ಹಾಸ್ಯಗಾರ ಎಂದರೆ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸಿ ರಂಜಿಸುವಾತ. ಒಂದು ಕಾಮಿಕ್ ತಮಾಷೆಯ ವಿಷಯವನ್ನು ಹೇಳಬಹುದು; ಅದೇ ಹಾಸ್ಯಗಾರ ವಿಷಯಗಳನ್ನು ತಮಾಷೆಯಾಗಿ ಹೇಳುತ್ತಾನೆ. ಹಾಸ್ಯ ನವರಸಗಳಲ್ಲಿ ಒಂದು. ಈ ಪೈಕಿ ಮುಖಕ್ಕೆ ಬಣ್ಣ ಹಚ್ಚಿ ಮೂಖನಾಗಿ ಜಗವನ್ನೇ ನಗೆ ಲೋಕದಲ್ಲಿ ತೆಲಿಸಿದವರ ಸಾಲಿನಲ್ಲಿ ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್ ಅವರು ಅಗ್ರ ಗಣ್ಯರಾಗಿ ನಿಲ್ಲುತ್ತಾರೆ.
ಚಾಪ್ಲಿನ್ ಒಬ್ಬ ಬ್ರಿಟಿಷ ನಟ, ನಿರ್ದೇಶಕ, ಬರಹಗಾರ ಮತ್ತು ಸಂಯೋಜಕ. 1936ರಲ್ಲಿ ಚಾಪ್ಲಿನ್ ಸ್ವಂತ ನಿರ್ದೇಶನದಲ್ಲಿ ಮೂಡಿಬಂದ ಮೂಕಿ ಚಿತ್ರ ಮಾಡರ್ನ್ ಟೈಮ್ಸ್. ಮಹಾ ಆರ್ಥಿಕ ಕುಸಿತದ ಸಮಯದಲ್ಲಿ ನಿರ್ಮಿಸಿದ ಈ ಚಲನಚಿತ್ರವು ಅದೃಷ್ಟಹೀನ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರ ಕುರಿತಾಗಿದೆ. ಚಿತ್ರದಲ್ಲಿ ಚಾಪ್ಲಿನ್ ಕಾರ್ಖಾನೆಯಲ್ಲಿ ಆಧುನಿಕ ಉಪಕಾರಣಗಳನ್ನು ಬಳಸಲು ಪರದಾಡುವುದನ್ನು ಹಾಸ್ಯಾಸ್ಪದವಾಗಿ ತೋರಿಸಿದ್ದಾರೆ.
ಮುಂದೆ ಕಾರ್ಖನೆಯಲ್ಲಿ ಕೆಲವರು ಚಾಪ್ಲಿನ್ ಅವರನ್ನು ಕಮ್ಯುನಿಸ್ಟ್ ಚಳುವಳಿಗಾರ ಎಂದು ತಪ್ಪಾಗಿ ಗ್ರಹಿಸಿ ಬಂಧನಕ್ಕೆ ಒಳಪಡಿಸುವುದು. ಬಳಿಕ ಅವರು ಜೈಲ್ ಬ್ರೇಕ್ ಅನ್ನು ತಡೆದ ಹಿನ್ನೆಲೆ ಪೊಲೀಸರು ಬಿಡುಗಡೆ ಮಾಡುವುದು. ಅನಂತರ ಚಿಕ್ಕ ಹುಡುಗಿಯ ಪರಿಚಯವಾಗುವುದು. ಅವಳು ಕಳ್ಳತನ ನಡೆಸುವುದು. ಬಳಿಕ ಪೊಲೀಸರಿಂದ ತಪ್ಪಿಸಿಕೊಳ್ಳಲು ಇಬ್ಬರು ಮಾಡುವ ಸಾಹಸಗಳು ಇದೆಲ್ಲವನ್ನು ಸಂಭಾಷಣೆ ಇಲ್ಲದೇ ಹಾಸ್ಯಾಸ್ಪದವಾಗಿ ಚಾಪ್ಲಿನ್ ಅವರು ಪರದೆಯ ಮೇಲೆ ಬಿತ್ತರಿಸಿದ್ದಾರೆ.
ಚಾರ್ಲಿ ಚಾಪ್ಲಿನ್ ಅವರ ಹಲವು ಚಿತ್ರಗಳ ಪೈಕಿ ನಾನು ಮಾರ್ಡನ್ ಟೈಮ್ಸ್ ಚಲನಚಿತ್ರವನ್ನು ನೋಡಲು ಕಾರಣ ಇದು ಚಾಪ್ಲಿನ್ ಅವರ ಕೊನೆಯ ದೊಡ್ಡ ಮೂಕಿ ಚಿತ್ರವಾಗಿದೆ. ಮಾತಿನ ಮೂಲಕ ನಗಿಸುವ ಹಾಸ್ಯಗಾರರ ನಡುವೆ ಮೌನದÇÉೇ ನಗೆ ಹಂಚಿದ ಸಾಹುಕಾರಾ ಚಾರ್ಲಿ ಚಾಪ್ಲಿನ್. ಅವರು ತಮಗಾಗಿ ಅಲ್ಲದೆ ಜನರನ್ನು ನಗಿಸುವುದ್ದಕ್ಕಾಗಿ ಮೌನಿಯಾದವರು. ಜಗತ್ತು ಮರೆಯಲಾಗದ ಹಾಸ್ಯ ಪ್ರತಿಭೆ ಮತ್ತು ಹಾಸ್ಯ ಎಂದರೆ ನೆನಪಾಗುವ ವ್ಯಕ್ತಿಯೆಂದರೆ ಅವರು ಮಾತ್ರ. ಅವರ ಚಲನಚಿತ್ರವನ್ನು ನೋಡುತ್ತಾ ನಗುತ್ತಾ ನನ್ನೆಲ್ಲಾ ಬೇಜಾರನ್ನು ಮರೆತೆ ಹಾಗೆ ನೀವು ವೀಕ್ಷಿಸಿ ನಗುವಿನ ಸವಿಯನ್ನು ಸವಿಯಿರಿ.
-ರೇಣುಕಾ ಸಂಗಪ್ಪನವರ
ಸಂತ ಅಲೋಶಿಯಶ್ ಕಾಲೇಜು ಮಂಗಳೂರು