂ ತನ್ನೊಂದಿಗೆ ಕರೆದುಕೊಂಡು ಹೋಗುತ್ತದೆ. ಚಿತ್ರ ತಂಡದ ಕೆಲಸ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ.
ಎಲ್ಲರ ಮನಸ್ಸು ಒಂದೇ ರೀತಿ ಇರುವುದಿಲ್ಲ. ವಿಭಿನ್ನ ಭಾವನೆಗಳಿಗೆ ತಕ್ಕಂತೆ ಬದಲಾಗುತ್ತಾ ಇರುತ್ತದೆ. ಇಲ್ಲಿ ಒಬ್ಬ ಮನುಷ್ಯ ಇನ್ನೊಂದು ಮುಗ್ಧ ಜೀವವನ್ನು ಹೀನಾಯವಾಗಿ ಕೊಲ್ಲುವ ರೀತಿ ಮನುಷ್ಯನ ಭಾವನೆಗಳು ಹೀಗೂ ತಿರುವನ್ನು ಪಡೆದುಕೊಳ್ಳುತ್ತದೆಯೇಎಂಬುದಕ್ಕೆ ಸಾಕ್ಷಿಯಾಗಿದೆ.
– ಲಿಖಿತಾ ಗುಡ್ಡೆಮನೆ, ಪ್ರಥಮ ಎಂಸಿಜೆ, ವಿವೇಕಾನಂದ ಕಾಲೇಜು ಪುತ್ತೂರು