Advertisement

Drones: ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸಗಳ ಮೇಲ್ವಿಚಾರಣೆಗೆ ಡ್ರೋನ್‌ ಬಳಕೆ?

07:25 PM Aug 20, 2023 | Team Udayavani |

ನವದೆಹಲಿ: ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆಗೆ ಉತ್ತೇಜನ ನೀಡುತ್ತಿರುವ ಕೇಂದ್ರ ಸರ್ಕಾರ ಈಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂಎನ್‌ಆರ್‌ಇಜಿಎಸ್‌)ಯನ್ವಯ ನಡೆಯುವ ಕೆಲಸಗಳ ಮೇಲೆ ನಿಗಾ ವಹಿಸಲು ಡ್ರೋನ್‌ಗಳನ್ನು ಬಳಸುವಂಥ ಹೊಸ ನೀತಿಯನ್ನು ರೂಪಿಸಿದೆ.

Advertisement

ನಡೆಯುತ್ತಿರುವ ಕಾಮಗಾರಿಗಳ ಮೇಲ್ವಿಚಾರಣೆ, ಪೂರ್ಣಗೊಂಡ ಕೆಲಸಗಳ ಪರಿಶೀಲನೆ ಮತ್ತು ಪರಿಣಾಮಗಳ ಮೌಲ್ಯಮಾಪನಕ್ಕೆ ಡ್ರೋನ್‌ಗಳನ್ನು ಬಳಸಲು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಚಿಂತನೆ ನಡೆಸಿದೆ. ಅಲ್ಲದೇ, ಪ್ರತಿ ಜಿಲ್ಲೆಯಲ್ಲೂ ನೇಮಕಗೊಂಡಿರುವ ಒಂಬುಡ್ಸ್‌ಪರ್ಸನ್‌ಗಳೂ ಡ್ರೋನ್‌ಗಳನ್ನು ಬಳಸಿಕೊಂಡು ವರ್ಚುವಲ್‌ ಆಗಿಯೇ ಕೆಲಸಗಳನ್ನು ದೃಢೀಕರಿಸಿಕೊಂಡು, ಕುಂದುಕೊರತೆಗಳನ್ನು ಪರಿಹರಿಸಬಹುದಾಗಿದೆ.

ಇದಕ್ಕಾಗಿ ಯಾವುದೇ ಹೆಚ್ಚುವರಿ ಅನುದಾನ ಒದಗಿಸಲಾಗಿಲ್ಲ. ಡ್ರೋನ್‌ ತಂತ್ರಜ್ಞಾನ ಬಳಕೆಯಲ್ಲಿ ಪರಿಣತವಾಗಿರುವ ಏಜೆನ್ಸಿಗಳನ್ನು ಸಂಪರ್ಕಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಸುತ್ತೋಲೆ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next