ಮಣಿಪಾಲ: ಮಾಹೆ ವಿಶ್ವ ವಿದ್ಯಾನಿಲಯದ ಸಾಂಸ್ಕೃತಿಕ ಸಮನ್ವಯ ಸಮಿತಿ ವತಿಯಿಂದ ವಾರ್ಷಿಕ ಸಾಂಸ್ಕೃತಿಕ ಉತ್ಸವ “ಉತ್ಸವ-23′ ಕೆಎಂಸಿ ಗ್ರೀನ್‌ನಲ್ಲಿ ನಡೆಯಿತು.
ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ ಉದ್ಘಾಟಿಸಿದರು. ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬÇÉಾಳ್, ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶಕಿ ಡಾ| ಗೀತಾ ಮಯ್ಯ, ಸಿಸಿಸಿ ಮಾಹೆಯ ಅಧ್ಯಕ್ಷೆ ಡಾ| ಶೋಭಾ ಕಾಮತ್, ಡಾ| ಸಂಬಿತ್, ಸಿಸಿಸಿ ಮಾಹೆಯ ಕಾರ್ಯದರ್ಶಿ ದಾಸ್ ಉಪಸ್ಥಿತರಿದ್ದರು.
ಉತ್ಸವವು ಮಾಹೆ ವಿ.ವಿ.ಗೆ ಅತಿದೊಡ್ಡ ಮತ್ತು ಮಹತ್ವವಾದ ಸಾಂಸ್ಕೃತಿಕ ಉತ್ಸವವಾಗಿದೆ. ವಿ.ವಿ.ಯ ಪ್ರತಿಭಾವಂತ ಮನಸ್ಸುಗಳಿಗೆ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದ್ದು ಈ ಬಾರಿ ದುಬಾೖ, ಜಮ್‌ಶೆಡ್‌ಪುರ, ಜೈಪುರ, ಸಿಕ್ಕಿಂ, ಬೆಂಗಳೂರು ಸೇರಿದಂತೆ ಮಣಿಪಾಲದ ಹೊರಗಿನ 5 ಕ್ಯಾಂಪಸ್‌ಗಳ ಗುಂಪುಗಳು ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಮಾಹೆ ವಿ.ವಿ. ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್ ಉಪಸ್ಥಿತರಿದ್ದರು.
ಮಾಹೆ ವಿ.ವಿ. ಸಿಸಿಸಿ ಅಧ್ಯಕ್ಷೆ ಡಾ| ಶೋಭಾ ಯು. ಕಾಮತ್ ಸ್ವಾಗತಿಸಿ, ಸಿಸಿಸಿ ಕಾರ್ಯದರ್ಶಿ ಡಾ| ಸಂಬಿತ್ ವಂದಿಸಿದರು.
Related Articles
ಪ್ರಶಸ್ತಿ ಪ್ರದಾನ, ಸಮಾರೋಪ
“ಉತ್ಸವ-23′ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ನಡೆಯಿತು. ಮಂಗಳೂರಿನ ಕೆಎಂಸಿ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆಯಿತು. ಮಂಗಳೂರಿನ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮತ್ತು ಕೆಎಂಸಿ ಮೊದಲ ರನ್ನರ್ ಅಪ್ ಆದರೆ, ಮಣಿಪಾಲ ತೃತೀಯ ಸ್ಥಾನ ಪಡೆಯಿತು.