ಯಾದಗಿರಿ: ತೊಗರಿ ಬೆಳೆಯಲ್ಲಿ ಆಧುನಿಕ ಕೃಷಿ ತಾಂತ್ರಿಕ ಪದ್ಧತಿ ಅನುಸರಿಸಬೇಕು ಎಂದು ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ| ಅಮರೇಶ ವೈ.ಎಸ್ ಹೇಳಿದರು.
ವಡಗೇರಾ ತಾಲೂಕಿನ ಗಡ್ಡೆಸೂಗೂರು ಗ್ರಾಮದಲ್ಲಿ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದಿಂದ ಹಮ್ಮಿಕೊಂಡ ತೊಗರಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೊಗರಿ ಬೆಳೆಯ ಉತ್ಪಾದಕತೆ ಹೆಚ್ಚಿಸಲು ಆಧುನಿಕ ಕೃಷಿ ತಾಂತ್ರಿಕತೆ ಬಳಸಬೇಕು. ಅಧಿಕ ಇಳುವರಿ ನೀಡುವ ತೊಗರಿ ಬೆಳೆಯ ತಳಿಗಳಾದ ಜಿ.ಆರ್.ಜಿ-811 ಬಿ.ಎಸ್. ಎಂ.ಆರ್, ಟಿ.ಎಸ್-3 ಆರ್ ಇತರೆ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ವಿಜ್ಞಾನಿ ಡಾ| ದೇವಿಂದ್ರ ಬೀರಲದಿನ್ನಿ ಅವರು ತೊಗರಿಯ ಮಾರುಕಟ್ಟೆ ಹಾಗೂ ಮೌಲ್ಯವರ್ದನೆ ಬಗ್ಗೆ ವಿವರಿಸಿದರು.
ರೈತರು ಸಂಘಟಿತರಾಗಿ ರೈತ ಉತ್ಪಾದಕರ ಸಂಘಗಳ ಎಫ್.ಪಿ.ಒ. ಸ್ಥಾಪನೆ ಮಾಡಿ ಅದರ ಮುಖಾಂತರ ರೈತರ ಲಾಭ ಪಡೆಯಬೇಕೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಉಮೇಶ ಭರಿಕರ್ ಮತ್ತು ವಡಗೇರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಗದೀಶ ಮಾತನಾಡಿದರು. ರೈತ ವೀರರೆಡ್ಡಿ ಚಿಗನೂರ್ ಗಡೆಸೂಗುರು, ಬಸವರಾಜಪ್ಪಗೌಡ ಮಾಲಿಪಾಟೀಲ್, ಚನ್ನಪ್ಪಗೌಡ ಪೋ.ಪಾಟಿಲ, ಮಲ್ಲನಗೌಡ ಪೋ. ಪಾಟೀಲ, ಭೀಮರಾಯ ದೋರನಹಳ್ಳಿ, ಶರಣಗೌಡ ಕುಮನೂರ, ಚನ್ನವೀರಯ್ಯ ಸಾಹುಕಾರ ಇದ್ದರು.