Advertisement
ಆದರೆ, ಸದ್ಯಕ್ಕೆ ಗಂಗೋತ್ರಿ, ಯಮುನೋತ್ರಿ, ಹೇಮಕುಂಡ್ ಸಾಹಿಬ್ ಮತ್ತು ಬದ್ರಿನಾಥ ಯಾತ್ರೆ ಮುಂದುವರಿದಿದೆ. ಮಳೆ ಹೆಚ್ಚುತ್ತಿರುವ ಕಾರಣ, ಉಖಿಮಠ, ಸೋನ್‌ಪ್ರಯಾಗ್, ಗೌರಿಕುಂಡ್ ತಲುಪಿರುವ ಯಾತ್ರಿಗಳಿಗೆ ಅಲ್ಲೇ ಇರುವಂತೆ ಸೂಚಿಸಲಾಗಿದೆ.
ಮಧ್ಯಪ್ರದೇಶದ ಮೈಹಾರ್ ಹಿಲ್‌ನಲ್ಲಿ ಮಾ ಶಾರದಾ ದೇವಿ ದೇಗುಲಕ್ಕೆಂದು ಬಂದಿದ್ದ 28 ಮಂದಿ ಯಾತ್ರಿಗಳು ರೋಪ್‌ವೇ ಟ್ರಾಲಿಯಲ್ಲಿ ಸಿಲುಕಿಕೊಂಡ ಘಟನೆ ಸೋಮವಾರ ನಡೆದಿದೆ. ಭಾರೀ ಗಾಳಿ ಮಳೆಯಿಂದಾಗಿ ರೋಪ್‌ವೇ ಸಂಚಾರ ಸ್ಥಗಿತಗೊಂಡ ಕಾರಣ, ಅವರು 40 ನಿಮಿಷಗಳ ಕಾಲ ಅಲ್ಲೇ ಬಾಕಿಯಾಗಿದ್ದು, ಕೊನೆಗೆ ರಕ್ಷಿಸಲಾಗಿದೆ.
Related Articles
ಭಾನುವಾರದಿಂದೀಚೆಗೆ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಕಡೆ ಮನೆಗಳಿಗೆ ಹಾನಿಯಾಗಿದ್ದು, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ, ಅಸ್ಸಾಂನಲ್ಲಿ ಮಳೆ-ಪ್ರವಾಹ ಪರಿಸ್ಥಿತಿ ಇಳಿಮುಖವಾಗಿದೆ. ಆದರೆ, ಸೋಮವಾರ ಮತ್ತೆ 6 ಮಂದಿ ಮೃತಪಟ್ಟಿದ್ದಾರೆ.
Advertisement