Advertisement

ಉಸೇನ್‌ ಬೋಲ್ಟ್  ಲಾರೆಸ್‌ ವರ್ಷದ ಶ್ರೇಷ್ಠ  ಕ್ರೀಡಾತಾರೆ

03:45 AM Feb 16, 2017 | Harsha Rao |

ಮೊನಾಕೊ: ಖ್ಯಾತ ಫ‌ುಟ್ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲೆಬ್ರೋನ್‌ ಜೇಮ್ಸ್‌ ಅವರನ್ನು ಹಿಂದಕ್ಕಿದ ಸ್ಪ್ರಿಂಟ್‌ ಕಿಂಗ್‌ ಉಸೇನ್‌ ಬೋಲ್ಟ್ ಅವರು ಲಾರೆಸ್‌ ವರ್ಷದ ಶ್ರೇಷ್ಠ ಕ್ರೀಡಾ ತಾರೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರು ದಾಖಲೆ ಸಮಬಲದ ನಾಲ್ಕನೇ ಬಾರಿ ಈ ಪ್ರಶಸ್ತಿಯಿಂದ ಪುರಸ್ಕೃತ ಗೊಂಡಿದ್ದಾರೆ.

Advertisement

ಲಾರೆಸ್‌ ವಿಶ್ವ ಪ್ರಶಸ್ತಿ ಪ್ರಕಟ ವಾಗಿದ್ದು ಜಿಮ್ನಾಸ್ಟ್‌ ಸಿಮೋನ್‌ ಬೈಲ್ಸ್‌ ಶ್ರೇಷ್ಠ ವನಿತಾ ಕ್ರೀಡಾತಾರೆ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪ್ರಶಸ್ತಿ ಪುರಸ್ಕೃತರ ಎತ್ತರದಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಬೋಲ್ಟ್ 1.95 ಮೀ. ಎತ್ತರವಿದ್ದರೆ ಬೈಲ್ಸ್‌ ಕೇವಲ 1.45 ಮೀ. ಇದ್ದಾರೆ. ಆದರೆ ಅವರಿಬ್ಬರು ರಿಯೋ ಒಲಿಂಪಿಕ್ಸ್‌ನಲ್ಲಿ ಅದ್ಭುತ ಸಾಧನೆ ಮಾಡಿದ್ದರು.

ಪ್ರಶಸ್ತಿ ಸ್ವೀಕರಿಸಲು ಅವರಿಬ್ಬರು ವೇದಿಕೆಗೆ ಬಂದಾಗ ನೆರೆದ ಅಭಿಮಾನಿಗಳು ಪ್ರಚಂಡ ಕರತಾಡನವಿತ್ತರು. ಈ ಬಾರಿಯ ಲಾರೆಸ್‌ ಪ್ರಶಸ್ತಿ ಪ್ರದಾನ ಸಮಾರಂಭ 17 ವರ್ಷಗಳ ಹಿಂದೆ ಈ ಪ್ರಶಸ್ತಿ ಹುಟ್ಟಿದ ಸ್ಥಳದಲ್ಲಿ ನಡೆದಿತ್ತು.
2009, 2010 ಮತ್ತು 2013ರಲ್ಲಿ ಈ ಪ್ರಶಸ್ತಿಗೆ ಪಾತ್ರರಾಗಿದ್ದ ಬೋಲ್ಟ್ ನಾಲ್ಕನೇ ಬಾರಿ ಆಸ್ಕರ್‌ ಆಫ್ ನ್ಪೋರ್ಟ್ಸ್ ಪ್ರಶಸ್ತಿ ಪಡೆದು ಟೆನಿಸ್‌ ತಾರೆಯರಾದ ರೋಜರ್‌ ಫೆಡರರ್‌, ಸೆರೆನಾ ವಿಲಿಯಮ್ಸ್‌ ಮತ್ತು ಸಫ‌ìರ್‌ ಕೆಲ್ಲಿ ಸ್ಲೇಟರ್‌ ಸಾಲಿಗೆ ಸೇರಿಕೊಂಡರು. ಈ ಮೂವರು ನಾಲ್ಕು ಬಾರಿ ಲಾರೆಸ್‌ ಪ್ರಶಸ್ತಿ ವಿಜೇತರಾಗಿದ್ದರು.

ಪ್ರಖ್ಯಾತ ತಾರೆ ಮೈಕಲ್‌ ಜಾನ್ಸನ್‌ ಅವರಿಂದ ಬೋಲ್ಟ್ ಪ್ರಶಸ್ತಿ ಸ್ವೀಕರಿಸಿ ದರು. ಇತರ ವ್ಯಕ್ತಿಗಳ ದಾಖಲೆಯನ್ನು ಮುರಿಯಬೇಡಿ ಎಂಬ ಜಾನ್ಸನ್‌ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬೋಲ್ಟ್ ನಿಮ್ಮ ದಾಖಲೆ ಮುರಿದದ್ದಕ್ಕೆ ಕ್ಷಮಿಸಿಬಿಡಿ ಎಂದರು. ಅದ್ಭುತ ಪ್ರಶಸ್ತಿ ಪಡೆದಿರುವುದಕ್ಕೆ ಥ್ಯಾಂಕ್ಸ್‌. ಲಾರೆಸ್‌ ನನ್ನ ಪಾಲಿನ ಬಲುದೊಡ್ಡ ಪ್ರಶಸ್ತಿಯಾಗಿದೆ. ಇದು ನನ್ನ ನಾಲ್ಕನೇ ಪ್ರಶಸ್ತಿಯಾಗಿದ್ದು ಶ್ರೇಷ್ಠ ತಾರೆಯಾದ ಫೆಡರರ್‌ ಸಾಲಿಗೆ ಸೇರಿರುವುದು ಖುಷಿ ನೀಡಿದೆ. ಇದೊಂದು ವಿಶೇಷ ಅನುಭವ ಎಂದು ಬೋಲ್ಟ್ ತಿಳಿಸಿದರು.

ರಿಯೋ ಒಲಿಂಪಿಕ್ಸ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ ಒಲಿಂಪಿಕ್‌ ಜಿಮ್ನಾಸ್ಟಿಕ್ಸ್‌ ಚಾಂಪಿಯನ್‌ ಸಿಮೋನಾ ಬೈಲ್ಸ್‌ ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ರಿಯೋ ದಲ್ಲಿ ನಾಲ್ಕು ಚಿನ್ನ ಮತ್ತು ಒಂದು ಕಂಚು ಜಯಿಸಿದ್ದರು. ನನಗೆ ಮಾತನಾಡಲು ಮಾತು ಬರುತ್ತಿಲ್ಲ. ಪ್ರಿನ್ಸ್‌ ಆಲ್ಬರ್ಟ್‌ ಮತ್ತು ನಡಿಯಾ ಕೊಮನೆಸಿ ಅವ ರಿಂದ ಪ್ರಶಸ್ತಿ ಸ್ವೀಕರಿಸುವುದು ನನಗೆ ಸಿಕ್ಕಿದ ಗೌರವವೆಂದು ಭಾವಿಸುತ್ತೇನೆ ಎಂದು ಬೈಲ್ಸ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next