Advertisement
ವಸ್ತುವಿನ ಉಪಯೋಗ ತಿಳಿಯದೆಯೇ ಅದು ಒಬ್ಬನ ಕೈಯಲ್ಲಿದೆ ಎಂದರೆ ಆ ವಸ್ತು ತನ್ನ ಬೆಲೆಯನ್ನು ಕಳೆದುಕೊಂಡಂತೆಯೇ ಸರಿ. ಆದರೆ ವೈಜ್ಞಾನಿಕಲೋಕದಲ್ಲಿ ಈ ಗಾದೆ ಮಾತಿಗೆ ಬೇರೆಯದೇ ಅರ್ಥವನ್ನು ಕಲ್ಪಿಸ ಬಹುದಾಗಿದೆ. ಹೇಗೆಂದರೆ ಔಷಧಲೋಕಕ್ಕೆ ಇಂದು ಮಂಗನ ಕೊಡುಗೆ ಅಪಾರವಾಗಿದೆ. ಸಂಶೋಧನಾಕಾರರ ಪ್ರಕಾರ ಇಂದು “ಔಷಧೀಯ ಸಸ್ಯಗಳು’ ಮಂಗನ ಕೈಯಲ್ಲಿರುವ ಮಾಣಿಕ್ಯವೇ ಆಗಿದೆ!
Related Articles
Advertisement
ಹೀಗಾಗಿ ಇದನ್ನು ಮಂಗಗಳು ಸೇವಿಸುವುದು. ಹಾಗೆಯೇ ಒಂದು ಜಾತಿಗೆ ಸೇರಿದ ಮಂಗ ಕಾಳುಮೆಣಸಿನ ಎಲೆಯನ್ನು ಕೀಟ ನಿವಾರಕವಾಗಿ ಉಪಯೋಗಿಸುತ್ತದೆ. ಈ ಮಂಗವು ಎಲೆಯನ್ನು ಮುಖದ ತುಂಬಾ ಉಜ್ಜಿಕೊಳ್ಳುವುದರಿಂದ ಕೀಟಗಳಿಂದ ಮುಕ್ತಿ ಪಡೆಯುತ್ತದೆ. ಮಾತ್ರವಲ್ಲದೆ, ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾಗಳಿಂದ ತಗಲುವ ರೋಗಗಳಿಂದ ರಕ್ಷಣೆಯನ್ನು ಪಡೆಯುತ್ತದೆ ಎಂಬುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.
ಮಂಗಗಳಿಗೂ ಮಾನವನಿಗೂ ಬಹುತೇಕ ಸಾಮ್ಯತೆ ಇರುವುದರಿಂದ ಯಾವುದೇ ಔಷಧಿಯನ್ನು ಮಾನವನಿಗೆ ಪ್ರಯೋಗಿಸುವ ಮುನ್ನ ಮಂಗಗಳ ಮೇಲೆ ಮೊದಲು ಪ್ರಯೋಗಿಸುತ್ತಾರೆ. ಅದೇ ರೀತಿ ನಿಸರ್ಗದಲ್ಲಿ ಮಂಗಗಳ ವರ್ತನೆ, ಅವುಗಳ ಆಹಾರ ಪದ್ಧತಿ, ಔಷಧೀಯ ಸಸ್ಯಗಳ ಸೇವನೆ ಹೀಗೆ ಹಲವಾರು ಅಂಶಗಳನ್ನು ಗಮನದಲ್ಲಿಟ್ಟು ಅಧ್ಯಯನವನ್ನು ಮಾಡುತ್ತಾರೆ. ಇದೇ ಕಾರಣದಿಂದ ರಂಗೂಟಾನ್, ಚಿಂಪಾಂಜಿ ಮೊದಲಾದ ಸಸ್ತನಿಗಳು ಇಂದು ಔಷಧೀಯಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿವೆ.
ಈ ಕುರಿತಂತೆ ಕೆ. ಎನ್. ಗಣೇಶಯ್ಯ ಅವರು “ಕಪಿಲಿಪಿಸಾರ’ ಎಂಬ ಕಾದಂಬರಿಯಲ್ಲಿ ವೈದ್ಯಕೀಯ ಸಂಶೋಧನೆಯಲ್ಲಿ ಮಂಗಗಳ ಪ್ರಾಮುಖ್ಯತೆಯ ಬಗೆಗಿನ ಅಚ್ಚರಿಯ ಸಂಗತಿಗಳನ್ನು ವಿವರಿಸಿದ್ದಾರೆ. ಸಮಸ್ಯೆ ಎಲ್ಲಿ ಉದ್ಭವವಾಗುತ್ತದೆಯೋ ಪರಿಹಾರವೂ ಕೂಡ ಅಲ್ಲಿ ಹುದುಗಿರುತ್ತದೆ. ಸಮಸ್ಯೆಯನ್ನು ಅರ್ಥೈಸಿಕೊಂಡು ಬಿಡಿಸಿದರೆ ಉತ್ತರದ ಬಾಗಿಲು ತಾನಾಗಿಯೇ ತೆರೆಯುತ್ತದೆ.
ಅದೇ ರೀತಿ ಕಾಯಿಲೆ ಎಲ್ಲಿ ಹುಟ್ಟುತ್ತದೆಯೋ ಅದಕ್ಕೆ ಔಷಧಿಯು ಕೂಡ ಅಲ್ಲಿಯೇ ಅಡಗಿರುತ್ತದೆ. ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತು ಕೂಡ ಇಂದು ಬೇರೆ ರೂಪವನ್ನು ತಾಳಿದೆ. ಪ್ರತಿಯೊಂದು ಸಸ್ಯಕ್ಕೂ ತನ್ನದೇ ಆದ ಔಷಧೀಯ ಗುಣವಿರುತ್ತದೆ. ಅದರ ಹುಟ್ಟಿಗೆ ಕಾರಣವಿರುತ್ತದೆ. ಆ ಕಾರಣವನ್ನು ಕಂಡುಕೊಂಡರೆ ಇಂದು ಪ್ರಕೃತಿಯಲ್ಲಿ ಜೀವನವು ಸುಗಮವಾಗಿ ಸಾಗುತ್ತದೆ.
-ಮಧುರ
ಕಾಂಚೋಡು