Advertisement
ಎರಡು ಮಹಾಯುದ್ದಗಳಿಂದಾಗಿ 1945ರ ಅನಂತರ ಜಗತ್ತು ರಾಜಕೀಯವಾಗಿ, ಸೈದ್ಧಾಂತಿಕವಾಗಿ ಎರಡು ಭಾಗಗಳಾಗಿ ವಿಭಜನೆಯಾಯಿತು. ಒಂದು ಭಾಗ ಅಮೆರಿಕ ನೇತೃತ್ವದಲ್ಲಿ ಬಂಡವಾಳಶಾಹಿ ರಾಷ್ಟ್ರಗಳ ಬಣವಾದರೆ, ಇನ್ನೊಂದು ಭಾಗ ಕಮ್ಯೂನಿಸ್ಟ್ ಸಿದ್ಧಾಂತದ ಸೋವಿಯತ್ ಒಕ್ಕೂಟದ ಬಣಗಳಾಗಿವೆ. ಈ ವಿಭಜನೆ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವಿನ ಶೀತಲ ಸಮರಕ್ಕೆ ನಾಂದಿಯಾಯಿತು.
Related Articles
Advertisement
ಏರಿಯಾ – 51ರ ಕೇಂದ್ರಭಾಗದಲ್ಲಿ ಬೃಹತ್ತಾದ ಒಂದು ರಹಸ್ಯ ಸೇನಾ ವಿಮಾನ ನಿಲ್ದಾಣವಿದ್ದು ಮತ್ತು ಪ್ರಾಯೋಗಿಕ ವಿಮಾನಗಳು ಮತ್ತು ಶಸ್ತ್ರಾಸ್ತ್ರಗಳ ಅಭಿವೃದ್ಧಿ ಹಾಗೂ ಪರೀಕ್ಷಾ ಕಾರ್ಯಗಳಿಗೆ ಬೆಂಬಲ ನೀಡುವುದು ಈ ನೆಲೆಯ ಪ್ರಾಥಮಿಕ ಉದ್ದೇಶವಾಗಿತ್ತು. ಏರಿಯಾ-51 ಪ್ರದೇಶವನ್ನು ಇನ್ನೂ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ, ಅವುಗಳೆಂದರೆ ಡ್ರೀಮ್‌ಲ್ಯಾಂಡ್, ಪ್ಯಾರಡೈಸ್ ರಾಂಚ್, ಹೋಮ್ ಬೇಸ್, ವಾಟರ್‌ಟೌನ್ ಸ್ಟ್ರಿಪ್, ಗ್ರೂಮ್ ಲೇಕ್, ಹೋಮ್ ಏರ್‌ಪೋರ್ಟ್ ಎನ್ನುವುದು ಇದರ ತೀರಾ ಇತ್ತೀಚಿನ ಹೆಸರು ಮತ್ತು ಈ ಸ್ಥಳಕ್ಕೆ ಇತ್ತೀಚಿನವರೆಗು ನಾಗರಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಅಮೆರಿಕ ತನ್ನ ರಹಸ್ಯ ಮಿಲಿಟರಿ ಸಂಶೋಧನೆಯನ್ನು ಕಾರ್ಯಗತಗೊಳಿಸಲು ಮತ್ತು ಇದರ ಸುಳಿವು ಸೋವಿಯತ್ ಒಕ್ಕೂಟಕ್ಕೆ ತಿಳಿಯಬಾರದೆಂಬ ಉದ್ದೇಶದಿಂದ ಏರಿಯಾ 51 ನ್ನು ಅನ್ಯಗ್ರಹ ಜೀವಿಗಳ ಲ್ಯಾಂಡಿಗ್ ಬೇಸ್ ಎಂದೂ ಮತ್ತು ಅನೇಕ ಅನ್ಯಗ್ರಹ ಜೀವಿಗಳು ಈ ಪ್ರದೇಶಕ್ಕೆ ಹಾರುವ ತಟ್ಟೆಗಳಲ್ಲಿ ಬರುತ್ತವೆಂದೂ , ಕೃತಕವಾಗಿ ಸೃಷ್ಟಿಸಲ್ಪಟ್ಟ ಹಾರುವ ತಟ್ಟೆಗಳನ್ನು , ಅನ್ಯಗ್ರಹ ಜೀವಿಗಳನ್ನು ಹೋಲುವ ಜೀವಿಗಳನ್ನು ಅಂದಿನ ಸಮಯದಲ್ಲಿದ್ದ ಮಾದ್ಯಮಗಳ ಸಹಾಯದಿಂದ ಇಡಿ ಜಗತ್ತು ಅನ್ಯಗ್ರಹ ಜೀವಿಗಳ ಇರುವಿಕೆಯನ್ನು ನಂಬುವಂತೆ ಮಾಡುವಲ್ಲಿ ಅಮೆರಿಕ ಯಶಸ್ವಿಯಾಗಿತ್ತು.
ಸೋವಿಯತ್ ಒಕ್ಕೂಟದ ಮಾಹಿತಿಯ ಪ್ರಕಾರ ಸೋವಿಯತ್ ಒಕ್ಕೂಟದ ಮಿಗ್ -21 ಯುದ್ದ ವಿಮಾನವನ್ನು ಇಸ್ರೇಲ್‌ನ ಸಹಾಯದಿಂದ ಇರಾಕಿನಿಂದ ಅಪಹರಿಸಿ ಇದೇ ಏರಿಯಾ- 51ರಲ್ಲಿ ಅದರ ತಂತ್ರಜ್ಞಾನವನ್ನು ಅಮೆರಿಕ ತಿಳಿದುಕೊಂಡು ತನ್ನ ಹೊಸ ಯುದ್ದ ವಿಮಾನಗಳನ್ನು ಆವಿಷ್ಕಾರ ಮಾಡುವಲ್ಲಿ ಸಫಲವಾಯಿತೆಂದು ಹೇಳಲಾಗುತ್ತದೆ.
ಅಮೆರಿಕ ತನ್ನ ಗುಪ್ತ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಅನ್ಯಗ್ರಹ ಜೀವಿಗಳ ಸಿದ್ಧಾಂತವನ್ನು ಹುಟ್ಟು ಹಾಕಿ ಇಡಿ ಜಗತ್ತು ಭ್ರಮೆಯಲ್ಲಿ ಬದುಕುವಂತೆ ಮಾಡಿತ್ತು ಮತ್ತು ತನ್ನ ಈ ಕಾರ್ಯ ಸಾಧನೆಗಾಗಿ ಏರಿಯಾ51 ನ್ನು ಆಯ್ದುಕೊಂಡು ಇಲ್ಲಿಗೆ ನಾಗರಿಕರನ್ನು ನಿರ್ಬಂಧಿಸಿ ಅಮೆರಿಕದ ಅಧ್ಯಕ್ಷರು, ಉನ್ನತ ಅಧಿಕಾರಗಳು, ಸಿಐಎನ ಅಧಿಕಾರಿಗಳಿಗೆ ಈ ಇಲ್ಲಿ ಪ್ರದೇಶ ದೊರೆಯವ ವ್ಯವಸ್ಥೆ ಮಾಡಿ ಈ ಸ್ಥಳವನ್ನು ರಹ್ಯಸವಾಗಿಟ್ಟಿತ್ತು. ಮಾಹಿತಿಯ ಪ್ರಕಾರ ಅಮೆರಿಕದ 928 ಅಣ್ವಸ್ತ್ರ ಪರೀಕ್ಷೆಗಳಲ್ಲಿ 729 ಪರೀಕ್ಷೆಗಳನ್ನು ಈ ಪ್ರದೇಶದಲ್ಲಿ ನಡೆಸಲಾಗಿದೆ ಎನ್ನಲಾಗುತ್ತದೆ.
ರಾಸುಮ ಭಟ್
ಕುವೆಂಪು ವಿವಿ, ಚಿಕ್ಕಮಗಳೂರು