Advertisement

‘ಕೃಷಿ ತಂತ್ರಜ್ಞಾನಗಳ ಸದುಪಯೋಗವಾಗಲಿ’

01:11 PM Jul 23, 2018 | |

ಮೂಲ್ಕಿ: ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಉಪಯೋಗಿಸಿ ಕೃಷಿ ಮಾಡಲು ರೈತರಿಗೆ ಸಹಕರಿಸಬೇಕು ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್‌ ಹೇಳಿದರು. ಅವರು ಮೂಲ್ಕಿ ದರ್ಗಾರೋಡ್‌ ನಲ್ಲಿರುವ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಕೊಡಮಾಡುವ ಭತ್ತದ ಕೃಷಿ ನಾಟಿ ಮಾಡುವ ಯಂತ್ರವನ್ನು ಕೃಷಿಕ ನವೀನ್‌ ಪ್ರಭು ಅವರಿಗೆ ಹಸ್ತಾಂತರಿಸಿ ಮಾತನಾಡಿದರು. ಸಂಘ ಸಂಸ್ಥೆಗಳಿಗೆ ಶೇ. 50 ಸಬ್ಸಿಡಿ 5 ಲಕ್ಷ ರೂ. ವರೆಗೆ ಸರಕಾರ ಈ ಯಂತ್ರವನ್ನು ಯಾವುದೇ ಸಹಕಾರ ಮನೋಭಾವನೆಯ ಸೇವಾ ಸಂಘಗಳು ಖರೀದಿ ಮಾಡಿ ರೈತರಿಗೆ ಬಾಡಿಗೆ ರೂಪದಲ್ಲಿ ಕೊಡುವುದಾದರೆ ಸರಕಾರದಿಂದ ಸಬ್ಸಿಡಿ ನೀಡಲಾಗುವುದು ಎಂದರು.

Advertisement

ಜಿಲ್ಲಾ ಪಂಚಾಯತ್‌ ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು, ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನೀಲ್‌ ಆಳ್ವ, ತಾಲೂಕು ಪಂಚಾಯತ್‌ ಸದ್ಯರಾದ ಶರತ್‌ ಕುಬೆವೂರು, ಜೀವನ್‌ ಪ್ರಕಾಶ್‌ ಕಾಮೆರೊಟ್ಟು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಬ್ದುಲ್‌ ಬಶೀರ್‌, ನ.ಪಂ. ಸದಸ್ಯ ಪುರುಷೋತ್ತಮ ರಾವ್‌, ಬಿಜೆಪಿ ಮುಖಂಡರಾದ ಸತ್ಯೇಂದ್ರ ಶೆಣೈ, ನರಸಿಂಹ ಪೂಜಾರಿ, ವಿಠ್ಠಲ ಎನ್‌. ಎಂ., ಪ್ರಾಣೇಶ್‌ ಹೆಜಮಾಡಿ, ಸಾಧು ಅಂಚನ್‌, ರಂಗನಾಥ ಶೆಟ್ಟಿ, ಸತೀಶ್‌ ಅಂಚನ್‌, ಉದಯ ಅಮೀನ್‌, ಹರೀಶ್‌ ಶೆಟ್ಟಿ, ಕಿಶೋರ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಇಲಾಖೆ ಕಚೇರಿ ಸ್ಥಳಾಂತರ
ಮೂಲ್ಕಿಯಲ್ಲಿರುವ ಕೃಷಿ ಸೇವಾ ಕೇಂದ್ರವನ್ನು ಕಿನ್ನಿಗೋಳಿಯತ್ತಾ ಸ್ಥಳಾಂತರಿಸುವ ಬದಲು ಹೆಚ್ಚುವರಿಯಾಗಿ ಕಿನ್ನಿಗೋಳಿಯಲ್ಲಿ ಇಲಾಖೆಯ ಕಚೇರಿ ತೆರೆಯುವಂತೆ ನೆರೆದ ಜನರು ಶಾಸಕರನ್ನು ಒತ್ತಾಯಿಸಿದರು. 

ತೋಟಗಾರಿಕಾ ಮಾಹಿತಿ ಶಿಬಿರ 
ಕೃಷಿಕರೋರ್ವರು ಶಾಸಕರಲ್ಲಿ ಮಾಡಿದ ಮನವಿಯಂತೆ ಮುಂದಿನ ತಿಂಗಳಿನಲ್ಲಿ ಮೂಲ್ಕಿಯಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಆಸಕ್ತ ತರಕಾರಿ ಮತ್ತು ಹಣ್ಣು ಹಂಪಲು ಕೃಷಿಕರಿಗಾಗಿ ವಿಶೇಷ ಶಿಬಿರವನ್ನು ನಡೆಸುವಂತೆ ಕೃಷಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next